ಸ್ವಾಮಿ ವಿವೇಕಾನಂದರು, ‘ಜೀವನದಲ್ಲಿ ವಿಜ್ಞಾನ ಮತ್ತು ಧರ್ಮ ಇವುಗಳ ಯೋಗ್ಯ ಸಮನ್ವಯಯ ಇರುವುದು ಮಹತ್ವದ್ದಾಗಿದೆ ಎನ್ನುತ್ತಿದ್ದರು. ನಿಜವಾದ ಆನಂದವು ಸುಖದ ಸಾಧನಗಳನ್ನು ಭೋಗಿಸುವುದರಿಂದ ಸಿಗದೇ ಧರ್ಮಪಾಲನೆಯಿಂದ ಸಿಗುತ್ತದೆ. ಆದುದರಿಂದ ಧರ್ಮ ಪಾಲನೆ ಮತ್ತು ಧರ್ಮಕಾರ್ಯಗಳ ಸದುದ್ದೇಶದಿಂದ ವಿಜ್ಞಾನವನ್ನು ಉಪಯೋಗಿಸುವುದು ಯೋಗ್ಯವಾಗಿದೆ. ಇದಕ್ಕಾಗಿಯೇ ಈ ಗ್ರಂಥದಲ್ಲಿ ದೂರದರ್ಶನ, ಮೊಬೈಲ್ ಮತ್ತು ಇಂಟರ್‌ನೆಟ್‌ಗಳನ್ನು ಧರ್ಮ ರಾಷ್ಟ್ರಕಾರ್ಯಕ್ಕಾಗಿ ಬಳಸುವುದು ಸೂಕ್ತವಾಗಿದೆ. (ಆಧಾರ : ಸನಾತನ ನಿರ್ಮಿತ ಗ್ರಂಥ ಟಿ.ವಿ., ಮೊಬೈಲ್ ಮತ್ತು ಇಂಟರ್‌ನೆಟ್ ಇವುಗಳ ಹಾನಿ ತಡೆಗಟ್ಟಿ ಲಾಭ ಪಡೆಯಿರಿ !)