ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ವಿಡಿಯೊ ಕಾನ್ಫರೆನ್ಸಿಂಗ್’ ಮೂಲಕ ಅಲ್ಲ, ಅಯೋಧ್ಯೆಗೆ ಬಂದು ರಾಮಮಂದಿರದ ಭೂಮಿ ಪೂಜೆಯನ್ನು ಮಾಡಬೇಕು ! – ಸಾಧು-ಸಂತರ ಬೇಡಿಕೆ

ಅಯೋಧ್ಯೆ (ಉತ್ತರಪ್ರದೇಶ) – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ವಿಡಿಯೊ ಕಾನ್ಫರೆನ್ಸಿಂಗ್’ ಮೂಲಕ ಅಲ್ಲ, ಅಯೋಧ್ಯೆಗೆ ಬಂದು ರಾಮಮಂದಿರದ ನಿರ್ಮಾಣ ಕಾರ್ಯದ ಭೂಮಿ ಪೂಜೆಯನ್ನು ಮಾಡಬೇಕು, ಎಂದು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ ಹಾಗೂ ಸಾಧು-ಸಂತರು ಒತ್ತಾಯಿಸಿದ್ದಾರೆ.

 

ಅದಕ್ಕಾಗಿ ಪ್ರಧಾನಮಂತ್ರಿಯವರಿಗೆ ಪತ್ರವನ್ನೂ ಕಳುಹಿಸಲಾಗಿದೆ. ಸದ್ಯ ಕೊರೋನಾದ ಸಂಕಟದಿಂದಾಗಿ ಪ್ರಧಾಮಂತ್ರಿ ನರೇಂದ್ರ ಮೋದಿಯವರ ಅಯೋಧ್ಯೆಗೆ ಬರುವ ಆಯೋಜನೆ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಭೂಮಿಪೂಜೆಯ ದಿನಾಂಕ ನಿಗದಿ ಪಡಿಸಿಲ್ಲ.