ವಿದೇಶಿ ಮಹಿಳೆಯ ಹೊಟ್ಟೆಯಿಂದ ಹುಟ್ಟಿದ ವ್ಯಕ್ತಿ ದೇಶಭಕ್ತನಾಗಲು ಸಾಧ್ಯವಿಲ್ಲ ! – ಭಾಜಪದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕುರರಿಂದ ರಾಹುಲ್ ಗಾಂಧಿಯ ಮೇಲೆ ಟೀಕೆ

ಭೋಪಾಳ (ಮಧ್ಯಪ್ರದೇಶ) – ವಿದೇಶಿ ಮಹಿಳೆಯ ಹೊಟ್ಟೆಯಿಂದ ಹುಟ್ಟಿದ ವ್ಯಕ್ತಿ ದೇಶಭಕ್ತನಾಗಲು ಸಾಧ್ಯವಿಲ್ಲ. ಆಚಾರ್ಯ ಚಾಣಕ್ಯರು ‘ಕೇವಲ ಭೂಮಿ ಪುತ್ರರೇ ಸ್ವಂತ ಮಾತೃಭೂಮಿಯ ರಕ್ಷಣೆ ಮಾಡಲು ಸಾಧ್ಯ’, ಎಂದು ಹೇಳಿದ್ದಾರೆ ಎಂಬ ಮಾತುಗಳಲ್ಲಿ ಭಾಜಪದ ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಠಾಕುರವರು ರಾಹುಲ್ ಗಾಂಧಿಯ ಹೆಸರನ್ನು ಹೇಳದೇ ಅವರನ್ನು ಟೀಕಿಸಿದ್ದಾರೆ. ಇಲ್ಲಿ ನಡೆದ ಕಾರ್ಯಕರ್ತರೊಂದಿಗಿದ್ದ ಸಭೆಯ ನಂತರ ಅವರು ಮಾತನಾಡುತ್ತಿದ್ದರು.

೧. ಸಾಧ್ವಿ ಪ್ರಜ್ಞಾಸಿಂಗ್ ತಮ್ಮ ಮಾತನ್ನು ಮುಂದುವರೆಸುತ್ತಾ, ‘ಕಾಂಗ್ರೆಸ್‌ನಲ್ಲಿ ಸಭ್ಯತೆ ಇಲ್ಲ, ಸಂಸ್ಕಾರ ಇಲ್ಲ. ಎರಡು ದೇಶಗಳ ಪೌರತ್ವವಿರುವವರಿಂದ ನಾವು ದೇಶಭಕ್ತಿಯ ಅಪೇಕ್ಷೆ ಇಡಲು ಸಾಧ್ಯವಿಲ್ಲ’ ಎಂದು ಹೇಳಿದರು.

೨. ಸಾಧ್ವಿ ಪ್ರಜ್ಞಾಸಿಂಗ್ ಇವರ ಟೀಕೆಯ ನಂತರ ಮಧ್ಯಪ್ರದೇಶದ ಕಾಂಗ್ರೆಸ್‌ನ ವಕ್ತಾರರಾದ ಧನೋಪಿಯಾರವರು ‘ಪ್ರಜ್ಞಾಸಿಂಗ ಠಾಕೂರ ಇವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಭಾಜಪದ ನಾಯಕರು ಅವರ ಮೇಲೆ ಚಿಕಿತ್ಸೆಯನ್ನು ಮಾಡಬೇಕು’, ಎಂದು ಟೀಕಿಸಿದ್ದಾರೆ. (‘ಜಿಹಾದಿ ಭಯೋತ್ಪಾದಕ ಓಸಾಮಾ ಬಿನ್ ಲಾಡೆನ್‌ಗೆ ‘ಓಸಾಮಾಜಿ’ ಎಂದು ಹೇಳುವ ಕ್ರಾಂಗ್ರೆಸ್ ನಾಯಕರ ಮಾನಸಿಕ ಸಮತೋಲನ ಸರಿಯಾಗಿದೆ’, ಎಂದು ಕಾಂಗ್ರೆಸ್‌ನವರಿಗೆ ಅನ್ನಿಸುತ್ತದೆಯೇ ? – ಸಂಪಾದಕರು)