‘100 ಕೋಟಿ ಜನರು ದನದ ಮಾಂಸ ಬೆರೆಸಿದ ಲಡ್ಡೂಗಳನ್ನು ತಿಂದಿದ್ದೀರಿ, ಮಜಾ ಬಂತಾ ?’ – ಕಾಂಗ್ರೆಸ್ ಬೆಂಬಲಿಗ ಪಿಯೂಷ್ ಮಾನುಷ

ತಿರುಪತಿ ದೇವಸ್ಥಾನದ ಪ್ರಸಾದದ ಪ್ರಕರಣದಲ್ಲಿ ಹಿಂದೂಗಳ ಲೇವಡಿ ಮಾಡಿದ ಕಾಂಗ್ರೆಸ್ ಬೆಂಬಲಿಗ ಪಿಯೂಷ್ ಮಾನುಷ !

ನವದೆಹಲಿ – ತಿರುಪತಿ ದೇವಸ್ಥಾನದ ಪವಿತ್ರ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಕಂಡುಬಂದ ಹಿನ್ನೆಲೆಯಲ್ಲಿ ತಥಾಕಥಿತ ಕಾಂಗ್ರೆಸ್ ಬೆಂಬಲಿಗ ಪಿಯೂಷ್ ಮಾನುಷ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ ಹಿಂದೂಗಳ ಅಪಹಾಸ್ಯ ಮಾಡಿದ್ದಾರೆ.

ಪಿಯೂಷ ವಿಡಿಯೋದಲ್ಲಿ, ಇಷ್ಟು ದಿನ ನೀವು ಬೇರೆಯವರ ತಟ್ಟೆಗಳಲ್ಲಿ ‘ಅವರು ದನದ ಮಾಂಸ ತಿನ್ನುತ್ತಾರೋ ಇಲ್ಲವೋ’ ಎಂದು ನೋಡುತ್ತಿದ್ದಿರಿ. ನೀವು ಅವರ ಊಟದ ಡಬ್ಬಿಗಳನ್ನು ಪರಿಶೀಲಿಸಿದ್ದೀರಿ, ನೀವು ಅವರ ಫ್ರಿಜ್ ಪರಿಶೀಲಿಸಿದ್ದೀರಿ. ನೀವು ಅವರಿಗೆ ಹೊಡೆದಿದ್ದೀರಿ. ಇಲ್ಲಿಯವರೆಗೆ ಕನಿಷ್ಠ 100 ಕೋಟಿ ಜನರು ತಿರುಪತಿಗೆ ಹೋಗಿರಬೇಕು. ಅವರಿಗೆ ಲಡ್ಡು ಸಿಕ್ಕಿರಬಹುದು ಏನಾಯಿತು? ಈಗ ನಿಮಗೆ ಗೋಮಾಂಸ ಇಷ್ಟವಾಯಿತೇ ? ನಿಮಗೆ ಮಜಾ ಬಂತೇ? ನಿಮ್ಮ ಕೆಲಸ ಮುಗಿಯಿತು. ಕನಿಷ್ಟ ಪಕ್ಷ ಈಗಲಾದರೂ ಇತರರ ತಟ್ಟೆಗಳನ್ನು ನೋಡಬೇಡಿ. ನಿಮ್ಮ ಕೆಲಸ ಮಾಡಿರಿ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಅವರ ವಿರುದ್ಧ ಪೊಲೀಸರಲ್ಲಿ ಪ್ರಕರಣ ದಾಖಲಿಸಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಹಿಂದೂಗಳು ಪೊಲೀಸರನ್ನು ಒತ್ತಾಯಿಸಬೇಕು !