೫ ಪೊಲೀಸ್ ಹಾಗೂ ೪ ದಾಳಿಖೋರರು ಹತರಾದರು
ಕರಾಚಿ (ಪಾಕಿಸ್ತಾನ) – ಇಲ್ಲಿಯ ‘ಸ್ಟಾಕ್ ಎಕ್ಸೆಂಜ್’ ಮೇಲೆ (‘ಶೇರ್ ಮಾರುಕಟ್ಟೆ’ ಮೇಲೆ) ‘ಬಲುಚಿಸ್ತಾನ ಲಿಬರೇಶನ್ ಆರ್ಮಿ’ಯ ಸೈನಿಕರು ಮಾಡಿದ ದಾಳಿಯಲ್ಲಿ ಓರ್ವ ಪೊಲೀಸ್ ಉಪನಿರೀಕ್ಷಕರ ಸಹಿತ ೫ ಭದ್ರತಾರಕ್ಷಕರು ಮೃತಪಟ್ಟಿದ್ದು ದಾಳಿ ಮಾಡಿದ ೪ ಬಲುಚಿ ಸೈನಿಕರು ಹತರಾದರು. ಪಾಕಿಸ್ತಾನವು ಇದನ್ನು ‘ಭಯೋತ್ಪಾದನಾ ದಾಳಿ’ ಎಂದು ಹೇಳಿದೆ. ‘ಬಲುಚಿಸ್ತಾನ ಲಿಬರೇಶನ್ ಆರ್ಮಿ’ಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇದು ಪಾಕಿಸ್ತಾನದ ಬಲುಚಿಸ್ತಾನದಲ್ಲಿ ಸ್ವಾತಂತ್ರ್ಯಕ್ಕಾಗಿ ಸಂಘರ್ಷ ಮಾಡುತ್ತಿರುವ ಬಲುಚಿ ಜನರ ಸಶಸ್ತ್ರ ಸಂಘಟನೆಯಾಗಿದೆ. ಪಾಕಿಸ್ತಾನದಿಂದ ಬಲುಚಿ ಜನರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಈ ಸಂಘಟನೆಯು ವಿರೋಧಿಸುತ್ತದೆ.
ಬಲುಚಿ ಸೈನಿಕರು ‘ಸ್ಟಾಕ್ ಎಕ್ಸೆಂಜ್’ನ ಮುಖ್ಯ ಪ್ರವೇಶದ್ವಾರದ ಮೇಲೆ ‘ಗ್ರೆನೇಡ್’ ಮೂಲಕ ದಾಳಿ ಮಾಡಿದರು ನಂತರ ಗುಂಡು ಹಾರಿಸುತ್ತಾ ಕಟ್ಟಡದ ಒಳಗೆ ಪ್ರವೇಶಿಸಿದರು. ಈ ಸಮಯದಲ್ಲಿ ರಕ್ಷಣೆಗಾಗಿ ನೇಮಿಸಿದ್ದ ಪೊಲೀಸ ಹಾಗೂ ಸುರಕ್ಷಾ ರಕ್ಷಕರು ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಅವರು ಮೃತಪಟ್ಟರು. ದಾಳಿಯ ಸಮಯದಲ್ಲಿ ಕಟ್ಟಡದಲ್ಲಿ ಸಿಲುಕಿಕೊಂಡಿರುವ ಜನರನ್ನು ಹಿಂದಿನ ಬಾಗಿಲಿನಿಂದ ಹೊರ ತರಲಾಯಿತು. ಸೈನಿಕರೊಂದಿಗೆ ನಡೆದ ಚಕಮಕಿಯಲ್ಲಿ ಪೊಲೀಸರು ೪ ದಾಳಿಖೊರರನ್ನು ಹತ್ಯೆ ಮಾಡಿದರು. ಸದ್ಯ ಸುರಕ್ಷೆಯ ದೃಷ್ಟಿಯಿಂದ ಸಂಪೂರ್ಣ ಪರಿಸರವನ್ನು ‘ಸೀಲ್’ ಮಾಡಲಾಗಿದೆ.