ದೆಹಲಿ ಗಲಭೆಯ ಪ್ರಕರಣ ಜೆ.ಎನ್.ಯು.ನ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್‌ನ ಬಂಧನ

ದೆಹಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಆಗಿದ್ದ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಶೇಷ ಪೊಲೀಸ್ ಪಡೆಯು ಜೆ.ಎನ್.ಯು. ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ಉಮರ ಖಾಲಿದ್‌ನನ್ನು ಅಕ್ರಮ ಚಟುವಟಿ ಕಾಯ್ದೆಯ ಅಡಿಯಲ್ಲಿ (ಯ.ಎಪಿ.ಎ. ಯ ಅಡಿಯಲ್ಲಿ) ಬಂಧಿಸಿದ್ದಾರೆ. ಉಮರ ಖಾಲಿದನನ್ನು ವಿಚಾರಣೆಗಾಗಿ ಕರೆಯಲಾಗಿತ್ತು.

ಹಿಂದೂಗಳ ವಿರೋಧದ ನಂತರ ‘ಶ್ರೀರಾಮ ಚಿಕನ್ ಮಸಾಲಾ’ ಹೆಸರಿನ ಉತ್ಪನ್ನವನ್ನು ಮಾರಾಟ ಮಾಡುವ ಸಂಸ್ಥೆಯ ಮಾಲೀಕರಿಂದ ಕ್ಷಮಾಯಾಚನೆ

ಇಲ್ಲಿಯ ‘ಬಿಕಾನೆರ ಬ್ರಾಹ್ಮಣ ಸಮಾಜ’ವು ‘ಶ್ರೀರಾಮ’ ಹೆಸರಿನ ಚಿಕನ್ ಮಸಾಲಾವನ್ನು ನಿರ್ಮಿಸುವ ‘ಶ್ರೀರಾಮ ಇಂಡಸ್ಟ್ರೀ’ಯ ಮಾಲೀಕರನ್ನು ಸುತ್ತುವರಿದರು ಹಾಗೂ ಅವರಿಗೆ ಉತ್ಪನ್ನದ ಹೆಸರನ್ನು ಹಿಂಪಡೆಯುವಂತೆ ಮಾಡಿದರು. ಸುತ್ತುವರಿದಾಗ ಮಾಲೀಕನು ತನ್ನ ತಪ್ಪನ್ನು ಒಪ್ಪಿಕೊಂಡು ಈ ಹೆಸರಿನ ಪಾಕೀಟನ್ನು ಸುಟ್ಟುಹಾಕಿದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸತ್ಯಯುಗದಲ್ಲಿ ದಿನಪತ್ರಿಕೆಗಳು, ದೂರಚಿತ್ರವಾಹಿನಿ, ಜಾಲತಾಣ ಇತ್ಯಾದಿಗಳ ಅವಶ್ಯಕತೆ ಇರಲಿಲ್ಲ; ಏಕೆಂದರೆ ಯಾವುದೇ ಕೆಟ್ಟ ಸುದ್ದಿ ಇರಲಿಲ್ಲ, ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿದ್ದು ಆನಂದದಲ್ಲಿದ್ದರು.

ಸನಾತನ ಸಂಸ್ಥೆಯ ೫ ಫೇಸ್‌ಬುಕ್ ಪುಟಗಳು ಒಮ್ಮೆಲೆ ಬಂದ್

ಸಪ್ಟೆಂಬರ್ ೨ ರಾತ್ರಿ ೧೧.೫೭ ರಿಂದ ಸನಾತನ ಸಂಸ್ಥೆಯ ಫೇಸ್‌ಬುಕ್‌ನ ಅಧಿಕೃತ ‘ಸನಾತನ ಸಂಸ್ಥೆ, ‘ಸನಾತನ ಸಂಸ್ಥೆ ಆಂಗ್ಲ, ಸನಾತನದ ‘ಪ್ರೊಫೈಲ್ ಪೇಜ್, ಸನಾತನ ಸಂಸ್ಥೆ ಬೆಳಗಾವ ಹಾಗೂ SSKarnataka ಹೀಗೆ ಒಟ್ಟು ೫ ಪುಟಗಳು ಇದ್ದಕ್ಕಿದ್ದಂತೆ ಬಂದ್ ಆದವು. ಈ ಫೇಸ್‌ಬುಕ್ ಪುಟಗಳಿಂದ ನಿಯಮಿತವಾಗಿ ಧರ್ಮ ಶಾಸ್ತ್ರ, ಅಧ್ಯಾತ್ಮ, ಸಾಧನೆ ಇತ್ಯಾದಿ ವಿಷಯಗಳ ಬಗ್ಗೆ ಪೋಸ್ಟ್ ಮಾಡಲಾಗುತ್ತಿತ್ತು.

ಗಲಭೆಯ ಬಣ್ಣ

ಕುರಾನ್ ಪ್ರತಿಯನ್ನು ಸುಟ್ಟಿರುವುದನ್ನು ತಿಳಿದು ‘ಅಲ್ಲಾ-ಹು-ಅಕಬರ್ ಎಂದು ಘೋಷಣೆ ಕೂಗುತ್ತಾ ಅಲ್ಲಿ ನೆಲೆಸಿದ್ದ ನಿರಾಶ್ರಿತ ಮತಾಂಧರು ಗಲಭೆಯನ್ನು ಭುಗಿಲೆಬ್ಬಿಸಿ ಕಂಡ ಕಂಡಲ್ಲಿ ಬೆಂಕಿ ಹಚ್ಚತೊಡಗಿದರು. ಪೊಲೀಸರ ಮೇಲೆ ಕಲ್ಲು ತೂರಿದರು. ೩೦೦ಕ್ಕಿಂತ ಹೆಚ್ಚು ಮತಾಂಧರ ಗುಂಪು ಈ ಕೃತ್ಯವನ್ನು ಮಾಡಿತು. ರಸಮಸ್ ಪಾಲುಡಾನ್‌ರು ‘ನಾರ್ಡಿಕ್ ದೇಶಗಳ ಇಸ್ಲಾಮೀಕರಣ ಈ ವಿಷಯದ ಕುರಿತಾದ ಸಭೆಯಲ್ಲಿ ಪಾಲ್ಗೊಳ್ಳಲು ಬರುವವರಿದ್ದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ರಾಷ್ಟ್ರ-ಧರ್ಮಕ್ಕಾಗಿ ಕಾರ್ಯ ಮಾಡಿದರೆ ಏನೂ ಸಾಧ್ಯವಾಗುವುದಿಲ್ಲ, ಎಂಬುದು ಕಳೆದ ೭೨ ವರ್ಷಗಳಲ್ಲಿ ಅನೇಕ ಸಲ ಸಿದ್ಧವಾಗಿದೆ. ‘ಈಗ ಅವುಗಳೊಂದಿಗೆ ಆಧ್ಯಾತ್ಮಿಕ ಮಟ್ಟದಲ್ಲಿಯೂ ಕಾರ್ಯ ಮಾಡುವುದು ಅತ್ಯಗತ್ಯವಿದೆ, ಎಂಬುದನ್ನು ಎಲ್ಲರೂ ಗಮನದಲ್ಲಿಡುವ ಅವಶ್ಯಕವಿದೆ.

ಕಟ್ಟಡ ಕಾಮಗಾರಿ ಕ್ಷೇತ್ರದಲ್ಲಿನ ಸಾಧಕರು ಮತ್ತು ವಾಚಕರು, ಹಿತಚಿಂತಕರು, ಧರ್ಮಪ್ರೇಮಿಗಳಿಗೆ ಸತ್ಸೇವೆಯ ಅಮೂಲ್ಯ ಅವಕಾಶ !

ಕಟ್ಟಡ ಕಾಮಗಾರಿಯ ಪರಿವೀಕ್ಷಕರು (ಸೈಟ್ ಸುಪರವಿಝನ್), ಹಾಗೆಯೇ ಖ.ಅ.ಅ. ಡಿಝೈನ್ ಮಾಡುವುದು, ಇವುಗಳಿಗಾಗಿ ಪ್ರತ್ಯಕ್ಷ ಕಟ್ಟಡ ಕಾಮಗಾರಿಯ ಅನುಭವವಿರುವ ವಾಸ್ತುಶಿಲ್ಪ ಅಭಿಯಂತರರು (ಡಿಗ್ರಿ ಅಥವಾ ಡಿಪ್ಲೋಮಾ ಸಿವಿಲ್ ಇಂಜನಿಯರ್), ಹಾಗೆಯೇ ಯೋಜನೆ (ಪ್ರೊಜೆಕ್ಟ್) ವ್ಯವಸ್ಥಾಪಕರು (ಪ್ರೊಜೆಕ್ಟ್ ಮ್ಯಾನೇಜರ್) ಇವರ ಆವಶ್ಯಕತೆ ಇದೆ.

ಗೌರಿ ಲಂಕೇಶ್ ಪ್ರಕರಣದ ಆರೋಪಿಗಳಿಗೆ ಕೋರೋನಾದಿಂದ ಸುರಕ್ಷೆಯತ್ತ ದುರ್ಲಕ್ಷಿಸಿದ ಪ್ರಕರಣ

ಗೌರಿ ಲಂಕೇಶ ಹತ್ಯೆಯ ಆರೋಪದ ಮೇಲೆ ಮೈಸೂರಿನ ಜೈಲಿನಲ್ಲಿ ಇರಿಸಲಾದ ವಿಚಾರಣಾಧೀನ ಕೈದಿಗಳ ಸುರಕ್ಷತೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಶ್ರೀ. ಅಮೃತೇಶ ಎನ್. ಪಿ. ಮತ್ತು ವಕೀಲೆ ಸೌ. ದಿವ್ಯಾ ಇವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದರು.

ಭಾರತೀಯರೇ, ಚೀನಾದ ಅಪಪ್ರಚಾರದ ಯುದ್ಧದ ವಿರುದ್ಧ ಸನ್ನದ್ಧರಾಗಿ ಮತ್ತು ಕೃತಿಶೀಲರಾಗಿ ಚೀನಾಗೆ ಪಾಠ ಕಲಿಸಿ !

ಚೀನಾ ಸೈನಿಕರು ಮೊಳೆಗಳನ್ನು ಹೊಡೆದಿರುವ ಕೋಲುಗಳನ್ನು ಜೊತೆಗೆ ತಂದಿದ್ದರು. ಮೊದಲಿಗೆ  ಅವರು ಕೋಲುಗಳಿಂದ ಆಕ್ರಮಣ ಮಾಡಿದರು. ಅದರಿಂದ ನಮ್ಮ ಸೈನಿಕರಿಗೆ ಹೆಚ್ಚು ಗಾಯಗಳಾಗುವ ಸಂಭವವಿತ್ತು; ಏಕೆಂದರೆ ಕೋಲುಗಳ ವಿರುದ್ಧ ಕೈಗಳಿಂದ ಹೋರಾಡುವುದು ಸುಲಭವಲ್ಲ. ಅನಂತರ ನಾವೂ ಅವರಿಗೆ ಹಾಗೆಯೇ ಉತ್ತರ ನೀಡಿದೆವು.

ಸೆಪ್ಟೆಂಬರ್ ೧೪ ರಂದು ಇರುವ ಕಾಶ್ಮೀರಿ ಹಿಂದೂ ಬಲಿದಾನದಿನ ನಿಮಿತ್ತ

ಒಂದು ಕಾಲದಲ್ಲಿ ವಿಶ್ವಗುರು ಎಂದು ಕರೆಯಲಾಗುತ್ತಿದ್ದ ಭಾರತದ ಮೂಲ ನಿವಾಸಿಗಳು ಇಂದು ಭಾರತದಲ್ಲಿ ಅಸುರಕ್ಷಿತರಾಗಿದ್ದಾರೆ. ಅನೇಕ ಸ್ಥಳಗಳಲ್ಲಿ ಹಿಂದೂಗಳ ಸಂಖ್ಯೆ ಕ್ರಮೇಣ ಕುಸಿಯುತ್ತಿದೆ ಮತ್ತು ಹಿಂದೂಗಳು ಅಲ್ಪಸಂಖ್ಯಾತರಾಗುವ ಮಾರ್ಗದಲ್ಲಿದ್ದಾರೆ. ಇಂದು, ಜಿಹಾದಿ ಭಯೋತ್ಪಾದನೆಯಿಂದ ಪಾರಾಗಲು ಹಿಂದೂಗಳು ಭಾರತದ ಅನೇಕ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.