ಕೆಲವು ದಿನಗಳ ಹಿಂದೆ ಯುರೋಪಿನ ಅತ್ಯಂತ ಹೆಚ್ಚು ಶಾಂತ ದೇಶವಾಗಿರುವ ಸ್ವೀಡನ್‌ನಲ್ಲಿ ಮತಾಂಧರು ಗಲಭೆ ನಡೆಸಿದರು. ಸ್ವೀಡನ್‌ನಲ್ಲಿ ನಡೆಯಲಿದ್ದ ಒಂದು ಸಭೆಯಲ್ಲಿ ಪಾಲ್ಗೊಳ್ಳಲು ಡೆನ್ಮಾರ್ಕನ ‘ಸ್ಟ್ರಾಮ್ ಕುರ್ಸ ಪಕ್ಷದ ಮುಖಂಡರಾದ ನ್ಯಾಯವಾದಿ ರಸಮಸ್ ಪಾಲುಡಾನ್ ಇವರು ಬರುವವರಿದ್ದರು. ಅವರನ್ನು ಸ್ವೀಡನ್‌ನ ಗಡಿಯಲ್ಲಿ ತಡೆ ಹಿಡಿದರು. ಇದು ಗಮನಕ್ಕೆ ಬಂದಾಗ ಅವರ ಸಮರ್ಥಕರು ಕುರಾನ್‌ನ ಕೆಲವು ಪ್ರತಿಗಳನ್ನು ಸುಟ್ಟಿರುವ ಆರೋಪವಿದೆ. ಕುರಾನ್ ಪ್ರತಿಯನ್ನು ಸುಟ್ಟಿರುವುದನ್ನು ತಿಳಿದು ‘ಅಲ್ಲಾ-ಹು-ಅಕಬರ್ ಎಂದು ಘೋಷಣೆ ಕೂಗುತ್ತಾ ಅಲ್ಲಿ ನೆಲೆಸಿದ್ದ ನಿರಾಶ್ರಿತ ಮತಾಂಧರು ಗಲಭೆಯನ್ನು ಭುಗಿಲೆಬ್ಬಿಸಿ ಕಂಡ ಕಂಡಲ್ಲಿ ಬೆಂಕಿ ಹಚ್ಚತೊಡಗಿದರು. ಪೊಲೀಸರ ಮೇಲೆ ಕಲ್ಲು ತೂರಿದರು. ೩೦೦ಕ್ಕಿಂತ ಹೆಚ್ಚು ಮತಾಂಧರ ಗುಂಪು ಈ ಕೃತ್ಯವನ್ನು ಮಾಡಿತು. ರಸಮಸ್ ಪಾಲುಡಾನ್‌ರು ‘ನಾರ್ಡಿಕ್ ದೇಶಗಳ ಇಸ್ಲಾಮೀಕರಣ ಈ ವಿಷಯದ ಕುರಿತಾದ ಸಭೆಯಲ್ಲಿ ಪಾಲ್ಗೊಳ್ಳಲು ಬರುವವರಿದ್ದರು. ನಾರ್ಡಿಕ್ ದೇಶಗಳಲ್ಲಿ ಯುರೋಪಿನ ಫಿನ್‌ಲ್ಯಾಂಡ್, ಡೆನ್ಮಾರ್ಕ, ಐಸ್‌ಲ್ಯಾಂಡ್, ನಾರ್ವೆ ಮತ್ತು ಸ್ವೀಡನ್ ಈ ದೇಶಗಳ ಸಮಾವೇಶವಿದೆ.
ಇಸ್ಲಾಮಿಕ್ ಸ್ಟೇಟ್ ಈ ಭಯೋತ್ಪಾದಕ ಸಂಘಟನೆಯ ಉಗಮದಿಂದ ಮತ್ತು ಅದರ ಭೀಕರ ದೌರ್ಜನ್ಯದಿಂದ ಮಧ್ಯ ಪ್ರಾಚ್ಯದ ಸಾವಿರಾರು ಜನರು ತಮ್ಮ ದೇಶಗಳಿಂದ ಸ್ಥಳಾಂತರ ಗೊಂಡು ಯುರೋಪಿನ ಸಿಕ್ಕ ಸಿಕ್ಕ ದೇಶಗಳಲ್ಲಿ ಆಶ್ರಯ ಪಡೆದರು. ಇಂತಹವರಲ್ಲಿ ಕೆಲವರು ಸಮುದ್ರವನ್ನು ಪಾರು ಮಾಡಬೇಕಾಯಿತು. ಇದರಲ್ಲಿ ಒಂದು ಕುಟುಂಬದ ಕೆಲವು ಜನರು ನೀರಿನಲ್ಲಿ ಮುಳುಗಿದರು. ಅವರಲ್ಲಿ ಏಲನ್ ಹೆಸರಿನ ಚಿಕ್ಕ ಬಾಲಕನ ಮೃತದೇಹ ಸಮುದ್ರ ದಡದಲ್ಲಿ ಮಗುಚಿ ಬಿದ್ದಿರುವ ದೃಶ್ಯ ಕಂಡು ಬಂದಿತು. ಆ ಛಾಯಾಚಿತ್ರ ಸಾರ್ವತ್ರಿಕವಾಗಿ ಎಲ್ಲೆಡೆಯೂ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಯಿತು. ಇದರ ಪರಿಣಾಮವಾಗಿ ಸಹೃದಯಿ ಯುರೋಪಿಯನ್ ಜನರು ಬಹಳ ನೊಂದುಕೊಂಡರು ಅವರು ‘ಸ್ಥಳಾಂತರವಾಗುತ್ತಿರುವವರಿಗೆ ಮುಕ್ತ ಪ್ರವೇಶ ನೀಡಬೇಕು ಎಂದು ಬಹಿರಂಗವಾಗಿ ಹೇಳಿದರು. ತದನಂತರ ಲಕ್ಷಾಂತರ ಸ್ಥಳಾಂತರಿತ ಮುಸಲ್ಮಾನರು ಯುರೋಪಿನ ವಿವಿಧ ದೇಶಗಳಿಗೆ ವಲಸೆ ಹೋದರು. ಕೆಲವು ಮತಾಂಧರು ವಲಸಿತ ಪ್ರದೇಶಕ್ಕೆ ಹೋದ ತಕ್ಷಣ ಯುರೋಪಿಯನ್ ಮಹಿಳೆಯರ ಮೇಲೆ ಸಾಮೂಹಿಕ ಬಲಾತ್ಕಾರವನ್ನೂ ಮಾಡಿದರು. ತದನಂತರ ಸ್ಥಳಾಂತರಿತಗೊಂಡವರ ನಿಜ ಸ್ವರೂಪ ಜನರ ಗಮನಕ್ಕೆ ಬಂದಿತು. ಇದರಿಂದ ಕೆಲವು ಯುರೋಪಿಯನ್ ದೇಶಗಳು ವಿಶೇಷವಾಗಿ ಜರ್ಮನಿ ಮತ್ತು ಡೆನ್ಮಾರ್ಕ್‌ನ ನಾಗರಿಕರು ಸ್ಥಳಾಂತರಿತ ಗೊಂಡವರನ್ನುವಿರೋಧಿಸಲು ಪ್ರಾರಂಭಿಸಿದರು. ಈ ಸ್ಥಳಾಂತಗೊಂಡವರು ಯಾವ ಪಂಥದವರಾಗಿದ್ದಾರೆಯೋ, ಆ ಪಂಥದವರ ವಿರುದ್ಧ ಜಾಗರೂಕ ನಾಗರಿಕರು ಧ್ವನಿಯೆತ್ತಲು ಪ್ರಾರಂಭಿಸಿದರು. (ಮುಸಲ್ಮಾನರನ್ನು ವಿರೋಧಿಸುತ್ತಾರೆಂದು ಅವರನ್ನು ‘ಬಲಪಂಥೀಯ ವಿಚಾರವುಳ್ಳವರು ಎಂದು ವಿದೇಶಿ ಮತ್ತು ದೇಶಿ ಪ್ರಸಾರ ಮಾಧ್ಯಮಗಳು ಹೇಳುತ್ತವೆ, ಇದು ತಪ್ಪು) ಪೋಲಂಡ ಆರಂಭದಿಂದಲೂ ವಲಸಿಗರಿಗೆ ಪ್ರವೇಶ ನೀಡುವುದಿಲ್ಲ ಎಂದು ಘೋಷಿಸಿತ್ತು. ಇದರಿಂದ ಅಲ್ಲಿ ಕೆಲವು ಇಂತಹ ಅವಘಡಗಳು ಆಗಲಿಲ್ಲ.
ಯುರೋಪಿನಲ್ಲಿ ಮತಾಂಧರ ವಿರುದ್ಧ ಧ್ವನಿ !
ಡೆನ್ಮಾರ್ಕಿನ ಮುಖಂಡ ನ್ಯಾಯವಾದಿ ರಸಮಸ ಪಾಲುಡಾನ್ ಇವರು ಹಾಗೆ ನೋಡಿದರೆ ಆಕ್ರಮಣಕಾರಿ ಸ್ವಭಾವದವರಾಗಿದ್ದಾರೆ. ಅವರು ೨೦೧೭ ನೇ ಇಸವಿಯಲ್ಲಿ ‘ಸ್ಟ್ರಾಮ್ ಕುರ್ಸ ಪಕ್ಷವನ್ನು ಸ್ಥಾಪಿಸಿದರು. ಅವರು ‘ಡೆನ್ಮಾರ್ಕನಿಂದ ೩ ಲಕ್ಷ ಮುಸಲ್ಮಾನ ನಿರಾಶ್ರಿತರನ್ನು ಅವರ ದೇಶಕ್ಕೆ ಮರಳಿ ಕಳುಹಿಸೋಣ ಎಂದಿದ್ದರು ಮತ್ತು ಅವರ ಮುಸಲ್ಮಾನ ವಿರೋಧಿ ನಿಲುವಿನಿಂದ ಚುನಾವಣೆಯನ್ನು ಎದುರಿಸಿದ್ದರು. ಅವರಿಗೆ ಸ್ವಲ್ಪ ಕಡಿಮೆ ಮತಗಳು ಬಿದ್ದಿದ್ದರಿಂದ ಅವರು ಚುನಾವಣೆಯಲ್ಲಿ ಸೋತರು. ಅವರು ತಮ್ಮ ಪಕ್ಷದ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಇಸ್ಲಾಮ್‌ವಿರೋಧಿ ಲೇಖನವನ್ನು ಬರೆದರು ಮತ್ತು ಇಸ್ಲಾಮ್ ವಿರೋಧಿ ಕೃತ್ಯಗಳಿಗಾಗಿ ಹಾಗೂ ಅಂತಹ ಹೇಳಿಕೆಗಳಿಂದ ಅವರು ಕಾರಾಗೃಹವನ್ನೂ ಅನುಭವಿಸಬೇಕಾಯಿತು. ಆದರೂ ಅವರು ತಮ್ಮ ಉದ್ದೇಶವನ್ನು ಬದಲಾಯಿಸಿಲ್ಲ. ಅವರಿಗೆ ಸ್ವೀಡನ್‌ನಲ್ಲಿ ೨ ವರ್ಷ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆ ವಿಷಯದಲ್ಲಿ ಅವರು ‘ಬಲಾತ್ಕಾರಿ ಮತ್ತು ಕೊಲೆಗಡುಕರಿಗೆ ಯಾವಾಗಲೂ ಸ್ವಾಗತವಾಗುತ್ತದೆ ಎಂದು ಫೇಸಬುಕ್‌ನಲ್ಲಿ ‘ಪೋಸ್ಟ್ ಬರೆದಿದ್ದಾರೆ. ಯುರೋಪಿನಲ್ಲಿ ನಿರಾಶ್ರಿತರೆಂದು ಆಶ್ರಯ ಪಡೆದ ದೇಶದ ನಾಗರಿಕರು ಯಾವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತಿದೆ ಎನ್ನುವುದು ರಸಮಸ್ ಇವರ ಈ ಪೋಸ್ಟ್ನಿಂದ ಕಲ್ಪನೆ ಬರುತ್ತದೆ. ಕೇವಲ ನಿರಾಶ್ರಿತರ ಅಂಶಗಳಿಂದ ಚುನಾವಣೆಯನ್ನು ಎದುರಿಸಿದರೂ ಅವರಿಗೆ ಜಯಶಾಲಿಗಳಾಗಲು ಬೇಕಾಗುವ ಮತಗಳಿಗಿಂತ ಕೆಲವೇ ಮತಗಳು ಕಡಿಮೆ ಬಿದ್ದವು. ಇದರಿಂದ ಜನರ ಮನಸ್ಸೂ ಮತಾಂಧರ ವಿರುದ್ಧ ಎಷ್ಟು ಆಕ್ರೋಶಗೊಂಡಿದೆಯೆನ್ನುವುದು ಗಮನಕ್ಕೆ ಬರುತ್ತದೆ. ಉದಾರಮತವಾದಿ ಯುರೋಪಿನ ದೇಶಗಳ ಮುಖಂಡರು ನಿರಾಶ್ರಿತ ಮುಸಲ್ಮಾನರ ವಿರುದ್ಧ ಯಾವುದೇ ನಿಲುವು ಹೊಂದಿರಲಿ, ಸ್ಥಳೀಯ ಜನತೆಯ ವಿರೋಧಿ ಧ್ವನಿ ಮಾತ್ರ ಬಲವಾಗುತ್ತಿದೆ. ಸ್ವೀಡನ್ ಪ್ರಧಾನಮಂತ್ರಿಗಳು ನಿರಾಶ್ರಿತರನ್ನು ಉದಾರವಾಗಿ ಸ್ವಾಗತಿಸಿದ್ದರು ಹಾಗೆಯೇ ಯುರೋಪಿನ ಇತರ ದೇಶಗಳಿಗೂ ಸಾಧ್ಯವಿದ್ದಷ್ಟು ಹೆಚ್ಚು ನಿರಾಶ್ರಿತರನ್ನು ಸೇರಿಸಿಕೊಳ್ಳುವಂತೆ ಕರೆ ನೀಡಿದ್ದರು. ಸ್ವೀಡನ್ ಅದರ ಪ್ರತಿಫಲವನ್ನು ಬಹುತೇಕ ಈ ಗಲಭೆಯಿಂದ ಪಡೆದುಕೊಂಡಿದೆ.
ಮತಾಂಧರು ಎಲ್ಲಿ ಹೋಗುತ್ತಾರೆಯೋ ಅವರು ಅಲ್ಲಿಯ ಶಾಂತಿ ಮತ್ತು ಸುವ್ಯವಸ್ಥೆಗೆ ಬಾಧಕರಾಗುತ್ತಾರೆ. ನಮ್ಮ ದೇಶದ ವಿಚಾರವಂತರು, ಅಭಿವ್ಯಕ್ತಿ ಸ್ವಾತಂತ್ರ್ಯದ ಬೆಂಬಲಿಗರು ‘ಭಯೋತ್ಪಾದನೆಗೆ ಯಾವುದೇ ಬಣ್ಣ ಇರುವುದಿಲ್ಲ, ಎಂದು ಸಾರಿ ಸಾರಿ ಹೇಳುತ್ತಿರುತ್ತಾರೆ. ಈ ಮೂಲಕ ಅವರು ಮತಾಂಧರು ನಡೆಸಿದ ಗಲಭೆ, ಬೆಂಕಿ ಹಚ್ಚುವುದು, ಹತ್ಯೆ ಇವುಗಳನ್ನು ಮರೆ ಮಾಚುತ್ತಾರೆ. ಬಹಳ ದೂರ ಹೋಗುವುದು ಬೇಡ, ದೆಹಲಿಯ ಭೀಕರ ಗಲಭೆಯೇ ಇದಕ್ಕೆ ತಾಜಾ ಉದಾಹರಣೆಯಾಗಿದೆ. ಗಲಭೆಯನ್ನು ಯಾರು ಮಾಡುತ್ತಾರೆ. ಯಾರ ಸಿದ್ಧತೆಯಾಗಿತ್ತು ಎಂದು ಹೇಳುವ ದಾಖಲೆಗಳು ಉಪಲಬ್ಧವಿರುವಾಗ ಹಿಂದುತ್ವ ನಿಷ್ಠ ಕಪಿಲ ಮಿಶ್ರಾ ಇವರು ಗಲಭೆಯನ್ನು ತಡೆಯಲು ನೀಡಿದ ಹೇಳಿಕೆಯನ್ನು ಆಧಾರವಾಗಿಟ್ಟು ಗಲಭೆಗೆ ಅವರನ್ನೇ ಹೊಣೆಯಾಗಿಸಲು ಹಿಂದೂದ್ವೇಷಿ ಪ್ರಸಾರ ಮಾಧ್ಯಮಗಳು ಮತ್ತು ಅವರ ವಿಷಯವನ್ನು ವಿವರಿಸುವ ನಿವೇದಕರು ಪ್ರಯತ್ನಿಸಿದರು. ಅಂತರ ರಾಷ್ಟ್ರೀಯ ಸ್ತರದಲ್ಲಿಯೂ ‘ಬಹುಸಂಖ್ಯಾತ ಹಿಂದೂಗಳೂ ಗಲಭೆನಡೆಸಿದರು, ಎಂದು ಪ್ರಚಾರ ಮಾಡಲಾಯಿತು. ಅದರ ಪರಿಣಾಮದಿಂದ ಈ ವಿಷಯದಲ್ಲಿ ಸತ್ಯ ಮಾಹಿತಿ ನೀಡುವ ಫೇಸಬುಕ್‌ನ ‘ಪೋಸ್ಟ್ಗಳನ್ನು ಹಿಂಸಾತ್ಮಕವೆಂದು ನಿರ್ಧರಿಸಿ ಅವುಗಳನ್ನು ಫೇಸಬುಕ್‌ನಿಂದ ತೆಗೆದು ಹಾಕಲಾಯಿತು. ಈ ವಿಷಯದಲ್ಲಿ ಪುಸ್ತಕದ ಪ್ರಕಾಶನವನ್ನು ತಡೆಹಿಡಿಯಲಾಯಿತು. ಭಾರತದ ಬಹುಸಂಖ್ಯಾತರು ಮತಾಂಧರ ಈ ಗಲಭೆಯ ಬಿಸಿಯನ್ನು ಅನುಭವಿಸಿದ್ದಾರೆ.
ಭಾರತದಲ್ಲಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳ ಸಂಖ್ಯೆ ಹೆಚ್ಚುತ್ತಿದೆ. ಮುಂಬಯಿಯ ಆಜಾದ ಮೈದಾನದಲ್ಲಿ ಗಲಭೆ ನಡೆದಾಗ ಒಬ್ಬ ಬಾಂಗ್ಲಾದೇಶ ನುಸುಳುಕೋರನ ಪಾಸಪೋರ್ಟ್ ಸಿಕ್ಕಿತ್ತು. ಆಸ್ಸಾಮ್‌ನಲ್ಲಿ ಸ್ಥಳೀಯ ಮತಾಂಧರು ಬಾಂಗ್ಲಾದೇಶಿ ನುಸುಳು ಕೋರರಿಗೆ ಗಡಿಯೊಳಗೆ ನುಸುಳಲು ಸಹಾಯ ಮಾಡಿದ್ದರಿಂದ ಬಿಕ್ಕಟ್ಟಿನ ಸ್ಥಿತಿ ಉದ್ಭವಿಸಿತ್ತು. ಅದಕ್ಕಾಗಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ) ಮಾಡಬೇಕಾಯಿತು. ಬಾಂಗ್ಲಾದೇಶಿ ಮತಾಂಧರು ಇಲ್ಲಿಯ ಅಪರಾಧಗಳಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ದೇಶದ ರಾಜಧಾನಿಯ ಸ್ಥಳದಲ್ಲಿ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದ ಹಿಂದೂಗಳು ತಮ್ಮ ಮನೆಯ ಮೇಲೆ ‘ಈ ಮನೆ ಮಾರಾಟಕ್ಕಿದೆ, ಎಂದು ಬರೆದು ಬೋರ್ಡ ಹಾಕಿದ್ದಾರೆ. ಮುಸಲ್ಮಾನರ ಭಯದಿಂದ ಅವರು ತಾವು ವಾಸಿಸುತ್ತಿರುವ ಮನೆಯಿಂದ ಪಲಾಯನ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಉತ್ತರ ಪ್ರದೇಶದ ಕೈರಾನಾದಲ್ಲಿ ಇದೇ ಪರಿಸ್ಥಿತಿ ಇತ್ತು. ಮತಾಂಧರ ಹಿಂಸಾತ್ಮಕ ಮತ್ತು ಇತರ ಧರ್ಮದವರಿಗೆ ತೊಂದರೆ ನೀಡುವ ವೃತ್ತಿಯನ್ನು ಸರಕಾರ ಇನ್ನೂ ಗುರುತಿಸಿಲ್ಲ. ಇದರ ಪರಿಣಾಮದಿಂದ ಜನಸಾಮಾನ್ಯ ಹಿಂದೂಗಳಿಗೆ ಜೀವಿಸಲು ಕಠಿಣವಾಗಿದೆ. ಸರ್ಕಾರವು ಮತಾಂಧರನ್ನು ಗುರುತಿಸಿ ಅವರನ್ನು ಸರಿದಾರಿಗೆತರದಿದ್ದರೆ ಸ್ವೀಡನ್‌ನಲ್ಲಿ ನಡೆದಂತಹ ಘಟನೆ ನಮ್ಮಲ್ಲಿಯೂ ಮೇಲಿಂದ ಮೇಲೆ ಘಟಿಸಲು ಸಮಯ ತಗಲುವುದಿಲ್ಲ. ಇಷ್ಟೇ ಹೇಳುವುದಿತ್ತು.