ಹಿಂದೂಗಳ ವಿರೋಧದ ನಂತರ ‘ಶ್ರೀರಾಮ ಚಿಕನ್ ಮಸಾಲಾ’ ಹೆಸರಿನ ಉತ್ಪನ್ನವನ್ನು ಮಾರಾಟ ಮಾಡುವ ಸಂಸ್ಥೆಯ ಮಾಲೀಕರಿಂದ ಕ್ಷಮಾಯಾಚನೆ

ಹೆಸರನ್ನು ಬದಲಾಯಿಸುವ ಹಾಗೂ ಮಾರುಕಟ್ಟೆಯಲ್ಲಿನ ಉತ್ಪನ್ನಗಳನ್ನು ಹಿಂಪಡೆಯಲು ಒಪ್ಪಿಗೆ

ದೇವತೆಗಳ ಅವಹೇಳನವನ್ನು ತಡೆಗಟ್ಟಲು ಕಾನೂನುಮಾರ್ಗದಿಂದ ಕೃತಿಶೀಲರಾಗಿರುವ ಹಿಂದೂಗಳಿಗೆ ಅಭಿನಂದನೆಗಳು ! ಎಲ್ಲೆಡೆಯ ಹಿಂದೂಗಳು ಇದರ ಆದರ್ಶವನ್ನು ಪಡೆಯಿರಿ ! ಹಿಂದೂಗಳು ಕಾನೂನುಮಾರ್ಗದಿಂದ ವಿರೋಧಿಸಿದರೇ, ಮತಾಂಧರು ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರ ಮಾಡುತ್ತಾರೆ ! ಆದರೂ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರರು ಹಿಂದೂಗಳನ್ನು ‘ತಾಲಿಬಾನಿ’ ಎಂದು ಹೇಳುತ್ತಾರೆ ಹಾಗೂ ಮತಾಂಧರ ವಿಷಯದಲ್ಲಿ ಮೌನ ವಹಿಸುತ್ತಾರೆ !

ಬಿಕಾನೆರ (ರಾಜಸ್ಥಾನ) – ಇಲ್ಲಿಯ ‘ಬಿಕಾನೆರ ಬ್ರಾಹ್ಮಣ ಸಮಾಜ’ವು ‘ಶ್ರೀರಾಮ’ ಹೆಸರಿನ ಚಿಕನ್ ಮಸಾಲಾವನ್ನು ನಿರ್ಮಿಸುವ ‘ಶ್ರೀರಾಮ ಇಂಡಸ್ಟ್ರೀ’ಯ ಮಾಲೀಕರನ್ನು ಸುತ್ತುವರಿದರು ಹಾಗೂ ಅವರಿಗೆ ಉತ್ಪನ್ನದ ಹೆಸರನ್ನು ಹಿಂಪಡೆಯುವಂತೆ ಮಾಡಿದರು. ಸುತ್ತುವರಿದಾಗ ಮಾಲೀಕನು ತನ್ನ ತಪ್ಪನ್ನು ಒಪ್ಪಿಕೊಂಡು ಈ ಹೆಸರಿನ ಪಾಕೀಟನ್ನು ಸುಟ್ಟುಹಾಕಿದರು. ಮಾರುಕಟ್ಟೆಯಲ್ಲಿರುವ ಈ ಹೆಸರಿನ ಉತ್ಪನ್ನಗಳನ್ನು ಹಿಂಪಡೆಯಲೂ ಒಪ್ಪಿದರು. ಅದೇ ರೀತಿ ಎಲ್ಲ ಹಿಂದೂಗಳಲ್ಲಿ ಕ್ಷಮೆಯಾಚಿಸಿದರು. ‘ಗೊತ್ತಿಲ್ಲದೇ ಆಗಿದ್ದ ತಪ್ಪಿಗಾಗಿ ಪ್ರಾಯಶ್ಚಿತ್ತ ತೆಗೆದುಕೊಳ್ಳುವೆ’, ಎಂದೂ ಅವರು ಹೇಳಿದರು.