ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಎಲ್ಲಿ ಪಾಶ್ಚಾತ್ಯರ ವಿಚಾರಶೈಲಿ ಮತ್ತು ಎಲ್ಲಿ ಹಿಂದೂ ಧರ್ಮ !

‘ಪಾಶ್ಚಾತ್ಯರ ವಿಚಾರಶೈಲಿ ಮತ್ತು ಸಂಶೋಧನೆಯು ಕೇವಲ ಸುಖದ ಪ್ರಾಪ್ತಿಗಾಗಿ ಇರುತ್ತದೆ. ಮನುಷ್ಯನ ಸುಖದ ಹೆಬ್ಬಯಕೆ ಎಂದಿಗೂ ಮುಗಿಯುವುದಿಲ್ಲ; ಆದುದರಿಂದ ಅನೇಕ ಸಂಶೋಧನೆಗಳನ್ನು ಮಾಡಿದ ಮೇಲೆಯೂ ಮನುಷ್ಯ ಹೆಚ್ಚು ಹೆಚ್ಚು ದುಃಖ ಪಡುತ್ತಿದ್ದಾನೆ. ತದ್ವಿರುದ್ಧ ಹಿಂದೂಧರ್ಮ ಈಶ್ವರ ಪ್ರಾಪ್ತಿಗಾಗಿ, ಅಂದರೆ ಶಾಶ್ವತ ಆನಂದಪ್ರಾಪ್ತಿಗಾಗಿ ಮಾರ್ಗ ದರ್ಶನ ಮಾಡುತ್ತದೆ; ಆದುದರಿಂದ ಹಿಂದೂ ಧರ್ಮವನ್ನು ಪಾಲಿಸುವವನು ಎಂದಿಗೂ ದುಃಖಿತನಾಗುವುದಿಲ್ಲ.

ರಾಷ್ಟ್ರ-ಧರ್ಮಕ್ಕಾಗಿ ಆಧ್ಯಾತ್ಮಿಕ ಮಟ್ಟದಲ್ಲಿಯೂ ಕಾರ್ಯ ಮಾಡುವುದು ಆವಶ್ಯಕ !

‘ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಮಟ್ಟದಲ್ಲಿ ರಾಷ್ಟ್ರ-ಧರ್ಮಕ್ಕಾಗಿ ಕಾರ್ಯ ಮಾಡಿದರೆ ಏನೂ ಸಾಧ್ಯವಾಗುವುದಿಲ್ಲ, ಎಂಬುದು ಕಳೆದ ೭೨ ವರ್ಷಗಳಲ್ಲಿ ಅನೇಕ ಸಲ ಸಿದ್ಧವಾಗಿದೆ. ‘ಈಗ ಅವುಗಳೊಂದಿಗೆ ಆಧ್ಯಾತ್ಮಿಕ ಮಟ್ಟದಲ್ಲಿಯೂ ಕಾರ್ಯ ಮಾಡುವುದು ಅತ್ಯಗತ್ಯವಿದೆ, ಎಂಬುದನ್ನು ಎಲ್ಲರೂ ಗಮನದಲ್ಲಿಡುವ ಅವಶ್ಯಕವಿದೆ.

ಎಲ್ಲಿ ನೋಬೆಲ್ ಪ್ರಶಸ್ತಿ ಪಡೆಯುವವರು ಮತ್ತು ಎಲ್ಲಿ ಋಷಿಮುನಿಗಳು ! ಈ ವಿಷಯದಲ್ಲಿ ಬುದ್ಧಿಜೀವಿಗಳು ಏನು ಹೇಳುತ್ತಾರೆ ?

‘ನೋಬೆಲ್ ಪ್ರಶಸ್ತಿ ಪಡೆಯುವವರ ಹೆಸರು ಕೆಲವು ವರ್ಷಗಳಲ್ಲಿಯೇ ಮರೆತು ಹೋಗುತ್ತದೆ; ಆದರೆ ಧರ್ಮಗ್ರಂಥ ಬರೆಯುವ ವಾಲ್ಮೀಕಿಋಷಿ, ಮಹರ್ಷಿ ವ್ಯಾಸ, ವಸಿಷ್ಠಋಷಿ ಮುಂತಾದವರ ಹೆಸರುಗಳು ಯುಗಾನುಯುಗಗಳಿಂದ ಶಾಶ್ವತವಾಗಿವೆ.

– (ಪರಾತ್ಪರ ಗುರು) ಡಾ. ಆಠವಲೆ