ಭೋಪಾಲ್ (ಮಧ್ಯಪ್ರದೇಶ) – ನವರಾತ್ರಿ ಉತ್ಸವದಲ್ಲಿನ ಸಮಯದಲ್ಲಿ ಗರಬಾದಲ್ಲಿ ಸಹಭಾಗಿಯಾಗಲು ಗುರುತಿನ ಚೀಟಿ ಕಡ್ಡಾಯಗೊಳಿಸಬೇಕೆಂದು ನನ್ನ ಅಭಿಪ್ರಾಯವಿದೆ. ಬರುವರು ಅವರು ತಮ್ಮ ಗುರುತು ಮರೆಮಾಚಬಾರದು. ನಿಮ್ಮ ಕುಟುಂಬದ ಜೊತೆಗೆ ನೀವು ಗರಬಾದಲ್ಲಿ ಸಹಭಾಗಿಯಾಗಿ, ಏನು ಅಡಚಣೆ ಇಲ್ಲ; ಆದರೆ ನೀವು ನಿಮ್ಮ ಗುರುತು ಮರೆಮಾಚಿ ಲವ್ ಜಿಹಾದ್ ಮಾಡಲು ಸಾಧ್ಯವಿಲ್ಲ. ಈ ಅಭಿಯಾನ ಕಳೆದ ೨೦ ವರ್ಷದಿಂದ ನಿರಂತರವಾಗಿ ನಡೆಯುತ್ತಿದ್ದು ಇಂದು ಪ್ರತಿಯೊಂದು ಪೆಂಡಾಲ್ ಜಾಗೃತ ಮತ್ತು ಸತರ್ಕವಾಗಿದೆ. ನಾನು ಮುಖ್ಯಮಂತ್ರಿ ಮೋಹನ್ ಯಾದವ್ ಇವರನ್ನು ಭೇಟಿಯಾಗಿ ಈ ವಿಷಯದ ಕುರಿತು ಚರ್ಚಿಸಿದ್ದೇನೆ, ಎಂದು ರಾಜ್ಯದ ಮಾಜಿ ಸಚಿವೆ ಉಷಾ ಠಾಾಕೂರ್ ಇವರು ಮಾಹಿತಿ ನೀಡಿದರು.
ಶಸ್ತ್ರಾಸ್ತ್ರದ ಅಭ್ಯಾಸ ಮಾಡಿ ಮತ್ತು ಧರ್ಮ ಗ್ರಂಥದ ಅಭ್ಯಾಸ ಮಾಡಿ
ಉಷಾ ಠಾಕೂರ್ ಮಾತು ಮುಂದುವರಿಸಿ, ನವರಾತ್ರಿ ಉತ್ಸವ ಇದು ಶಕ್ತಿ ಮತ್ತು ಧ್ಯಾನದ ಉತ್ಸವವಾಗಿದೆ. ಸಂಪೂರ್ಣ ಸಮಾಜ ತನ್ನ ಶಕ್ತಿಯನ್ನು ಹೆಚ್ಚಿಸಬೇಕು. ಶಸ್ತ್ರಾಸ್ತ್ರದ ಅಭ್ಯಾಸ ಮಾಡಬೇಕು ಮತ್ತು ಧರ್ಮಗ್ರಂಥದ ಅಭ್ಯಾಸ ಮಾಡಬೇಕು ಇದೆ ಅಪೇಕ್ಷೆ ಎಲ್ಲಾ ಸನಾತನಿ ಹಿಂದುಗಳಿಂದಾಗಿದೆ.
ಬಲಾತ್ಕಾರಿಗಳಿಗೆ ನಡುರಸ್ತೆಯಯಲ್ಲಿ ಗಲ್ಲಿಗೇರಿಸಿ !
ಉಷಾ ಠಾಕೂರ್ ಬಲತ್ಕಾರದ ಘಟನೆಯ ಕುರಿತು, ಸಮಾಜದ ಭೌತಿಕವಾದದ ಅತಿರೇಕಿಗಳಿಂದ ಆಧ್ಯಾತ್ಮಿಕ ಸಾಧನೆ ಅಲ್ಪವಾಗಿದೆ. ಇದರಿಂದ ಸಂಪೂರ್ಣ ಸಮಾಜ ರೂಪಗೊಳ್ಳುವುದರಲ್ಲಿ ಮತ್ತು ಮಾನವತೆಗೆ ಧಕ್ಕೆ ಬರುತ್ತಿದೆ. ಲೈಂಗಿಕ ಶೋಷಣೆ ನಡೆಸುವ ನರ ಪಿಶಾಚೆಗಳಿಗೆ ಕಠೋರ ಶಿಕ್ಷೆ ವಿಧಿಸಬೇಕು. ಸಣ್ಣ ಹುಡುಗಿಯರ ಮೇಲೆ ಬಲತ್ಕಾರ ಮಾಡುವವರಿಗೆ ಸಾರ್ವಜನಿಕ ವೃತ್ತದಲ್ಲಿ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಅವರ ಅಂತ್ಯಸಂಸ್ಕಾರ ನಡೆಯಬಾರದು. ಇತರ ಜನರು ಯಾವಾಗ ಇಂತಹ ಶಿಕ್ಷೆ ನೋಡುವರು, ಆಗ ಅವರು ಹುಡುಗಿಯರನ್ನು ವಕ್ರ ದೃಷ್ಟಿಯಿಂದ ನೋಡುವ ಧೈರ್ಯ ಮಾಡಲಾರರು ಎಂದು ಹೇಳಿದರು.