ಪ್ರತಿಯೊಬ್ಬ ಹಿಂದೂ ಧರ್ಮದ ಜವಾಬ್ದಾರಿ ತೆಗೆದುಕೊಳ್ಳಬೇಕು !

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣರಿಂದ ನಟ ಪ್ರಕಾಶ ರಾಜರಿಗೆ ತಿರುಗೇಟು

ಅಮರಾವತಿ (ಆಂಧ್ರಪ್ರದೇಶ) – ನಾನು ಸನಾತನ ಧರ್ಮದ ಬಗ್ಗೆ ತುಂಬಾ ಗಂಭೀರವಾಗಿದ್ದೇನೆ. ಅನೇಕ ಟೀಕಾಕಾರರು ಅಯ್ಯಪ್ಪ ಸ್ವಾಮಿ ಮತ್ತು ಸರಸ್ವತಿ ದೇವಿಯನ್ನು ಗುರಿಯಾಗಿಸಿ ಮಾತನಾಡುತ್ತಾರೆ. ಸನಾತನ ಧರ್ಮಕ್ಕೆ ಬಹಳ ಮಹತ್ವವಿದೆ. ಪ್ರತಿಯೊಬ್ಬ ಹಿಂದೂ ಧರ್ಮದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇತರ ಧರ್ಮಗಳ ಬಗ್ಗೆ ಇಂತಹ ಟೀಕೆಗಳು ಕೇಳಿಬಂದರೆ, ವ್ಯಾಪಕ ಚಳುವಳಿ ನಡೆಸಲಾಗುತ್ತದೆ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ ಅವರು ಚಲನಚಿತ್ರ ನಟ ಪ್ರಕಾಶ ರಾಜ್ ಅವರಿಗೆ ಛೀಮಾರಿ ಹಾಕಿದರು, ತಿರುಪತಿ ಬಾಲಾಜಿ ದೇವಸ್ಥಾನದ ಲಡ್ಡುವಿನ ಪ್ರಕರಣದಲ್ಲಿ ಪ್ರಕಾಶ ರಾಜ್ ಅವರು `ಎಕ್ಸ್’ ನಲ್ಲಿ ಪೋಸ್ಟ ಮಾಡಿ `ಪವನ ಕಲ್ಯಾಣ, ದಯವಿಟ್ಟು ಇದರ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳಿರಿ. ನೀವು ಭಯಪಡಿಸುತ್ತಿದ್ದೀರಿ ಮತ್ತು ಈ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಏಕೆ ಮಂಡಿಸುತ್ತಿದ್ದೀರಿ? ದೇಶದಲ್ಲಿ ಈಗಾಗಲೇ ಸಾಕಷ್ಟು ಧಾರ್ಮಿಕ ಉದ್ವಿಗ್ನತೆ ಇದೆ’ ಎಂದು ಬರೆದಿದ್ದರು.

ಪವನ ಕಲ್ಯಾಣ ಈ ಬಗ್ಗೆ ಪ್ರತ್ಯುತ್ತರ ನೀಡುತ್ತಾ, ನಾನು ಹಿಂದೂ ಧರ್ಮದ ಪಾವಿತ್ರ್ಯ ಮತ್ತು ಆಹಾರ ಪದಾರ್ಥಗಳಲ್ಲಿನ ಕಲಬೆರಕೆಯ ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ. ಈ ಬಗ್ಗೆ ಏಕೆ ಮಾತನಾಡಬಾರದು? ಪ್ರಕಾಶ ರಾಜ್, ನಾನು ನಿಮ್ಮನ್ನು ಗೌರವಿಸುತ್ತೇನೆ ಮತ್ತು ಜಾತ್ಯತೀತತೆಯ ವಿಷಯ ಬಂದಾಗ ಅದು ಪರಸ್ಪರ ಬೆಂಬಲಿಸುವಂತೆ ಇರಬೇಕು. ನೀವು ನನ್ನನ್ನು ಏಕೆ ಟೀಕಿಸುತ್ತಿದ್ದೀರಿ ಎಂಬುದು ಅರ್ಥವಾಗುತ್ತಿಲ್ಲ. ಸನಾತನ ಧರ್ಮದ ಮೇಲಿನ ಆಘಾತಗಳನ್ನು ವಿರೋಧಿಸಿ ನಾನು ಏಕೆ ಮಾತನಾಡಬಾರದು? ಪ್ರಕಾಶ ಅವರು ಪಾಠ ಕಲಿಯಬೇಕು. ಚಲನಚಿತ್ರ ಉದ್ಯಮದವರು ಮತ್ತು ಇತರರು ಈ ವಿಷಯವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಪವನ ಅವರು ಖಡಕ್ ಆಗಿ ಹೇಳಿದರು.

ಸಂಪಾದಕೀಯ ನಿಲುವು

ಎಷ್ಟು ಮಂತ್ರಿಗಳು ಹಿಂದೂ ಧರ್ಮದ ಬಗ್ಗೆ ಇಂತಹ ನಿಲುವನ್ನು ಮಂಡಿಸುತ್ತಾರೆ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುತ್ತಾರೆ?