ಗೋವಾ : ಸಪ್ಟೆಂಬರ್ ೨ ರಾತ್ರಿ ೧೧.೫೭ ರಿಂದ ಸನಾತನ ಸಂಸ್ಥೆಯ ಫೇಸ್‌ಬುಕ್‌ನ ಅಧಿಕೃತ ‘ಸನಾತನ ಸಂಸ್ಥೆ, ‘ಸನಾತನ ಸಂಸ್ಥೆ ಆಂಗ್ಲ, ಸನಾತನದ ‘ಪ್ರೊಫೈಲ್ ಪೇಜ್, ಸನಾತನ ಸಂಸ್ಥೆ ಬೆಳಗಾವ ಹಾಗೂ SSKarnataka ಹೀಗೆ ಒಟ್ಟು ೫ ಪುಟಗಳು ಇದ್ದಕ್ಕಿದ್ದಂತೆ ಬಂದ್ ಆದವು. ಈ ಫೇಸ್‌ಬುಕ್ ಪುಟಗಳಿಂದ ನಿಯಮಿತವಾಗಿ ಧರ್ಮ ಶಾಸ್ತ್ರ, ಅಧ್ಯಾತ್ಮ, ಸಾಧನೆ ಇತ್ಯಾದಿ ವಿಷಯಗಳ ಬಗ್ಗೆ ಪೋಸ್ಟ್ ಮಾಡಲಾಗುತ್ತಿತ್ತು. ಅದೇ ರೀತಿ ಕೊರೋನಾ ಮಹಾಮಾರಿಯ ಕಾಲದಲ್ಲಿ ವೀಕ್ಷಕರಿಗೆ ಆಧಾರವನ್ನು ನೀಡುವ ಹಾಗೂ ಸಾಧನೆಯನ್ನು ಕಲಿಸುವ ‘ಆನ್‌ಲೈನ್ ಸತ್ಸಂಗ ಕೂಡಾ ನಿಯಮಿತವಾಗಿ ಪ್ರಸಾರ ಮಾಡಲಾಗುತ್ತಿತ್ತು. ಈ ಫೇಸ್‌ಬುಕ್ ಪುಟಗಳು ಬಂದ್ ಆಗಲು ಕಾರಣಗಳು ಇನ್ನೂ ತಿಳಿದಿಲ್ಲ.
ವೀಕ್ಷಕರಲ್ಲಿ ಮನವಿ
ಸನಾತನ ಸಂಸ್ಥೆಯ ಫೇಸ್‌ಬುಕ್ ಪುಟ ಬಂದ್ ಇರುವ ತನಕ ‘ಆನ್‌ಲೈನ್ ಸತ್ಸಂಗದ ಪ್ರಸಾರವನ್ನು Youtube.com/SanatanSanstha1 ಈ ಸನಾತನದ ಅಧಿಕೃತ ಯೂ-ಟ್ಯುಬ್ ಚಾನೆಲ್‌ನಲ್ಲಿ ವೀಕ್ಷಕರು ನೋಡಬಹುದು. ಅದೇರೀತಿ ನಿಯಮಿತವಾಗಿ ಪೋಸ್ಟ್ ಮಾಡಲಾಗುವ ವಿಷಯಗಳ ನೋಟಿಫಿಕೇಶನಗಾಗಿ ಸನಾತನ ಸಂಸ್ಥೆಯ ಕೆಳಗಿನ ಆಪ್ ಡೌನ್‌ಲೋಡ ಮಾಡಿ.
ಅಂಡ್ರಾಯ್ಡಿಗಾಗಿ : https://www.sanatan.org/android
ಐಓಎಸ್‌ಗಾಗಿ : https://www.sanatan.org/ios