|
ನವ ದೆಹಲಿ – ವಕ್ಫ್ ಸುಧಾರಣಾ ಮಸೂದೆಗೆ ಸಂಬಂಧಿಸಿದಂತೆ ಸ್ಥಾಪಿಸಲಾದ ಜಂಟಿ ಸಂಸದೀಯ ಸಮಿತಿಗೆ 1 ಕೋಟಿ 25 ಲಕ್ಷ ಅಭಿಪ್ರಾಯಗಳು ಬಂದಿರುವ ಬಗ್ಗೆ ಭಾಜಪ ಸಂಸದ ನಿಶಿಕಾಂತ್ ದುಬೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಈ ಅಭಿಪ್ರಾಯಗಳ ಮೂಲಗಳ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದರ ಹಿಂದೆ ಪಾಕಿಸ್ತಾನಿ ಗುಪ್ತಚರ ಸಂಸ್ಥೆ, ಜಾಕಿರ್ ನಾಯಕ್, ಐ.ಎಸ್.ಐ. ಮತ್ತು ಚೀನಾ ಪಾತ್ರವಿರಬಹುದು ಎಂದು ಭಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ವಿಷಯದಲ್ಲಿ ಸಂಸದ ದುಬೆ ಇವರು ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಶ್ರೀ. ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದಾರೆ. ಸಂಸದ ನಿಶಿಕಾಂತ್ ದುಬೆ ಸಂಸದೀಯ ಸಮಿತಿಯ ಸದಸ್ಯರೂ ಆಗಿದ್ದಾರೆ.
ಸಂಸದ ದುಬೆಯವರು ಈ ಪತ್ರದಲ್ಲಿ, ಈ ಅಭಿಪ್ರಾಯಗಳ ಭೌಗೋಳಿಕ ಉತ್ಪತ್ತಿಯೆಡೆಗೆ ಗಮನ ಹರಿಸುವುದು ಆವಶ್ಯಕವಿದೆ. ಕೇವಲ ಭಾರತವೊಂದರಿಂದಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಪ್ರಾಯಗಳನ್ನು ಪಡೆಯುವುದು ಅಸಾಧ್ಯ ಎಂದು ಅವರು ದಾವೆ ಮಾಡಿದ್ದಾರೆ.
ಸಂಪಾದಕೀಯ ನಿಲುವುಭಾಜಪ ಸಂಸದನಿಗೆ ಏನು ಅನಿಸುತ್ತಿದೆ, ಅದು ಸಂಸದೀಯ ಸಮಿತಿಗೆ ಏಕೆ ಅನಿಸುವುದಿಲ್ಲ ? ಇವುಗಳೆಡೆಗೆ ಗೂಢಚಾರರ ಗಮನವಿದೆಯೇ ? |