ಗೌರಿ ಲಂಕೇಶ್ ಪ್ರಕರಣದ ಆರೋಪಿಗಳಿಗೆ ಕೋರೋನಾದಿಂದ ಸುರಕ್ಷೆಯತ್ತ ದುರ್ಲಕ್ಷಿಸಿದ ಪ್ರಕರಣ

ಸೆಪ್ಟೆಂಬರ್ ೨೯ ರ ವರೆಗೆ ವರದಿ ಸಲ್ಲಿಸಿ ! – ಪೊಲೀಸರಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ

ಬೆಂಗಳೂರು : ಗೌರಿ ಲಂಕೇಶ ಹತ್ಯೆಯ ಆರೋಪದ ಮೇಲೆ ಮೈಸೂರಿನ ಜೈಲಿನಲ್ಲಿ ಇರಿಸಲಾದ ವಿಚಾರಣಾಧೀನ ಕೈದಿಗಳ ಸುರಕ್ಷತೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಶ್ರೀ. ಅಮೃತೇಶ ಎನ್. ಪಿ. ಮತ್ತು ವಕೀಲೆ ಸೌ. ದಿವ್ಯಾ ಇವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದರು. ಉಚ್ಚನ್ಯಾಯಾಲಯವು ಪ್ರಕರಣದಲ್ಲಿ ಸೂಕ್ಷ್ಮತೆಯನ್ನು ಪರಿಗಣಿಸಿ ಸೆಪ್ಟೆಂಬರ್ ೨೯ ರೊಳಗೆ ವರದಿ ಸಲ್ಲಿಸಲು ಪೊಲೀಸರಿಗೆ ಸೂಚಿಸಿದ್ದಾರೆ, ಎಂದು ‘ಸಂಯುಕ್ತ ಕರ್ನಾಟಕ ಈ ದಿನಪತ್ರಿಕೆಯಲ್ಲಿ ಮುದ್ರಣವಾಗಿದೆ.

೧. ಈ ಅರ್ಜಿಯಲ್ಲಿ, ಆರೋಪಿಗಳಿಗೆ ಇರಿಸಿದ ಕಟ್ಟಡದ ಪಕ್ಕದಲ್ಲಿ ‘ಕೋವಿಡ್ ಐಸೋಲೇಶನ್ ಸೆಂಟರ್ ಸ್ಥಾಪನೆಯನ್ನು ಮಾಡಲಾಗಿದೆ. ಆದರ ಸುರಕ್ಷತೆ ದೃಷ್ಟಿಯಿಂದ ಸರಕಾರ ನೀಡಿರುವ ಆರೋಗ್ಯ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದಾರೆ.

೨. ಅದಕ್ಕೆ ನ್ಯಾಯಾಲಯವು, ಕರ್ನಾಟಕದ ಜೈಲುಗಳಲ್ಲಿ ಪ್ರಸ್ತುತ ಇರುವ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ ಎಷ್ಟು ? ಕೈದಿಗಳ ಸುರಕ್ಷತೆಯ ಬಗ್ಗೆ ಸರಕಾರದ ಕ್ರಮಗಳೇನು ? ಕೈದಿಗಳ ಕುರಿತು ಕೊರೋನಾ ಮುಂಜಾಗರೂಕತಾ ಕ್ರಮಗಳೇನು ಹಾಗೂ ಕೈದಿಗಳಿಗೆ ಸೂಕ್ತ ವೈದ್ಯಕೀಯ ತಪಸಣೆ ನಡೆಯುತ್ತಿದೆಯೇ ? ಪ್ರಥಮಬಾರಿ ಜೈಲಿಗೆ ಬರುವ ಕೈಗಿಗಳಿಗೆ ಕನಿಷ್ಠ ಅವಧಿಯ ಕ್ವಾರಂಟೈನ್ ವಿಧಿಸಲಾಗುತ್ತಿದೆಯೇ ? ಸೋಂಕಿತ ಕೈದಿಗಳಿಗೆ ಕೋರೋನಾ ಐಸೋಲೇಶನ್ ಕೇಂದ್ರದಲ್ಲಿ ಎಲ್ಲ ವ್ಯವಸ್ಥೆ, ಸೌಲಭ್ಯ ಮಾಡಲಾಗಿದೆಯೇ ಎಂಬುದರ ಕುರಿತಾಗಿ ಸಂಪೂರ್ಣ ವರದಿ ಸಲ್ಲಿಸಬೇಕೆಂದು ಸರಕಾರಕ್ಕೆ ಸೂಚಿಸಿದೆ.