|
ನವ ದೆಹಲಿ – ದೆಹಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಆಗಿದ್ದ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಶೇಷ ಪೊಲೀಸ್ ಪಡೆಯು ಜೆ.ಎನ್.ಯು. ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ ಉಮರ ಖಾಲಿದ್‌ನನ್ನು ಅಕ್ರಮ ಚಟುವಟಿ ಕಾಯ್ದೆಯ ಅಡಿಯಲ್ಲಿ (ಯ.ಎಪಿ.ಎ. ಯ ಅಡಿಯಲ್ಲಿ) ಬಂಧಿಸಿದ್ದಾರೆ. ಉಮರ ಖಾಲಿದನನ್ನು ವಿಚಾರಣೆಗಾಗಿ ಕರೆಯಲಾಗಿತ್ತು. ೧೧ ಗಂಟೆಗಳ ಕಾಲ ವಿಚಾರಣೆಯ ನಂತರ ಆತನನ್ನು ಬಂಧಿಸಲಾಗಿದೆ. ಈ ಹಿಂದೆ ಜುಲೈ ೩೧ ರಂದು ಆತನ ವಿಚಾರಣೆ ಮಾಡಲಾಗಿತ್ತು. ಆಗ ಆತನ ಸ್ಮಾರ್ಟ್‌ಫೋನ್ ವಶಕ್ಕೆ ಪಡೆಯಲಾಗಿತ್ತು.
#UmarKhalid’s arrest by Delhi police after naming Yechury, #YogendraYadav, Jayati Ghosh & Apoorvanand leaves no doubt at all about the mala fide nature of its investigation into #Delhiriots : #PrashantBhushan https://t.co/ZcnCKrL5cQ
— The Hindu (@the_hindu) September 14, 2020
ಉಮರ ಖಾಲಿದ ಜೆ.ಎನ್.ಯು.ನಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದಾನೆ. ೨೦೧೬ ರಲ್ಲಿ ಸಂಸತ್ತಿನ ದಾಳಿಯ ಪ್ರಕರಣದಲ್ಲಿ ಗಲ್ಲಿಗೇರಿಸಲಾಗಿದ್ದ ಭಯೋತ್ಪಾದಕ ಮಹಮ್ಮದ ಅಫಝಲ್‌ನನ್ನು ಬೆಂಬಲಿಸಲು ಜೆ.ಎನ್.ಯು. ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶವಿರೋಧಿ ಘೋಷಣೆಗಳನ್ನು ನೀಡುವಾಗ ಆತ ಸಹಭಾಗಿಯಾಗಿದ್ದ. ಈ ಕಾರ್ಯಕ್ರಮದ ಆಯೋಜನೆ ಮಾಡಿದ ಪ್ರಕರಣಕ್ಕೆ ಜೆ.ಎನ್.ಯು.ನ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ, ಉಮರ ಖಾಲಿದ ಹಾಗೂ ಇತರ ವಿದ್ಯಾರ್ಥಿಗಳ ವಿರುದ್ಧ ಅಪರಾಧವನ್ನು ದಾಖಲಿಸಲಾಗಿತ್ತು. ಖಾಲಿದನು ಆಗಾಗ ಕಾಶ್ಮೀರವನ್ನು ಸ್ವತಂತ್ರವನ್ನು ಮಾಡುವಂತೆ ಆಗ್ರಹಿಸಿದ್ದಾನೆ. ಖಾಲಿದ್ ಮೇಲೆ ಜೆ.ಎನ್.ಯು.ನಲ್ಲಿ ಹಿಂದೂ ದೇವತೆಗಳ ಅಕ್ಷೇಪಾರ್ಹ ಚಿತ್ರಗಳನ್ನು ಹಾಕಿ ಕೋಮುದ್ವೇಷವನ್ನು ಹಬ್ಬಿಸುವ ಆರೋಪವು ಇತ್ತು.