ಕಟ್ಟಡ ಕಾಮಗಾರಿ ಕ್ಷೇತ್ರದಲ್ಲಿನ ಸಾಧಕರು ಮತ್ತು ವಾಚಕರು, ಹಿತಚಿಂತಕರು, ಧರ್ಮಪ್ರೇಮಿಗಳಿಗೆ ಸತ್ಸೇವೆಯ ಅಮೂಲ್ಯ ಅವಕಾಶ !

ಆಶ್ರಮದ ಕಟ್ಟಡಕಾಮಗಾರಿ ಅಥವಾ ನವೀಕರಣ ಸೇವೆಗಳಿಗಾಗಿ ವಾಸ್ತುಶಿಲ್ಪ ಅಭಿಯಂತರರು (ಇಂಜಿನಿಯರ್), ವಾಸ್ತುಶಿಲ್ಪಿ, ಡ್ರಾಫ್ಟ್ಸಮನ್ ಮುಂತಾದವರ ಆವಶ್ಯಕತೆ ಇದೆ !

ಸದ್ಯ ಸನಾತನದ ಆಶ್ರಮದ ಹೊಸ ಕಟ್ಟಡ ಕಾಮಗಾರಿ ಅಥವಾ ನವೀಕರಣ (ರಿನೋವೆಶನ್)ದ ಕೆಲಸವು ನಡೆಯುತ್ತಿದೆ. ಕಟ್ಟಡ ಕಾಮಗಾರಿ ಕ್ಷೇತ್ರದಲ್ಲಿನ ತಜ್ಞರಿಗೆ ಸೇವೆಯ ಮಾಧ್ಯಮದಿಂದ ಹಿಂದೂ ರಾಷ್ಟ್ರದ ಪ್ರತಿರೂಪವಾಗಿರುವ ಆಶ್ರಮಗಳ ಪುನರ್‌ನಿರ್ಮಾಣಕ್ಕಾಗಿ ಸಹಾಯ ಮಾಡುವ ಅಮೂಲ್ಯ ಅವಕಾಶವಿದೆ.

೧. ವಾಸ್ತುಶಿಲ್ಪ ಇಂಜಿನಿಯರ್ ಮತ್ತು ಯೋಜನೆ (ಪ್ರೊಜೆಕ್ಟ್) ವ್ಯವಸ್ಥಾಪಕರು

ಕಟ್ಟಡ ಕಾಮಗಾರಿಯ ಪರಿವೀಕ್ಷಕರು (ಸೈಟ್ ಸುಪರವಿಝನ್), ಹಾಗೆಯೇ ಖ.ಅ.ಅ. ಡಿಝೈನ್ ಮಾಡುವುದು, ಇವುಗಳಿಗಾಗಿ ಪ್ರತ್ಯಕ್ಷ ಕಟ್ಟಡ ಕಾಮಗಾರಿಯ ಅನುಭವವಿರುವ ವಾಸ್ತುಶಿಲ್ಪ ಅಭಿಯಂತರರು (ಡಿಗ್ರಿ ಅಥವಾ ಡಿಪ್ಲೋಮಾ ಸಿವಿಲ್ ಇಂಜನಿಯರ್), ಹಾಗೆಯೇ ಯೋಜನೆ (ಪ್ರೊಜೆಕ್ಟ್) ವ್ಯವಸ್ಥಾಪಕರು (ಪ್ರೊಜೆಕ್ಟ್ ಮ್ಯಾನೇಜರ್) ಇವರ ಆವಶ್ಯಕತೆ ಇದೆ.

೨. ವಾಸ್ತುಶಿಲ್ಪಿ (ಆರ್ಕಿಟೆಕ್ಟ್)

ಗಣಕ ಯಂತ್ರದಲ್ಲಿ ನಕಾಶೆ (ಡ್ರಾಯಿಂಗ್) ಮತ್ತು ಕರಡು ಪ್ರತಿ (ಡಿಝೈನ್) ತೆಗೆಯುವ ಅನುಭವವಿರುವ ವಾಸ್ತುಶಿಲ್ಪಿ ಬೇಕಾಗಿದ್ದಾರೆ. ತ್ರಿಮಿತಿಯ (೩ ಡೈಮೆನ್ಶನಲ್) ‘ಗ್ರಾಫಿಕ್ಸ್’ ಬರುತ್ತಿದ್ದರೆ ಹೆಚ್ಚು ಉತ್ತಮ !

೩. ಡ್ರಾಫ್ಟ್ಸಮನ್

‘ಸಿವಿಲ್ ಆಟೋಕ್ಯಾಡ್’ ಈ ಗಣಕೀಯ ತಂತ್ರಾಂಶದಲ್ಲಿ ನಕಾಶೆಯನ್ನು (ಡ್ರಾಯಿಂಗ್) ತೆಗೆಯುವ ಅನುಭವವಿರುವ ಡ್ರಾಫ್ಟ್ಸಮನ್ ಇವರೊಂದಿಗೆ ಕಟ್ಟಡ ಕಾಮಗಾರಿಯ ಮುಂಬರುವ ಖರ್ಚು (ಎಸ್ಟಿಮೆಟ್) ತೆಗೆಯುವಂತಹ ಅಭಿಯಂತರರ ಆವಶ್ಯಕತೆಯೂ ಇದೆ. ಮೇಲಿನ ಕೌಶಲ್ಯವಿರುವ ಪೂರ್ಣವೇಳೆ ಅಥವಾ ಕೆಲವು ಅವಧಿಕಾಗಿ ಆಶ್ರಮದಲ್ಲಿದ್ದು ಅಥವಾ ಮನೆಯಲ್ಲಿದ್ದು ಈ ಸೇವೆಯಲ್ಲಿ ಪಾಲ್ಗೊಳ್ಳಬಹುದು. ಸೇವೆ ಮಾಡಲು ಇಚ್ಛಿಸುವ ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಜಿಲ್ಲಾ ಸೇವಕರ ಮಾಧ್ಯಮದಿಂದ ಪಕ್ಕದಲ್ಲಿರುವ ಕೋಷ್ಟಕಕ್ಕನುಸಾರ ತಮ್ಮ ಮಾಹಿತಿಯನ್ನು ಕಳುಹಿಸಬೇಕು.

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – 7058885610

ಗಣಕೀಯ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮೂಲಕ ‘ಸನಾತನ ಆಶ್ರಮ’, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401