ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯದ ಪ್ರಕರಣ
ನವ ದೆಹಲಿ – ಹಿಂದೂ ಮಹಾಸಭಾ ಅಕ್ಟೋಬರ್ ೬ ರಂದು ಮಧ್ಯಪ್ರದೇಶದ ಗ್ವಾಲ್ಹೇರದಲ್ಲಿ ನಡೆಯುವ ಭಾರತ-ಬಾಂಗ್ಲಾದೇಶ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಬಂದ ಆಚರಿಸುವುದು. ‘ಆ ದಿನದಂದು ನಾಗರಿಕರು ತಮ್ಮ ಅಂಗಡಿಗಳನ್ನು ತೆರೆಯಬಾರದು. ನಾವು ಯಾವುದೇ ಪರಿಸ್ಥಿತಿಯಲ್ಲಿ ಗಾಲ್ಹೇರದಲ್ಲಿ ಈ ಪಂದ್ಯವನ್ನು ಆಡಲು ಬಿಡುವುದಿಲ್ಲ. ಈ ಸಂದರ್ಭದಲ್ಲಿ ನಮ್ಮ ಸಭೆಯಲ್ಲಿ ಒಮ್ಮತದ ನಿರ್ಣಯವಾಗಿದ್ದು ಆ ದಿನದಂದು ನಾವು ಗ್ವಾಲ್ಹೆರ್ ಬಂದ್ ಗೆ ಕರೆ ನೀಡಿದ್ದೇವೆ’, ಎಂದು ಹಿಂದೂ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಜಯವೀರ ಭಾರದ್ವಾಜ್ ಇವರು ಹೇಳಿದ್ದಾರೆ. ಗ್ವಾಲ್ಹೇರದ ಮಾಧವರಾವ ಶಿಂಧೆ ಸ್ಟೇಡಿಯಂನಲ್ಲಿ ಬರುವ ಅಕ್ಟೋಬರ್ ೬ ರಂದು ಭಾರತ-ಬಾಂಗ್ಲಾದೇಶದ ನಡುವೆ ಟಿ ೨೦ ಕ್ರಿಕೆಟ್ ಪಂದ್ಯ ನಡೆಯಲಿದೆ. ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ದಾಳಿಗಳನ್ನು ವಿರೋಧಿಸಲು ಹಿಂದೂ ಮಹಾಸಭೆಯಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
೧. ಈ ಹಿಂದೆ ಹಿಂದೂ ಜನಜಾಗೃತಿ ಸಮಿತಿ ಸಹಿತ ಇತರ ಹಿಂದುತ್ವನಿಷ್ಠ ಸಂಘಟನೆಗಳು ಈ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಸಮಯದಲ್ಲಿ ಹಿಂದೂ ಮಕ್ಕಲ ಕಚ್ಚಿ (ಹಿಂದೂ ಜನತಾ ಪಕ್ಷ) ಈ ಸಂಘಟನೆಯಿಂದ ಸ್ಟೇಡಿಯಂ ಹೊರಗೆ ಪ್ರತಿಭಟನೆ ಕೂಡ ನಡೆಸಲಾಗಿತ್ತು (ಪ್ರತಿಭಟನೆ ಮಾಡಿದ ನಂತರ ಕೂಡ ಈ ಪಂದ್ಯ ಆಡಲಾಯಿತು. ಇದರ ಅರ್ಥ ಹಿಂದುಗಳ ಪ್ರತಿಭಟನೆಗೆ ಯಾರು ಮಹತ್ವ ನೀಡುವುದಿಲ್ಲ, ಇದನ್ನು ನೋಡಿದರೆ ಹಿಂದುಗಳು ಅವರ ಶಕ್ತಿಯನ್ನು ಹೆಚ್ಚಿಸಬೇಕು, ಇದೆ ಗಮನಕ್ಕೆ ಬರುತ್ತದೆ ! – ಸಂಪಾದಕರು)
೨. ಹಿಂದೂ ಮಹಾಸಭೆಯ ಎಚ್ಚರಿಕೆಯ ನಂತರ ಪೊಲೀಸರು, ಪಂದ್ಯಕ್ಕಾಗಿ ಬಿಗಿ ಸುರಕ್ಷಾ ವ್ಯವಸ್ಥೆ ಮಾಡಿದೆ. ಇದಕ್ಕಾಗಿ ಬೃಹತ್ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ, ನೇರ ಕಾನೂನು ಮತ್ತು ಸುವ್ಯವಸ್ಥೆಗೆ ಕರೆ ನೀಡುವಷ್ಟು ಹಿಂದೂ ಮಹಾಸಭೆ ದೊಡ್ಡ ಸಂಘಟನೆ ಅಲ್ಲ. (ಹಿಂದುಗಳ ಸಂಘಟನೆಗಳಗೆ ವಿಷಯ ಎಷ್ಟೇ ಗಂಭೀರವಾಗಿದ್ದರೂ, ಸಂಘಟನೆಗಳ ಕ್ಷಮತೆಯ ಮೇರೆಗೆ ಅದರ ಮೌಲ್ಯಾಂಕನ ಮಾಡಿ ವಿಷಯಕ್ಕೆ ಗಾಂಭೀರ್ಯತೆ ನೀಡಬೇಕು ಅಥವಾ ಇಲ್ಲ ಇದನ್ನು ನಿಶ್ಚಯಿಸಲಾಗುತ್ತದೆ. ಇದರ ಯೋಚನೆ ಹಿಂದೂ ಮತ್ತು ಅದರ ಸಂಘಟನೆಗಳು ಮಾಡುವರೆ ! – ಸಂಪಾದಕರು)
೩. ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನ ಅಧಿಕಾರಿಗಳು, ಹಿಂದೂ ಮಹಾಸಭೆಯ ಎಚ್ಚರಿಕೆ ಅಷ್ಟೇನು ಗಂಭೀರವಾಗಿಲ್ಲ, ಕಳೆದ ತಿಂಗಳಲ್ಲಿ ಕೂಡ ಅವರು ಇದೇ ರೀತಿ ಬೆದರಿಕೆ ನೀಡಿದ್ದರು; (ಹಿಂದು ಬದಲು ಚಿಕ್ಕ ಇಸ್ಲಾಮಿ ಸಂಘಟನೆ ಇರುತ್ತಿದ್ದರೇ, ಆಗ ಪ್ರತಿಯೊಬ್ಬರೂ ಅದರ ಕುರಿತು ಗಮನಹರಿಸಿ ಈ ವಿಷಯದ ಮೇಲೆ ಯೋಚನೆ ಮಾಡುತ್ತಿದ್ದರು ! – ಸಂಪಾದಕರು) ಆದರೂ ಕೂಡ ಮುಂಜಾಗ್ರತೆ ಉಪಾಯವೆಂದು ನಾವು ಸುರಕ್ಷಾ ವ್ಯವಸ್ಥೆಯ ಮೇಲೆ ಗಮನ ಇರಿಸಿದ್ದೇವೆ. ಪಂದ್ಯದ ಸಮಯದಲ್ಲಿ ಯಾವುದು ಅನುಚಿತ ಘಟನೆ ಘಟಿಸಬಾರದೆಂದು ನಮ್ಮ ಪ್ರಯತ್ನ ಆಗಿದೆ ಎಂದು ಹೇಳಿದರು.
Some content for protesting against the India-Bangladesh cricket series!
You can prepare placards out of these or can be used for chanting / slogans or visual art can also be made out of these. These can be displayed outside the playgrounds too.
The Hindu voice should be heard… pic.twitter.com/MtrSVd7ZKR
— Sanatan Prabhat (@SanatanPrabhat) September 25, 2024
ಸಂಪಾದಕೀಯ ನಿಲುವು
|