ಮೊಘಲರು ಮತ್ತು ಬ್ರಿಟಿಷರಂತೆ ದೇವಸ್ಥಾನಗಳನ್ನು ಲೂಟಿ ಮಾಡುತ್ತಿರುವ ಸರಕಾರ

ಮಂದಿರಗಳ ಸರಕಾರೀಕರಣ ವಿರೋಧಿಸಿ ಪ್ರತಿಭಟನೆ ನಡೆಸಲಿರುವ ವಿಶ್ವ ಹಿಂದೂ ಪರಿಷತ್

ನವದೆಹಲಿ – ರಾಜ್ಯ ಸರಕಾರಗಳಿಂದ ದೇವಸ್ಥಾನಗಳನ್ನು ನಿಯಂತ್ರಿಸಲಾಗುತ್ತಿದ್ದು, ಸರಕಾರವು ನೇಮಿಸಿದ ಸಮಿತಿಗಳಿಂದ ಭ್ರಷ್ಟಾಚಾರಗಳಾಗುತ್ತಿವೆ. ಮೊಘಲರು ಮತ್ತು ಬ್ರಿಟಿಷರ ಆಳ್ವಿಕೆಯಲ್ಲಿ ದೇವಸ್ಥಾನಗಳನ್ನು ಲೂಟಿ ಮಾಡಲಾಯಿತು, ಅದೇ ರೀತಿಯ ಲೂಟಿಯನ್ನು ಈಗ ಸರಕಾರಗಳಿಂದಲೂ ಆಗುತ್ತಿವೆ. ಇದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ತು ಆಂದೋಲನ ನಡೆಸಲಿದೆಯೆಂದು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಸುರೇಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ‘ಹಿಂದೂಗಳ ಹಣ ಹಿಂದೂಗಳಿಗೆ’ ಎಂದು ಅವರು ಈ ವೇಳೆ ಘೋಷಣೆ ಮಾಡಿದರು. ಈ ನಿಮಿತ್ತ ಪ್ರತಿಯೊಂದು ರಾಜ್ಯದ ರಾಜಧಾನಿಯಲ್ಲಿ ಮೆರವಣಿಗೆ ನಡೆಸಲಾಗುವುದು, ಹಾಗೆಯೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಸುರೇಂದ್ರ ಜೈನ್ ತಮ್ಮ ಮಾತನ್ನು ಮುಂದುವರಿಸಿ,

ದೇವಸ್ಥಾನಗಳನ್ನು ಹಿಂದೂಗಳಿಗೆ ಹಸ್ತಾಂತರಿಸಿ!

ಯಾರನ್ನು ಸರಕಾರದಲ್ಲಿ ಸೇರಿಸಿಕೊಳ್ಳಲು ಸಾಧ್ಯವಿಲ್ಲವೋ, ಅಂತಹ ನಾಯಕರನ್ನು ದೇವಸ್ಥಾನ ಸಮಿತಿಯಲ್ಲಿ ನೇಮಿಸಲಾಗುತ್ತದೆ. ಈ ಎಲ್ಲ ದೇವಸ್ಥಾನಗಳು ಸರಕಾರದ ನಿಯಂತ್ರಣದಲ್ಲಿವೆ. ಸರಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳನ್ನು ಪುನಃ ಸಮಾಜದ ನಿಯಂತ್ರಣಕ್ಕೆ ನೀಡುವುದು, ಇದೊಂದೇ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಪರ್ಯಾಯವಾಗಿದೆ. ಸಮಾಜವು ಸಂತರ ಮಾರ್ಗದರ್ಶನದಲ್ಲಿ ದೇವಸ್ಥಾನಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ಸಮರ್ಥವಾಗಿದೆ. ತಮಿಳುನಾಡು ಸರಕಾರದ ನಿಯಂತ್ರಣದಲ್ಲಿ ಸುಮಾರು 400ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಕಳೆದ 10 ವರ್ಷಗಳಲ್ಲಿ ಈ ದೇವಸ್ಥಾನಗಳಿಗೆ 50 ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ.

ಮುಸ್ಲಿಮರು ತಮ್ಮ ಧಾರ್ಮಿಕ ಸಂಸ್ಥೆಗಳನ್ನು ನಡೆಸುತ್ತಿರುವಾಗ ಹಿಂದೂಗಳೇಕೆ ನಡೆಸಬಾರದು?

ಸರಕಾರವು ದೇವಸ್ಥಾನಗಳನ್ನು ನಿಯಂತ್ರಿಸುವುದು, ಸಂವಿಧಾನದ 12ನೇ ವಿಧಿಯನುಸಾರ ಅಯೋಗ್ಯವಾಗಿದೆ. ‘ಸಂವಿಧಾನಕ್ಕೆ ಧರ್ಮವಿರುವುದಿಲ್ಲ’, ಎಂದು ಹೇಳಲಾಗಿದೆ; ಹೀಗಿರುವಾಗ ರಾಜ್ಯ ಸರಕಾರಕ್ಕೆ ದೇವಸ್ಥಾನವನ್ನು ನಿಯಂತ್ರಿಸುವ ಅಧಿಕಾರವನ್ನು ಯಾರು ಕೊಡುತ್ತಾರೆ? ಕಲಂ 25 ಮತ್ತು 26 ರ ಮೂಲಕ ನಮ್ಮ ಸಂಸ್ಥೆಯನ್ನು ನಡೆಸಲು ನಮಗೆ ಸಂಪೂರ್ಣ ಅಧಿಕಾರವಿದೆ. ಮುಸಲ್ಮಾನರು ಅವರ ಧಾರ್ಮಿಕ ಸಂಸ್ಥೆಗಳನ್ನು ನಡೆಸಬಹುದಾದರೆ, ಹಿಂದೂಗಳೇಕೆ ನಡೆಸಬಾರದು? ಎಂದು ಜೈನ್ ಅವರು ಪ್ರಶ್ನಿಸಿದರು.

ಸಂಪಾದಕೀಯ ನಿಲುವು

ಮೊದಲು ಭಾಜಪ ಆಡಳಿತವಿರುವ ರಾಜ್ಯಗಳಲ್ಲಿನ ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಗೊಳಿಸಬೇಕು. ಅದು ಆದರೆ, ಇತರ ರಾಜ್ಯಗಳಲ್ಲಿ ಹಿಂದೂಗಳಿಗೆ ಸಂಬಂಧಿಸಿದ ಸರಕಾರಗಳ ಮೇಲೆ ಒತ್ತಡವನ್ನು ನಿರ್ಮಾಣ ಮಾಡಲು ಸುಲಭವಾಗುತ್ತದೆ.