‘ಕಲ್ಪವೃಕ್ಷ’ ಸಂಸ್ಥೆಯು ಎಂ.ಎಫ್. ಹುಸೇನ್ ಚಿತ್ರಗಳ ಮಾರಾಟ ನಿಲ್ಲಿಸಿದೆ !

ಹಿಂದೂಗಳು ಕಾನೂನು ರೀತಿಯಲ್ಲಿ ವಿರೋಧಿಸಿದರೆ ಯಶಸ್ಸು ಸಿಗುತ್ತದೆ ಎಂಬುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ ! ಇದಕ್ಕಾಗಿ ಹಿಂದೂಗಳು ಈಶ್ವರನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು !

ಮುಂಬಯಿ – ಸ್ಥಳೀಯ ‘ಕಲ್ಪವೃಕ್ಷ’ ಸಂಸ್ಥೆಯು ತನ್ನ ಜಾಲತಾಣದಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್. ಹುಸೇನ್ ಚಿತ್ರಗಳನ್ನು ಮಾರಾಟಕ್ಕೆ ಇಟ್ಟಿತ್ತು.

ಧರ್ಮಪ್ರೇಮಿಗಳು ಇದರ ವಿರುದ್ಧ ಪ್ರತಿಭಟಿಸಿದ ನಂತರ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಪ್ರಬೋಧನೆ ಮಾಡುವ ಪತ್ರವನ್ನು ಕಳುಹಿಸಿದ ನಂತರವೂ ಈ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ; ಆದರೂ ಧರ್ಮಾಭಿಮಾನಿ ಹಿಂದೂಗಳು ಇ-ಮೇಲ್ ಮತ್ತು ವಾಟ್ಸ್‌ಅಪ್ ಮೂಲಕ ಕಾನೂನಿನ ಚೌಕಟ್ಟಿನಲ್ಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿರೋಧಿಸಿದ ನಂತರ ಸಂಸ್ಥೆಯು ಹುಸೇನ್ ಚಿತ್ರಗಳನ್ನು ಮಾರಾಟದಿಂದ ತೆಗೆದುಹಾಕಿದೆ.