ಪ್ರತಿದಿನ ಬಾಲಸಾಧಕರ ವ್ಯಷ್ಟಿ ಸಾಧನೆಯ ‘ಆನ್‌ಲೈನ್ ವರದಿಯನ್ನು ತೆಗೆದುಕೊಳ್ಳುವ ಆಯೋಜನೆ ಮಾಡಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಜಿಲ್ಲಾಸೇವಕರಿಗೆ ಸೂಚನೆ

‘ಈಗಿನ ಬಾಲ ಸಾಧಕರು ಮತ್ತು ಯುವ ಸಾಧಕರು ಹಿಂದೂ ರಾಷ್ಟ್ರದ ಭಾವೀ ಪೀಳಿಗೆಯಾಗಿದ್ದಾರೆ. ಅವರಿಗೆ ಯೋಗ್ಯ ಮಾರ್ಗದರ್ಶನ ದೊರಕಿದರೆ, ಅವರ ಆಧ್ಯಾತ್ಮಿಕ ಉನ್ನತಿಯು ಶೀಘ್ರಗತಿಯಲ್ಲಿ ಆಗುವುದು. ಸದ್ಯ ಮಹಾರಾಷ್ಟ್ರದ ವಿದರ್ಭದಲ್ಲಿ ಬಾಲಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ಪ್ರತಿದಿನ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ‘ಅವರ ಸಾಧನೆಯ ಪ್ರಯತ್ನಗಳಿಗೆ ವೇಗ ದೊರೆತಿದೆ’, ಎಂಬುದು ಗಮನಕ್ಕೆ ಬಂದಿದೆ. ಎಲ್ಲೆಡೆಯ ಜಿಲ್ಲಾಸೇವಕರು ತಮ್ಮ ಜಿಲ್ಲೆಯ ಬಾಲ ಸಾಧಕರ ಮತ್ತು ಯುವ ಸಾಧಕರ ವ್ಯಷ್ಟಿ ಸಾಧನೆಯ ಕುರಿತು ಪ್ರತಿದಿನ ‘ಆನ್‌ಲೈನ್’ ವರದಿಯನ್ನು ತೆಗೆದುಕೊಳ್ಳುವ ಆಯೋಜನೆಯನ್ನು ಮಾಡಬೇಕು. ವರದಿಯ ಸಂದರ್ಭದಲ್ಲಿ ಕೆಲವು ಅಂಶಗಳನ್ನು ಕೆಳಗೆ ಕೊಡಲಾಗಿದೆ.

೧. ಬಾಲ ಸಾಧಕರ ಮತ್ತು ಯುವ ಸಾಧಕರನ್ನು ಮುಂದಿನಂತೆ ಮೂರು ವಯೋಮಿತಿಯಲ್ಲಿ ವರ್ಗೀಕರಣ ಮಾಡಬೇಕು !

ಅ. ಕುಮಾರ ಗುಂಪು : ವಯಸ್ಸು ೫ ರಿಂದ ೧೦ ವರ್ಷಗಳು ಮತ್ತು ವಯಸ್ಸು ೧೧ ರಿಂದ ೧೪ ವರ್ಷಗಳು

ಆ. ಕಿಶೋರ ಗುಂಪು : ವಯಸ್ಸು ೧೫ ರಿಂದ ೧೮ ವರ್ಷಗಳು

೨. ಒಂದು ಗುಂಪಿನಲ್ಲಿ ಹೆಚ್ಚೆಂದರೆ ೮ ಜನ ವಿದ್ಯಾರ್ಥಿ-ಸಾಧಕರಿರಬೇಕು.

೩. ವಿದ್ಯಾರ್ಥಿ-ಸಾಧಕರು ಮತ್ತು ವರದಿಸೇವಕರ ಸಂಖ್ಯೆಗನುಸಾರ ಗುಂಪಿನ ರಚನೆಯನ್ನು ಮಾಡಬೇಕು.

೪. ಚಿಂತನಕೋಷ್ಟಕಕ್ಕನುಸಾರ ವರದಿಯನ್ನು ತೆಗೆದುಕೊಳ್ಳಬೇಕು.

೫. ವಿದ್ಯಾರ್ಥಿ-ಸಾಧಕರು ಮಾಡಿದ ವೈಶಿಷ್ಟ್ಯಪೂರ್ಣ ಪ್ರಯತ್ನ, ಹಾಗೆಯೇ ಅವರಿಗೆ ಬಂದ ನಾವೀನ್ಯಪೂರ್ಣ ಅನುಭೂತಿಗಳನ್ನು ರಾಮನಾಥಿಗೆ ಸಂಕಲನ ವಿಭಾಗಕ್ಕೆ ಕಳುಹಿಸಬೇಕು.

ಬಾಲ ಮತ್ತು ಯುವ ಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುವ ಸಾಧಕರೇ, ಹಿಂದೂ ರಾಷ್ಟ್ರದ ಭಾವೀ ಪೀಳಿಗೆಯಾಗಿರುವ ಬಾಲ ಸಾಧಕರ ಮತ್ತು ಯುವಾ ಸಾಧಕರ ನಿಯಮಿತ ವರದಿಯನ್ನು ತೆಗೆದುಕೊಂಡು ಅವರ ಸಾಧನೆಗೆ ಯೋಗ್ಯ ದಿಶೆಯನ್ನು ನೀಡಿ. ಸಂತರು ಹೇಳಿದಂತೆ ಭವಿಷ್ಯದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ. ಹಿಂದೂ ರಾಷ್ಟ್ರದ ಭಾವೀ ಪೀಳಿಗೆಯನ್ನು ತಯಾರಿಸುವ ಅವಕಾಶ ಸಿಕ್ಕಿದ ಬಗ್ಗೆ ಕೃತಜ್ಞತೆಯನ್ನು ಇಟ್ಟುಕೊಂಡು ತಮ್ಮ ಸಾಧನೆಯ ದೃಷ್ಟಿಯಿಂದಲೂ ಅದರ ಲಾಭವನ್ನು ಪಡೆಯಿರಿ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧.೮.೨೦೨೦)

ವಿದ್ಯಾರ್ಥಿ-ಸಾಧಕರಿಗೆ ಸೂಚನೆಗಳು

ವಿದ್ಯಾರ್ಥಿ-ಸಾಧಕರೇ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಯಾವ ರೀತಿ ಶಾಲೆಯ ಅಭ್ಯಾಸವು ಆವಶ್ಯಕವಾಗಿರುತ್ತದೋ, ಅದೇ ರೀತಿ ಜನ್ಮಜನ್ಮಾಂತರಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವ್ಯಷ್ಟಿ ಸಾಧನೆಯು ಆವಶ್ಯಕವಾಗಿರುತ್ತದೆ. ಅದಕ್ಕಾಗಿ ನಿಯಮಿತವಾಗಿ ವ್ಯಷ್ಟಿ ಸಾಧನೆಯ ಪ್ರಯತ್ನವನ್ನು ಮಾಡಿರಿ ಮತ್ತು ಆ ಪ್ರಯತ್ನಗಳ ವರದಿಯನ್ನು ಪ್ರತಿದಿನ ಜಿಲ್ಲೆಯು ನಿಶ್ಚಿತಪಡಿಸಿದ ಸಾಧಕರಿಗೆ ನೀಡಿರಿ ! ತಮ್ಮ ಭಾಗದ ಜಿಲ್ಲಾಸೇವಕರು ತಮಗೆ ಇದರ ಆಯೋಜನೆಯನ್ನು ಮಾಡಿಕೊಡುವರು. ‘ಇಷ್ಟು ಚಿಕ್ಕ ವಯಸ್ಸಿನಲ್ಲಿ ವ್ಯಷ್ಟಿ ಸಾಧನೆಯ ವರದಿ ನೀಡುವ ಅವಕಾಶ ಸಿಗುತ್ತಿದೆ, ಎಂಬ ಬಗ್ಗೆ ಕೃತಜ್ಞತೆಯನ್ನು ಇಟ್ಟುಕೊಳ್ಳಿ !

ಪಾಲಕ ಸಾಧಕರಲ್ಲಿ ಮನವಿ

ತಮ್ಮ ಮಕ್ಕಳನ್ನು ವ್ಯಷ್ಟಿ ವರದಿಗೆ ಜೋಡಿಸಿ ಕೊಡುವುದು ಸಾಧಕ-ಪಾಲಕರ ಆಧ್ಯಾತ್ಮಿಕ ಜವಾಬ್ದಾರಿಯಾಗಿದೆ. ‘ವರದಿಯಲ್ಲಿ ಹೇಳಿದ ಪ್ರಯತ್ನವನ್ನು ಅವರು ಮಾಡುತ್ತಿದ್ದಾರಲ್ಲ ?, ಇದರ ಕಡೆಗೂ ಗಮನ ನೀಡಿ ತಮ್ಮ ಮಕ್ಕಳಿಗೆ ಆಧ್ಯಾತ್ಮಿಕ ದೃಷ್ಟಿಯಿಂದಲೂ ಸಹಾಯ ಮಾಡಿರಿ !