‘ಕಲ್ಪವೃಕ್ಷ’ ಸಂಸ್ಥೆಯ ಜಾಲತಾಣದಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಂ.ಎಫ್.ಹುಸೇನ್ ಚಿತ್ರಗಳ ಮಾರಾಟ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪತ್ರದ ಮೂಲಕ ವಿರೋಧ

ಇಲ್ಲಿಯವರೆಗಿನ ಯಾವುದೇ ಸರಕಾರ ಎಂ.ಎಫ್. ಹುಸೇನ್ ಇವರ ಹಿಂದೂ ದೇವತೆಗಳ ಹಾಗೂ ಭಾರತ ಮಾತೆಯ ಅವಮಾನವನ್ನು ಮಾಡುವ ಚಿತ್ರಗಳ ಮೇಲೆ ನಿಷೇಧ ಹೇರದೇ ಇದ್ದರಿಂದ ನಿರಂತರವಾಗಿ ಈ ರೀತಿಯ ಚಿತ್ರಗಳ ಮಾರಾಟ ಮಾಡಲಾಗುತ್ತಿದೆ, ಇದು ಎಲ್ಲ ಪಕ್ಷಗಳಿಗೆ ಹಾಗೂ ಅವರಿಗೆ ಪ್ರಶ್ನಿಸದ ಹಿಂದೂಗಳಿಗೆ ನಾಚಿಕೆಯ ವಿಷಯವಾಗಿದೆ !

ಮುಂಬಯಿ – ಸ್ಥಳೀಯ ‘ಕಲ್ಪವೃಕ್ಷ’ ಸಂಸ್ಥೆಯ ಜಾಲತಾಣದದಲ್ಲಿ ಚಿತ್ರಗಳ ಮಾರಾಟವಾಗುತ್ತಿದ್ದು, ಇದರಲ್ಲಿ ಹಿಂದೂ ದ್ವೇಷಿ ಚಿತ್ರಕಾರ ಎಂ.ಎಫ್.ಹುಸೇನ್ ಚಿತ್ರಗಳೂ ಇವೆ. ಆದ್ದರಿಂದ ಹಿಂದೂ ಧರ್ಮಾಭಿಮಾನಿಗಳು ಇದನ್ನು ವಿರೋಧಿಸುತ್ತಾ ಹುಸೇನ್ ಚಿತ್ರಗಳ ಮಾರಾಟವನ್ನು ನಿಲ್ಲಿಸಲು ಆಗ್ರಹಿಸುತ್ತಿದ್ದಾರೆ. ಧರ್ಮಪ್ರೇಮಿಗಳು ಈ ಬಗ್ಗೆ ಮಾಹಿತಿಯನ್ನು ಗಮನಕ್ಕೆ ತಂದುಕೊಟ್ಟನಂತರ ಹಿಂದೂ ಜನಜಾಗೃತಿ ಸಮಿತಿಯಿಂದ ಕಲ್ಪವೃಕ್ಷ ಸಂಸ್ಥೆಗೆ ಪತ್ರವನ್ನು ಕಳುಹಿಸಿ ಹುಸೇನ್ ಇವರ ಚಿತ್ರಗಳನ್ನು ಮಾರಾಟದಿಂದ ಹೊರಗಿಟ್ಟು ಅವರ ಪ್ರಶಂಸೆಯನ್ನು ಮಾಡುವುದು ನಿಲ್ಲಿಸುವಂತೆ ಆಗ್ರಹಿಸಿದೆ.

೧. ಈ ಪತ್ರದಲ್ಲಿ, ಹುಸೇನ್‌ ಹಿಂದೂ ದೇವತೆಗಳ, ಭಾರತ ಮಾತೆಯ ನಗ್ನ ಚಿತ್ರಗಳನ್ನು ಬಿಡಿಸಿ ಅವಮಾನ ಮಾಡಿದ್ದನು. ಅದೇರೀತಿ ಈ ಚಿತ್ರಗಳನ್ನು ಹರಾಜಿಗೆ ಇಡಲಾಗಿತ್ತು. ಆದ್ದರಿಂದ ಕೋಟಿಗಟ್ಟಲೆ ಹಿಂದೂ ಹಾಗೂ ರಾಷ್ಟ್ರಭಕ್ತರ ಭಾವನೆಗಳಿಗೆ ಘಾಸಿಯನ್ನುಂಟಾಗಿತ್ತು. ಇದರ ವಿರುದ್ಧ ಪೊಲೀಸರಲ್ಲಿ ೧ ಸಾವಿರದ ೨೫೦ ದೂರುಗಳು ನೊಂದಾಯಿಸಲಾಗಿತ್ತು.

೨. ಈ ಪತ್ರಕ್ಕೆ ಸಂಸ್ಥೆಯಿಂದ ಇಲ್ಲಿಯವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ. ಇನ್ನೊಂದುಕಡೆ ಧರ್ಮಪ್ರೇಮಿಗಳು ಈ ಕೆಳಗಿನ ಸಂಪರ್ಕ ಸಂಖ್ಯೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ವಿರೋಧಿಸಿ ಸಂಸ್ಥೆಗೆ ಈ ಚಿತ್ರವನ್ನು ತೆಗೆಯುವಂತೆ ಆಗ್ರಹಿಸುತ್ತಿದ್ದಾರೆ.

ವಿ. ಅಂಚೆ : [email protected], [email protected]

ವಾಟ್ಸ್‌ಅಪ್ ಸಂಖ್ಯೆ : ೯೮೨೦೦೫೪೬೨೬