ಮುಸ್ಲಿಮರಿಗೆ ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಅನುಮತಿಸಬಾರದು !

ಇಸ್ಲಾಂ ನಂತಹ ಧರ್ಮದಲ್ಲಿ ಬಹುಪತ್ನಿತ್ವದ ಪದ್ದತಿ ಇರುವ ಬಗ್ಗೆ ಹಾಗೂ ಇತರ ಧರ್ಮಗಳಲ್ಲಿ ಇದಕ್ಕೆ ನಿಷೇಧ ವಿಧಿಸುವಂತಹ ಅನುಮತಿಯನ್ನು ನೀಡಲು ಸಾಧ್ಯವಿಲ್ಲ, ಎಂದು ಕೋರಿ ಐವರು ನ್ಯಾಯವಾದಿ ವಿಷ್ಣು ಶಂಕರ ಜೈನ್ ಮೂಲಕ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ದೇಶದಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೨೬ ಕಛೇರಿಗಳ ಮೇಲೆ ಇ.ಡಿ.ಯ ದಾಳಿ

ವಿದೇಶಗಳಿಂದ ಸಿಗುವಂತಹ ದೇಣಿಗೆ ಹಾಗೂ ಆರ್ಥಿಕ ದುರುಪಯೋಗ(ಅವ್ಯವಹಾರ)ಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.ಯು) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೨೬ ಕಛೇರಿಗಳ ಮೇಲೆ ದಾಳಿ ನಡೆಸಿತು.

ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾನೂನಿನ ಮೂಲಪಾಠವೂ ತಿಳಿದಿಲ್ಲ ! – ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಛೀಮಾರಿ

ಕರ್ನಾಟಕದ ಗೋವಿಂದರಾಜ ನಗರದ ಮಸೀದಿಯೊಂದರಲ್ಲಿ ನಮಾಜ್ ವೇಳೆ ಧ್ವನಿವರ್ಧಕದಿಂದ ನಿಗದಿತ ಡೆಸಿಬೆಲ್‌ಗಿಂತ ಹೆಚ್ಚು ಶಬ್ದ ಹೊರ ಹೊಮ್ಮುತ್ತಿರುವು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ಛೀಮಾರಿ ಹಾಕಿದೆ.

ಭಾರತ ಇಡೀ ಜಗತ್ತಿನ ನೇತೃತ್ವವನ್ನು ವಹಿಸಲು ಸಕ್ಷಮ ! – ಆರ್.ಎಸ್.ಎಸ್ ಸರಸಂಘಚಲಕ ಡಾ. ಮೋಹನ ಭಾಗವತ

‘ವೈವಿಧ್ಯತೆಯನ್ನು ಜೋಡಿಸುವ ಘಟಕ ಕೇವಲ ಭಾರತದ ಹತ್ತಿರವಿದ್ದು, ಅದನ್ನು ಜಗತ್ತಿಗೆ ನೀಡುವುದಿದೆ. ಭಾರತವು ಇಡೀ ಜಗತ್ತಿನ ನೇತೃತ್ವ ವಹಿಸಲು ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕರು ಡಾ. ಮೋಹನ ಭಾಗವತ ಇವರು ದೂರಸಂಪರ್ಕ ವ್ಯವಸ್ಥೆ ನಡೆಸಿದ ಕಾರ್ಯಕ್ರಮದಲ್ಲಿ ಇದನ್ನು ಹೇಳಿದರು.

ಶಿವಮೊಗ್ಗದ ಬಜರಂಗ ದಳದ ಸಹಕಾರ್ಯದರ್ಶಿ ಶ್ರೀ. ನಾಗೇಶರವರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಿ ! – ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ಗುರವಾರದಂದು ಶಿವಮೊಗ್ಗ ನಗರ ಬಜರಂಗದಳದ ಸಹ ಕಾರ್ಯದರ್ಶಿ ನಾಗೇಶರವರು ವಾಯು ವಿಹಾರಕ್ಕೆ ಹೋದಾಗ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ

ಇಲ್ಲಿಯ ಬಜರಂಗ ದಳದ ಸಕ್ರಿಯ ಕಾರ್ಯಕರ್ತ ಶ್ರೀ. ನಾಗೇಶ ಇವರ ಮೇಲೆ ದೀಪಕ ಪೆಟ್ರೋಲ್‌ಪಂಪ್‌ನ ಪಕ್ಕದಲ್ಲಿರುವ ಉರ್ದೂ ಶಾಲೆಯ ಹತ್ತಿರ ೧೦ ರಿಂದ ೧೫ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಶ್ರೀ. ನಾಗೇಶ ಇವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚರ್ಚ್‌ನ ಪಾದ್ರಿಯಿಂದ ನಿಶ್ಚಯವಾದ ವಧುವನ್ನು ಲೈಂಗಿಕ ಕಿರುಕುಳ ನೀಡಿ ಮದುವೆಯಾಗಲು ನಿರಾಕರಣೆ

ಇಲ್ಲಿಯ ಪಾದ್ರಿ ಬಿನಿಲ್ ತನ್ನ ನಿಶ್ಚಿತ ವಧುವಿಗೆ ಲೈಂಗಿಕ ಕಿರುಕುಳ ಮತ್ತು ನಂತರ ಅವಳನ್ನು ಮದುವೆಯಾಗಲು ನಿರಾಕರಿಸಿದ ಘಟನೆ ನಡೆದಿದೆ. ಈ ಪಾದ್ರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಯುವತಿಗಾಗಿ ಪ್ರಾರ್ಥಿಸುವ ನೆಪದಲ್ಲಿ, ಪಾದ್ರಿ ಅವಳನ್ನು ತನ್ನ ಮನೆಗೆ ಕರೆದು ಅವಳೊಂದಿಗೆ ಲೈಂಗಿಕ ಸಂಪರ್ಕ ಪ್ರಸ್ತಾಪಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಕೋಲಕಾತಾ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಸಿ.ಎಂ. ಕರ್ಣನ್ ಬಂಧನ

ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯದ ಕೆಲವು ನ್ಯಾಯಾಧೀಶರು ಮಹಿಳಾ ನ್ಯಾಯವಾದಿ ಹಾಗೂ ನ್ಯಾಯಾಲಯದ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ, ಎಂದು ಆರೋಪಿಸಿದ ಪ್ರಕರಣದಲ್ಲಿ ಕೊಲಕಾತಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಸಿ.ಎಂ. ಕರ್ಣನ್ ಇವರನ್ನು ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಸರಕಾರ ‘ಲವ್ ಜಿಹಾದ್’ ತಡೆಗಟ್ಟಲು ಕಾನೂನು ರೂಪಿಸುತ್ತಿದೆ ! – ಹಣಕಾಸು ಸಚಿವ ಹಿಮಂತ ಬಿಸ್ವಾ ಸರಮಾ

ಅಸ್ಸಾಂನಲ್ಲಿಯೂ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ಬರುತ್ತಿದೆ. ಇದರ ಅಡಿಯಲ್ಲಿ, ಮದುವೆಗೆ ೧ ತಿಂಗಳ ಮೊದಲು ಮದುವೆಯಾಗಲಿಚ್ಛಿಸುವ ದಂಪತಿಗಳು ತಮ್ಮ ಧರ್ಮ ಮತ್ತು ಆದಾಯದ ಬಗ್ಗೆ ಸರಕಾರಕ್ಕೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ.

ನೇಪಾಳದಲ್ಲಿ ಅರಸೊತ್ತಿಗೆಯನ್ನು ಪುನಃ ಸ್ಥಾಪಿಸುವ ಮೂಲಕ ಹಿಂದೂ ರಾಷ್ಟ್ರವನ್ನು ಘೋಷಿಸಿ ! – ರಾಷ್ಟ್ರೀಯ ಶಕ್ತಿ ನೇಪಾಳ

ನೇಪಾಳ ಸರಕಾರದ ಚೀನಾ ಪರ ನೀತಿಗಳನ್ನು ನೋಡಿ ಅಲ್ಲಿನ ಹಿಂದೂ ಜನರು ದೇಶದಲ್ಲಿ ಅರಸೊತ್ತಿಗೆ ಪುನಃ ತರಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದ್ದಾರೆ. ದ್ವಿಚಕ್ರ ವಾಹನಗಳನ್ನು ಬೀದಿಗಿಳಿದು ಕಮ್ಯುನಿಸ್ಟ್ ಪಕ್ಷದ ಕೆ.ಪಿ. ಶರ್ಮಾ ಒಲಿ ಸರಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನೇಪಾಳದಲ್ಲಿ, ಮೇ ೨೮, ೨೦೦೮ ರಂದು ಅರಸೊತ್ತಿಗೆ ಕೊನೆಗೊಂಡಿತ್ತು. ಅಂದಿನಿಂದ, ದೇಶದಲ್ಲಿ ಕಮ್ಯುನಿಸ್ಟರು ಅಧಿಕಾರದಲ್ಲಿದ್ದಾರೆ.