ಹಿಂದೂ ರಾಷ್ಟ್ರದ ನಂತರವೇ ಇಂತಹ ಘಟನೆಗಳನ್ನು ತಡೆಯಬಹುದು !

೧. ಹಿಂದುತ್ವನಿಷ್ಠರನ್ನು ಯಾವಾಗ ರಕ್ಷಿಸುವಿರಿ ?

ಅಜ್ಞಾತ ಹಲ್ಲೆಕೋರರು ತಮಿಳುನಾಡಿನ ಹಿಂದೂ ಮಹಾಸಭಾ ರಾಜ್ಯ ಕಾರ್ಯದರ್ಶಿ ನಾಗರಾಜ ಅವರ ಮೇಲೆ ಹೊಸೂರಿನ ಆನಂದನಗರದಲ್ಲಿರುವ ಅವರ ಮನೆಯ ಸಮೀಪ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ನಾಗರಾಜ ಇವರು ಪೊಲೀಸರಿಂದ ರಕ್ಷಣೆ ಕೋರಿದ್ದರೂ ಪೊಲೀಸರು ನಿರಾಕರಿಸಿದ್ದರು.

೨. ಹಿಂದೂ ರಾಷ್ಟ್ರದ ನಂತರವೇ ಇಂತಹ ಘಟನೆಗಳನ್ನು ತಡೆಯಬಹುದು !

ದೀಪಾವಳಿಯಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಂಡಿದ್ದ ‘ಲುಡೋ’ ಚಲನಚಿತ್ರ ಹಿಂದೂ ದೇವತೆಗಳನ್ನು ಬಹುರೂಪಿ ವೇಶದಲ್ಲಿ ಚಿತ್ರಿಸುವ ಮೂಲಕ ಅವಮಾನಿಸಲಾಗಿದೆ. ಬ್ರಹ್ಮ, ವಿಷ್ಣು, ಶಂಕರ, ಮಹಾಕಾಳಿ ಮುಂತಾದ ದೇವತೆಗಳನ್ನು ಅವಮಾನಿಸಲಾಗಿದೆ.

೩. ಭಾರತದ ಲಜ್ಜಾಸ್ಪದ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !

ಲಂಚಗುಳಿತನ ವಿಷಯದಲ್ಲಿ ಭಾರತ ಏಷ್ಯಾದಲ್ಲಿ ಪ್ರಥಮ ಸ್ಥಾನದಲ್ಲಿದೆ. ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್’ ಸಂಸ್ಥೆಯು ನಡೆಸಿದ ಸಮೀಕ್ಷೆಯ ಪ್ರಕಾರ ಇದು ಬೆಳಕಿಗೆ ಬಂದಿದೆ. ಭಾರತದಲ್ಲಿ ಲಂಚಗುಳಿತನದ ಪ್ರಮಾಣ ಶೇ.೩೯ ರಷ್ಟಿದೆ.

೪. ವಾಸನಾಂಧ ಮತಾಂಧರ ಢೋಂಗಿತನವನ್ನು ತಿಳಿಯಿರಿ !

‘ಲವ್ ಜಿಹಾದ್’ ಇದೊಂದು ರಾಜಕೀಯ ಸ್ಟಂಟ್ ಆಗಿದೆ. ನಾನು ಮುಸಲ್ಮಾನ ಯುವಕರಿಗೆ ಕರೆ ನೀಡುವುದೇನೆಂದರೆ ಅವರು ಈ ಕಿರುಕುಳದಿಂದ ಪಾರಾಗಲು ಹಿಂದೂ ಯುವತಿಯರನ್ನು ಸಹೋದರಿಯರೆಂದು ಪರಿಗಣಿಸಬೇಕು ಎಂದು ಸಮಾಜವಾದಿ ಪಕ್ಷದ ಮುಖಂಡ ಎಸ್.ಟಿ. ಹಸನ ಇವರು ಲವ್ ಜಿಹಾದ್ ವಿರೋಧಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಹೇಳಿಕೆಯನ್ನು ನೀಡಿದ್ದಾರೆ.

೫. ಜಾತ್ಯತೀತವಾದಿಗಳು ಈಗೇಕೆ ಮೌನವಾಗಿದ್ದಾರೆ ?

ಸಂಗೀತಕಾರ ಬಂಧುಗಳಾದ ಸಾಜಿದ ಮತ್ತು ವಾಜಿದ್ ಅವರಲ್ಲಿ ಒಬ್ಬರಾದ ದಿವಂಗತ ವಾಜಿದ್ ಖಾನ್ ಅವರ ಪಾರ್ಸಿ ಪತ್ನಿ ಕಮಲರುಖ್ ಖಾನ್ ಅವರು ಅವರ ಮೇಲೆ ಮತಾಂತರಕ್ಕೆ ಒತ್ತಡ ಹೇರಲಾಗಿತ್ತು ಎಂದು ಹೇಳಿ ‘ಲವ್ ಜಿಹಾದ್ ವಿರೋಧಿ ಕಾನೂನನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

೬. ಇಂತಹ ರಾಷ್ಟ್ರ ವಿರೋಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !

೨೦೦೮ ರ ಮುಂಬಯಿನ ಭಯೋತ್ಪಾದಕ ದಾಳಿಯ ೧೨ ನೇ ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಲಷ್ಕರ್-ಎ-ತೋಯಬಾ ಮತ್ತು ತಾಲಿಬಾನ್ ಭಯೋತ್ಪಾದಕ ಸಂಘಟನೆಗಳ ಬೆಂಬಲವಾಗಿ ಮಂಗಳೂರಿನಲ್ಲಿ ಅಜ್ಞಾತರು ಪ್ರಚೋದನಕಾರಿ ಬರಹ ಬರೆದಿದ್ದಾರೆ.

೭. ಸರಕಾರವು ಇಂತಹ ದುಷ್ಕರ್ಮಿಗಳಿಗೆ ಯಾವಾಗ ಶಿಕ್ಷಿಸುವುದು ?

ದೆಹಲಿಯಲ್ಲಿ ಸ್ಥಳೀಯ ಕೈಲಾಶ ವಿಹಾರ್ ಪನ್ಸಾರಿ ಪ್ರದೇಶದ ಶಿವಶಕ್ತಿ ದೇವಸ್ಥಾನದಲ್ಲಿ ೧೨ ಕ್ಕೂ ಹೆಚ್ಚು ವಿಗ್ರಹಗಳನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.