ಮೊಘಲರು, ಬ್ರಿಟೀಶರು, ಸೋನಿಯಾ ಕಾಂಗ್ರೆಸ್ ಇವರು ತಮ್ಮ ಸಾಮರ್ಥ್ಯದಿಂದ ಅಲ್ಲ, ಬದಲಾಗಿ ಹಿಂದೂಗಳು ಸಂಘಟಿತರಾಗದೇ ಇದ್ದರಿಂದ ಯಶಸ್ವಿಯಾದರು ! – ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ

ಬೆಂಗಳೂರು – ಅಲೆಕ್ಸಾಂಡರ್, ಮೊಘಲರು, ಬ್ರಿಟೀಶರು, ಸೋನಿಯಾ ಕಾಂಗ್ರೆಸ್ ಇವರು ತಮ್ಮ ಸಾಮರ್ಥ್ಯದಿಂದ ಅಲ್ಲ, ಬದಲಾಗಿ ನಮ್ಮಲ್ಲಿ ಒಗ್ಗಟ್ಟು ಇಲ್ಲದ್ದರಿಂದ ಯಶಸ್ವಿಯಾದರು. ಆಕ್ರಮಣಕಾರಿ ಶಕ್ತಿಯಿಂದ ನಮ್ಮ ಧರ್ಮದ ರಕ್ಷಣೆ ಮಾಡಲು ನಾವು ಒಟ್ಟಾಗುವ ಸಮಯ ಬಂದಿದೆ, ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಸಿ.ಟಿ. ರವಿ ಇವರು ಕರ್ನಾಟಕದ ಮಾಜಿ ಮಂತ್ರಿಯಾಗಿದ್ದು ಮಹಾರಾಷ್ಟ್ರ ಹಾಗೂ ಗೋವಾದ ಬಿಜೆಪಿಯ ಉಸ್ತುವಾರಿ ಸಚಿವರಾಗಿದ್ದಾರೆ. ಅದೇರೀತಿ ಅವರಲ್ಲಿ ತಮಿಳುನಾಡಿನ ಚುನಾವಣೆಯ ಜವಾಬ್ದಾರಿಯೂ ಇದೆ. ಈ ಹಿಂದೆ ರವಿಯವರು, ಗೋ ಹತ್ಯೆ ಹಾಗೂ ಮದುವೆಗಾಗಿ ಮತಾಂತರ ಇವುಗಳ ಮೇಲೆ ಆದಷ್ಟು ಬೇಗನೇ ಕರ್ನಾಟಕದ ಸರಕಾರ ನಿಷೇಧ ಹೇರಲಿದೆ ಎಂದು ಹೇಳಿದ್ದರು.