ಭಾಗ್ಯನಗರ ಮಹಾನಗರ ಪಾಲಿಕೆ ತ್ರಿಶಂಕು ಸ್ಥಿತಿ !

ಬಿಜೆಪಿಯ ೪ ರಿಂದ ೪೮ ಸ್ಥಾನಗಳಿಗೆ ಜಿಗಿತ

ಭಾಗ್ಯನಗರ (ತೆಲಂಗಾಣ) – ಭಾಗ್ಯನಗರ ಮಹಾನಗರ ಪಾಲಿಕೆ ಚುನಾವಣೆಯ ನಂತರ ತ್ರಿಶಂಕು ಸ್ಥಿತಿ ಉಂಟಾಗಿದೆ. ತೆಲಂಗಾಣ ರಾಷ್ಟ್ರ ಸಮಿತಿಯು ಅತಿ ಹೆಚ್ಚು ೫೫ ಸ್ಥಾನಗಳನ್ನು ಗಳಿಸಿದೆ, ನಂತರದ ಸ್ಥಾನದಲ್ಲಿ ಬಿಜೆಪಿ ೪೮ ಸ್ಥಾನಗಳನ್ನು ಮತ್ತು ಮೂರನೇ ಸ್ಥಾನದಲ್ಲಿರುವ ಎಂ.ಐ.ಎಂ. ೪೪ ಸ್ಥಾನಗಳನ್ನು ಪಡೆದಿವೆ. ಕಾಂಗ್ರೆಸ್ ಕೇವಲ ೨ ಸ್ಥಾನಗಳಿಂದ ತೃಪ್ತಿಪಡಬೇಕಾಗಿದೆ. ಹಿಂದಿನ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಕೇವಲ ೪ ಸ್ಥಾನಗಳಿದ್ದವು. ಈ ಸಮಯದಲ್ಲಿ ರಾಷ್ಟ್ರೀಯತೆಯ ಮೇಲೆ ಒತ್ತು ನೀಡುವ ಮೂಲಕ ಬಿಜೆಪಿಯ ಸ್ಥಾನಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಯಾವುದೇ ಒಂದು ಪಕ್ಷಕ್ಕೆ ಬಹುಮತ ಸಿಗದೇ ಇರುವ ಕಾರಣ ಮಹಾಪಾಲಿಕೆಯು ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದು, ಈಗ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ‘ಬಿಜೆಪಿಯನ್ನು ವಿರೋಧಿಸಲು ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಎಂ.ಐ.ಎಂ. ಅವರು ಒಗ್ಗೂಡಿ ಅಧಿಕಾರವನ್ನು ಸ್ಥಾಪಿಸಬಹುದು’ ಎಂದು ಹೇಳಲಾಗುತ್ತಿದೆ.