ಸಾಧಕರಿಗೆ ಸೂಚನೆ

ಸಾಧಕರೇ, ಆರೋಗ್ಯದ ಬಗ್ಗೆ ಅಗತ್ಯವಿರುವ ಎಲ್ಲ ಪರೀಕ್ಷಣೆಯನ್ನು ಆದಷ್ಟು ಬೇಗನೇ ಮಾಡಿಸಿಕೊಳ್ಳಿರಿ !

ಪ್ರವಾಹ, ಭೂಕಂಪ, ೩ನೇ ಮಹಾಯುದ್ಧ, ಕೊರೋನಾ ಮಹಾಮಾರಿಯಂತಹ ವಿಪತ್ತು ಇವುಗಳಂತಹ ಆಪತ್ಕಾಲಗಳು ಭವಿಷ್ಯದಲ್ಲಿ ಬರಲಿರುವುದರಿಂದ ಹಾಗೂ ಇಂತಹ ಕಾಲದಲ್ಲಿ ಬದುಕುಳಿಯಲು ಏನು ಮಾಡಬೇಕು ಎಂಬುದನ್ನು ಸವಿಸ್ತಾರವಾಗಿ ತಿಳಿಸುವ ಲೇಖನಗಳನ್ನು ಜೂನ್‌ದಿಂದ ಸಪ್ಟೆಂಬರ್ ಅವಧಿಯ ‘ಸಾಪ್ತ್ತಾಹಿಕ ಸನಾತನ ಪ್ರಭಾತದಲ್ಲಿ ನೀಡಲಾಗಿದೆ. ಈ ಲೇಖನದಲ್ಲಿ ವಿವರಿಸಿದಂತೆ ಇಂತಹ ಆಪತ್ಕಾಲದಲ್ಲಿ ವೈದ್ಯರು, ಔಷಧಗಳು, ಆಸ್ಪತ್ರೆಗಳು ಇತ್ಯಾದಿಗಳು ಸಹಜವಾಗಿ ಸಿಗಲಾರವು ಮತ್ತು ಅದಕ್ಕಾಗಿ ಕಷ್ಟಪಡಬೇಕಾಗಬಹುದು. ಹಾಗಾಗಿ ಅಲೋಪಥಿಗನುಸಾರ ತಪಾಸಣೆ ಮಾಡಲಿಕ್ಕಿರುವಂತಹದ್ದನ್ನು, ಉದಾ. ವೈದ್ಯರಲ್ಲಿ ಹೋಗಿ ಸಾಮಾನ್ಯ ಪರೀಕ್ಷಣೆ ಮಾಡಿಸುವುದು ಇದರ ಸಹಿತ ರಕ್ತ-ಯುರಿನ್ ನಂತಹ ಚಿಕ್ಕಪುಟ್ಟ ಪರೀಕ್ಷಣೆಗಳು ಹಾಗೂ ಸಿಟಿ ಸ್ಕ್ಯಾನ್. ಎಂಜಿಯೋಗ್ರಾಫಿನಂತಹ ಹೆಚ್ಚು ಅಡಚಣೆಯುಳ್ಳ ವಿವಿಧ ಪರೀಕ್ಷಣೆಗಳನ್ನು ಸಹ ಮಾಡಿಸಿಕೊಳ್ಳಲೂ ಕಷ್ಟವಾಗಲಿದೆ, ಎಂಬುದು ಗಮನಕ್ಕೆ ಬರುತ್ತದೆ. ಆದ್ದರಿಂದ ಇದರಲ್ಲಿ ಅಗತ್ಯವಿರುವ ಪರೀಕ್ಷಣೆಯನ್ನು ಯೋಗ್ಯ ವೈದ್ಯಕೀಯ ಮಾರ್ಗದರ್ಶನವನ್ನು ಪಡೆದುಕೊಂಡು ಈಗಲೇ ಶುಶ್ರೂಷೆ ಮಾಡಿಸಿಕೊಳ್ಳುವುದು ಉತ್ತಮವಾಗಿದೆ. ಈ ಪರೀಕ್ಷಣೆಯನ್ನು ಯಾರು ಮಾಡಿಸಿಕೊಳ್ಳಬೇಕು ಎಂಬುದನ್ನು ವಿಚಾರ ಮಾಡುವಾಗ ಈ ಮುಂದಿನ ಅಂಶಗಳು ಉಪಯುಕ್ತವಾಗಲಿವೆ.

೧. ಯಾರಿಗೆ ಸದ್ಯ ಕೆಲವು ಸಣ್ಣಪುಟ್ಟ ತಕರಾರು (ತೊಂದರೆ) ಇದೆ; ಆದರೆ ಅದರ ಬಗ್ಗೆ ಅವರು ಜಾಸ್ತಿ ಗಮನ ಹರಿಸಿಲ್ಲ.

೨. ದೀರ್ಘಕಾಲಾವಧಿಯ ತನಕ ಕಾಳಜಿಯನ್ನು ವಹಿಸ ಬೇಕಾಗುವಂತಹ ಅನಾರೋಗ್ಯವಿರುವವರು ಉದಾ.  ರಕ್ತದೊತ್ತಡ, ಮಧುಮೇಹ

೨ ಅ. ಈಗ ಯಾವ ಕಾಯಿಲೆ ಇದೆ, ಅದು ನಿಯಂತ್ರಣದಲ್ಲಿ ಇದೆಯಲ್ಲ ಎಂಬುದನ್ನು ಪರಿಶೀಲಿಸಿಕೊಳ್ಳಲು.

೨ ಆ. ಇಂತಹ ಕಾಯಿಲೆಯಿಂದ ಇತರ ಇಂದ್ರಿಯಗಳ ಮೇಲೆ ಪರಿಣಾಮ ಆಗಿದೆಯೇ, ಎಂಬುದನ್ನು ಪರೀಕ್ಷಿಸಲು.

೨ ಇ. ಮೂಲ ಅನಾರೋಗ್ಯಕ್ಕೆ ಸಂಬಂಧಿಸಿಲ್ಲ ಅನಿಸುವಂತಹ ಇತರ ಕೆಲವು ಸಣ್ಣಪುಟ್ಟ ಶಾರೀರಿಕ ಅಡಚಣೆಗಳು ಇದ್ದಲ್ಲಿ ಅದನ್ನು ಪರಿಶೀಲಿಸಲು.

೩. ಮುಂಬರುವ ಸಮೀಪದ ಭವಿಷ್ಯದಲ್ಲಿ ಯಾವುದಾದರೊಂದು ವಿಶಿಷ್ಟ ಪರೀಕ್ಷಣೆಯನ್ನು ಮಾಡಬೇಕು, ಎಂದು ವೈದ್ಯರು ಹೇಳಿದ್ದಲ್ಲಿ.

೪. ಯಾವುದಾದರೊಂದು ಗಂಭೀರವಾದ ಕಾಯಿಲೆಯಿಂದ ಗುಣಮುಖರಾಗಿದ್ದರೂ ಮತ್ತೆ ಮತ್ತೆ ಉದ್ಭವಿಸುವ ಸಾಧ್ಯತೆಯಿರುವಂತಹ ಕಾಯಿಲೆ ಉದಾ. : ಕರ್ಕರೋಗ

೫. ಆಹಾರಕ್ಕನುಗುಣವಾದ, ವಯಸ್ಸಿಗನುಗುಣವಾದ, ಉದ್ಯೋಗಕ್ಕನುಸಾರ ಅಥವಾ ಆನುವಂಶಿಕತೆಯಂತಹ ಕಾರಣಗಳಿಂದ ಕೆಲವು ವಿಶಿಷ್ಟ ವ್ಯಾಧಿ ಅಥವಾ ವಿಕಾರಗಳು ಉದ್ಭವಿಸುತ್ತಿಲ್ಲವಲ್ಲ ಎಂದು ಖಾತ್ರಿ ಪಡಿಸಲು ಹಾಗೂ ಬರದಂತೆ ತಡೆಗಟ್ಟಲು ಆರೋಗ್ಯ ತಪಾಸಣೆ(ಹೆಲ್ತ್ ಚೆಕಪ್)ಗಳನ್ನು ಮಾಡಿಸುವುದು. ಉದಾ. ೩೦ ವರ್ಷಕ್ಕಿಂತ ಮೇಲ್ಪಟ್ಟ ಜನರು, ಮತ್ತು ತಮ್ಮ ಪೋಷಕರಿಗೆ ಮಧುಮೇಹ ಇದ್ದಲ್ಲಿ ಇಂತಹವರು ಮಧುಮೇಹ ಪ್ರಾರಂಭವಾಗಿದೆಯೇನು ಅಥವಾ ಇಲ್ಲದಿದ್ದಲ್ಲಿ ಆಗುವ ಸಾಧ್ಯತೆಗಳು ಇದೆಯೇ, ಎಂಬುದು ಪರೀಕ್ಷೆ ಮಾಡಿಸಿಕೊಳ್ಳುವುದು. ಅದಕ್ಕಾಗಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.

– ಆಧುನಿಕ ವೈದ್ಯ ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೭.೧೧.೨೦೨೦)