ಬಿಹಾರದ ಅನೇಕ ಸ್ಥಳಗಳಲ್ಲಿ ‘ಬಾಬರಿಯನ್ನು ಮರೆಯಬೇಡಿ’ ಎಂದು ಪಿ.ಎಫ್.ಐ. ಭಿತ್ತಿಪತ್ರಗಳನ್ನು ಹಾಕಿದೆ !

ಬಾಂಬ್ ಸ್ಫೋಟ, ಗಲಭೆ, ಲವ್ ಜಿಹಾದ್ ಮುಂತಾದ ಅನೇಕ ರಾಷ್ಟ್ರ ವಿರೋಧಿ ಮತ್ತು ಹಿಂದೂ ವಿರೋಧಿ ಚಟುವಟಿಕೆಗಳಲ್ಲಿ ಪಿ.ಎಫ್.ಐ. ಭಾಗಿಯಾಗಿರುವಾಗ ಹಾಗೂ ಅದರಲ್ಲಿ ಸಾತತ್ಯತೆ ಇಡುತ್ತಿದ್ದರಿಂದ ಈ ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಸರಕಾರ ಯಾರಿಗೆ ಕಾಯುತ್ತಿದೆ ? ಎಂದು ಹಿಂದೂಗಳಿಗೆ ಅನಿಸುತ್ತಿದೆ !

ಪಾಟಲಿಪುತ್ರ (ಬಿಹಾರ) – ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಬಿಹಾರದ ಕಟಹರಿ, ಪೂರ್ಣಿಯಾ ಮತ್ತು ದರಭಾಂಗಾದ ಕೆಲವು ಕಡೆಗಳಲ್ಲಿ ಬಾಬ್ರಿ ನೆಲಸಮಗೊಳಿಸಿದ ದಿನನಿಮಿತ್ತ ಅಕ್ಷೇಪಾರ್ಹ ಭಿತ್ತಿಪತ್ರಗಳನ್ನು ಹಾಕಿತ್ತು. ಅದರಲ್ಲಿ ‘ಡಿಸೆಂಬರ್ ೬ ಅನ್ನು ಮರೆಯಬೇಡಿ.’ ಇದರಲ್ಲಿ ಬಾಬ್ರಿಯ ಮೂರು ಗುಮ್ಮಟಗಳನ್ನು ತೋರಿಸಲಾಗಿತ್ತು. ಇದರ ನಂತರ ಬಿಹಾರ ಪೊಲೀಸರು ರಾಜ್ಯದಲ್ಲಿ ಎಚ್ಚರಿಕೆ ನೀಡಿದ್ದರು.

(ಸೌಜನ್ಯ : The HD News)

ಕೆಲವು ದಿನಗಳ ಹಿಂದೆ, ದರಭಂಗಾ ಮತ್ತು ಪೂರ್ಣಿಯಾ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಪಿ.ಎಫ್.ಐ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತು. ದರಭಂಗಾದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಸನಾವುಲ್ಲಾ ಮನೆಯ ಮೇಲೂ ದಾಳಿ ನಡೆಸಲಾಯಿತು. ಎರಡೂ ಸ್ಥಳಗಳಲ್ಲಿ ಮತಾಂಧರ ಗುಂಪೊಂದು ಈ.ಡಿ. ಅಧಿಕಾರಿಗಳ ವಾಹನಗಳನ್ನು ಸುತ್ತುವರೆದು ಪ್ರತಿಭಟನೆ ನಡೆಸಿತ್ತು.