ಪರಾತ್ಪರ ಗುರು ಡಾ. ಆಠವಲೆಯವರ ಪ್ರೀತಿಯ ವ್ಯಾಪಕತೆ

ಪರಾತ್ಪರ ಗುರು ಡಾ. ಆಠವಲೆ

ಸಂಘಟನಾತ್ಮಕ, ದೇಶಗಳ, ಪ್ರಾಂತಗಳ, ಧಾರ್ಮಿಕ ಬಂಧನಗಳಿಲ್ಲ ! : ಪರಾತ್ಪರ ಗುರು ಡಾಕ್ಟರರ ಪ್ರೀತಿಗೆ ಸಂಘಟನಾತ್ಮಕ, ಪ್ರಾಂತ ಅಥವಾ ದೇಶಗಳ ಅಥವಾ ಧಾರ್ಮಿಕ ಇಂತಹ ಯಾವುದೇ ಬಂಧನಗಳಿಲ್ಲ. ಸನಾತನದ ಸಾಧಕರ ಸಾಧನೆ ಚೆನ್ನಾಗಿ ಆಗಬೇಕೆಂದು ಅವರು ಎಷ್ಟು ಪ್ರಯತ್ನಿಸುತ್ತಾರೆಯೋ, ಅಷ್ಟೇ ಪ್ರಯತ್ನವನ್ನು ಅವರು ಇತರ ಸಂಘಟನೆಗಳ ಕಾರ್ಯಕರ್ತರು ಸಾಧನೆಯನ್ನು ಮಾಡಬೇಕೆಂದು ಮಾಡುತ್ತಾರೆ. ತೊಂದರೆಯಲ್ಲಿರುವ ಹಿಂದುತ್ವನಿಷ್ಠರಿಗೆ ಆಧಾರವನ್ನು ನೀಡಲು ಅವರು ಆಗಾಗ ಸಾಧಕರಿಗೆ ಹೇಳಿದ್ದಾರೆ. ವಿದೇಶದಿಂದ ಹಿಂದೂ ಧರ್ಮದ ಕುರಿತು ತಿಳಿದುಕೊಳ್ಳಲು ಬಂದಿರುವ ಹಿಂದೂಗಳಲ್ಲದ (ಹಿಂದೂಯೇತರ) ಜಿಜ್ಞಾಸುಗಳ ಹಿಂದೂ ಧರ್ಮದ ಬಗ್ಗೆ ಇರುವ ಸಂಶಯಗಳನ್ನು ಅವರು ಗಂಟೆಗಟ್ಟಲೆ ನಿವಾರಣೆ ಮಾಡಿದ್ದಾರೆ.

ವಿರೋಧಕರ ವಿಷಯದಲ್ಲಿಯೂ ವೈಯಕ್ತಿಕ ದ್ವೇಷವಿಲ್ಲ ! : ಸನಾತನಕ್ಕೆ ಅನೇಕ ಜನರು ಅನೇಕ ಮಾರ್ಗಗಳಿಂದ ವಿರೋಧ ಮಾಡಿದರು. ಈ ಎಲ್ಲ ವಿರೋಧಕರ ವಿಷಯದಲ್ಲಿಯೂ ಅವರ ಮನಸ್ಸಿನಲ್ಲಿ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಈಶ್ವರಪ್ರಾಪ್ತಿಗಾಗಿ ಪ್ರಯತ್ನಿಸುವ ಸಾಧಕರಿಗೆ ತೊಂದರೆಗಳನ್ನು ಕೊಟ್ಟರೆ ಬಹುದೊಡ್ಡ ಪಾಪ ತಗಲುತ್ತದೆ. ಇಂತಹ ಪಾಪ ಆ ವ್ಯಕ್ತಿಗೆ ತಗಲಬಾರದೆಂದು ‘ಸನಾತನ ಪ್ರಭಾತ ಪತ್ರಿಕೆಗಳಿಂದ ಅವರ ಆಕ್ಷೇಪಣೆಗಳಿಗೆ ಉತ್ತರಗಳನ್ನು ನೀಡಲಾಗುತ್ತದೆ / ಪ್ರತಿವಾದವನ್ನು ಮಾಡಲಾಗುತ್ತದೆ. ‘ಅವರ ತಪ್ಪು ಅವರಿಗೆ ತಿಳಿಯಬೇಕು ಮತ್ತು ಅವರ ನೈತಿಕ ಅಧಃಪತನವಾಗಬಾರದು. ‘ವಿರೋಧಿಸುವವರಿಗೂ ಹಾನಿ ಆಗಬಾರದೆಂಬುದು ಕೂಡ ಒಂದು ರೀತಿಯಲ್ಲಿ ಅವರ ಪ್ರೀತಿಯೇ ಆಗಿದೆ !

ವಿಕಲ್ಪಗಳಿಂದ ಸಾಧನೆಯನ್ನು ಬಿಟ್ಟು ಹೋಗಿರುವ ಸಾಧಕರ ಬಗ್ಗೆಯೂ ಆತ್ಮೀಯತೆ : ವಿಕಲ್ಪಗಳಿಂದಾಗಿ ಸಾಧನೆಯಿಂದ ದೂರವಾಗಿರುವ ಸಾಧಕರ ಬಗ್ಗೆಯೂ ಅವರ ಮನಸ್ಸಿನಲ್ಲಿ ದ್ವೇಷ ನಿರ್ಮಾಣವಾಗುವುದಿಲ್ಲ. ವಿಕಲ್ಪಗಳಿಂದ ದೂರವಾಗಿರುವ ಸಾಧಕರು ಕೆಲವು ಕಾಲಾವಧಿಯ ಬಳಿಕ ಮರಳಿ ಬಂದಾಗಲೂ ಪರಾತ್ಪರ ಗುರು ಡಾಕ್ಟರರು ಅವರನ್ನು ಅಷ್ಟೇ ಸಹಜವಾಗಿ ಆತ್ಮೀಯತೆಯಿಂದ ತಮ್ಮವರನ್ನಾಗಿ ಮಾಡಿಕೊಳ್ಳುತ್ತಾರೆ.