ಗುರುಗಳು ಸುಖದ ಸಾಗರ | ಗುರುಗಳು ಪ್ರೇಮದ ಆಗರ

ಸುಲಭ ಸಾಧನಾಮಾರ್ಗವನ್ನು ನೀಡಿದ ಕೃಪಾಳು ಗುರುದೇವರ ಬಗ್ಗೆ ಸಾಧಕರು ಆಂತರ್ಯದಲ್ಲಿ ಕೃತಜ್ಞತಾಭಾವವನ್ನು ನಿರ್ಮಾಣ ಮಾಡಬೇಕು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಈ ಚೈತನ್ಯಮಯ ಭಾರತಭೂಮಿಗೆ ಈಶ್ವರಪ್ರಾಪ್ತಿಗಾಗಿ ಬಿಸಿಲು-ಮಳೆ ಮುಂತಾದವುಗಳನ್ನು ಲೆಕ್ಕಿಸದೇ ಕಠಿಣ ತಪಶ್ಚರ್ಯವನ್ನು ಮಾಡುವ ಋಷಿಮುನಿಗಳ ಪರಂಪರೆ ಲಭಿಸಿದೆ. ಅವರಿಗೆ ಅನೇಕ ವರ್ಷಗಳ ಕಾಲ ಸಾಧನೆಯನ್ನು ಮಾಡಿದ ನಂತರವೇ ಈಶ್ವರಪ್ರಾಪ್ತಿ, ಈ ಉಚ್ಚ ಧ್ಯೇಯವನ್ನು ಪ್ರಾಪ್ತ ಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು.

ನಮ್ಮ ದಯಾಳು ಮತ್ತು ಸರ್ವಜ್ಞರಾದ ಪ.ಪೂ. ಗುರುದೇವರು ಭೀಕರ ಕಲಿಯುಗವಿದ್ದರೂ ನಮಗೆ ಸಾಧ್ಯವಾಗುವಂತಹ ಸುಲಭ ಸಾಧನಾಮಾರ್ಗವನ್ನು ಲಭ್ಯ ಮಾಡಿಕೊಟ್ಟಿದ್ದಾರೆ ಮತ್ತು ಪ.ಪೂ. ಗುರುದೇವರ ತಳಮಳದಿಂದಾಗಿ ಸಾಧಕರು ಪ್ರಗತಿಯ ಪಥದ ಕಡೆಗೆ ಮಾರ್ಗಕ್ರಮಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಧಕರು ಆಂತರ್ಯದಲ್ಲಿ ಕೃತಜ್ಞತಾ ಭಾವವನ್ನಿಟ್ಟುಕೊಂಡು ಪ್ರಯತ್ನಿಸುವುದು ಅಪೇಕ್ಷಿತವಿದೆ.

– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಪ್ರತಿಕ್ಷಣ ಇತರರಿಗೆ ಆನಂದವನ್ನು ನೀಡಲು ಜೀವಿಸುವವನು ದೇವರಿಗೆ ಇಷ್ಟವಾಗುವುದಿಲ್ಲವೇ ?

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

‘ಇತರರಿಗೆ ಪ್ರೀತಿಯನ್ನು ಕೊಡಲು ಒಂದು ಕ್ಷಣ ಮಾತ್ರವೂ ಸಾಕಾಗುತ್ತದೆ; ಆದರೆ ಆ ಕ್ಷಣವನ್ನು ನಮಗೆ ಗುರುತಿಸಲು ಬರಬೇಕು. ಹತ್ತಿರ ಬಂದಿರುವ ಸಾಧಕನಿಗೆ ಕೆಲವೊಮ್ಮೆ ಕೈಯನ್ನು ಸ್ಪರ್ಶಿಸಿ ಮತ್ತು ಕೆಲವೊಮ್ಮೆ ದೂರದಿಂದ ನಕ್ಕು, ಕೆಲವೊಮ್ಮೆ ದೂರವಿರುವವರ ಕಡೆ ನೋಡಿ ‘ಒಳ್ಳೆಯದು (‘ಟಾಟಾ) ಮಾಡಿದ ಹಾಗೆ ಕೈಯನ್ನು ಅಲುಗಾಡಿಸಿ ಮತ್ತು ಕೆಲವೊಮ್ಮೆ ದೂರದಿಂದಲೇ ಇತರರ ಕಡೆಗೆ ನೋಡಿ ನಮಸ್ಕಾರ ಮಾಡಿಯೂ ನಮಗೆ ಇತರರಿಗೆ ಆನಂದವನ್ನು ನೀಡಲು ಬರುತ್ತದೆ. ಈ ಆನಂದವು ಶಬ್ದಗಳ ಆಚೆಗಿನದಾಗಿರುತ್ತದೆ. ಬಹಳಷ್ಟು ಸಲ ಕೇವಲ ನಮ್ಮ ಮುಖವನ್ನು ಪ್ರಸನ್ನವಾಗಿಟ್ಟುಕೊಂಡೂ ಆ ಆನಂದವನ್ನು ನಮಗೆ ಇತರರಿಗೆ ಕೊಡಲು ಬರುತ್ತದೆ. ಆನಂದದ ಪ್ರತಿಯೊಂದು ಕ್ಷಣವನ್ನು ಹುಡುಕಿ ಅದಕ್ಕೆ ಪೂರಕ ಕೃತಿಯನ್ನು ಮಾಡಿದರೆ ನಮ್ಮ ಸಾಧನೆಯಾಗುತ್ತದೆ. ಹಾಗೆಯೇ ಸಮಷ್ಟಿಯನ್ನೂ ನಮ್ಮವರನ್ನಾಗಿ ಮಾಡಿಕೊಳ್ಳಲು ಬರುತ್ತದೆ. ಪ್ರತಿಕ್ಷಣ ಇತರರಿಗೆ ಆನಂದವನ್ನು ನೀಡಲು ಜೀವಿಸುವವನು ದೇವರಿಗೆ ಇಷ್ಟವಾಗುವುದಿಲ್ಲವೇ !

– (ಸದ್ಗುರು) ಸೌ. ಅಂಜಲಿ ಗಾಡಗೀಳ (೧೪.೪.೨೦೨೦)