‘ವಿವಿಧ ಒಳ್ಳೆಯ ಮತ್ತು ಕೆಟ್ಟ ಅನುಭೂತಿಗಳ ಕುರಿತು ನನ್ನ ಸಂದರ್ಭದಲ್ಲಿನ ವಸ್ತುಸ್ಥಿತಿಯು ಜ್ಞಾನೇಶ್ವರಿಯಲ್ಲಿ ಹೇಳಿದಂತೆ ಮುಂದಿನಂತೆ ಇದೆ.
ಹೇ ಮಜಚಿಸ್ತವ ಜಾಹಲೇ | ಪರಿ ಮ್ಯಾಂ ನಾಹೀಂ ಕೇಲೇಂ ||
– ಜ್ಞಾನೇಶ್ವರೀ, ಅಧ್ಯಾಯ ೪, ದ್ವಿಪದಿ ೮೧
ಅರ್ಥ : ಇದು ನನ್ನಿಂದಾಗಿ ಆಯಿತು; ಆದರೆ ನಾನು ಮಾಡಲಿಲ್ಲ ಇದರಲ್ಲಿನ ‘ಮಜಚಿಸ್ತವ ಜಾಹಲೆ’ (ನನ್ನಿಂದಾಗಿ ಆಯಿತು), ಅಂದರೆ ನನ್ನ ಅಸ್ತಿತ್ವದಿಂದಾಯಿತು, ಇದರಲ್ಲಿನ ‘ನಾನು’ ಕೂಡ ಭಗವಂತನದ್ದೇ ಆಗಿದೆ, ‘ಮ್ಯಾ ನಾಹಿ ಕೆಲೆ’ (ನಾನು ಮಾಡಲಿಲ್ಲ), ಅಂದರೆ ಕರ್ತೃತ್ವವು ನನ್ನಲ್ಲಿ ಇಲ್ಲ. ಇದರ ಒಂದು ಸುಂದರ ಉದಾಹರಣೆಯೆಂದರೆ ಸೂರ್ಯನು ಉದಯಿಸಿದಾಗ ಎಲ್ಲರೂ ಏಳುತ್ತಾರೆ, ಹೂವುಗಳು ಅರಳುತ್ತವೆ.ಇದು ಕೇವಲ ಸೂರ್ಯನ ಅಸ್ತಿತ್ವದಿಂದಾಗುತ್ತದೆ. ಸೂರ್ಯನು ಯಾರಿಗೂ ‘ಏಳಿರಿ’ ಅಥವಾ ಹೂವುಗಳಿಗೆ ‘ಅರಳಿರಿ’ ಎಂದು ಹೇಳುವುದಿಲ್ಲ !’
– (ಪರಾತ್ಪರ ಗುರು) ಡಾ. ಆಠವಲೆ