‘ಕೊರೋನಾ ಸಾಂಕ್ರಾಮಿಕ ರೋಗದ ನಡುವೆಯೂ ಲಕ್ಷಾಂತರ ಹಿಂದೂಗಳ ಮತಾಂತರ’ ಈ ಆನ್‌ಲೈನ್ ವಿಶೇಷ ಸಂವಾದದ ಮೂಲಕ ‘ಮತಾಂತರ ನಿಷೇಧ’ದ ಬೇಡಿಕೆ !

ಕೊರೋನಾ ಸಾಂಕ್ರಾಮಿಕತೆ ಸಮಯದಲ್ಲಿಯೂ ಕ್ರೈಸ್ತ ಮಿಶನರಿಗಳು ಹಿಂದೂಗಳನ್ನು ಮತಾಂತರಿಸುವುದು ಮಾನವೀಯತೆಗೆ ದೊಡ್ಡ ಕಳಂಕ ! – ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಶ್ರೀ ಪ್ರಣವಾನಂದ ಸರಸ್ವತಿಜಿ ಮಹಾರಾಜ

ಕೊರೋನಾದ ಜಾಗತಿಕ ಸಾಂಕ್ರಾಮಿಕ ಕಾಲದಲ್ಲಿ ನಿಸ್ವಾರ್ಥ ಭಾವದಿಂದ ಸಹಕಾರದ ಅವಶ್ಯಕತೆಯಿರುವಾಗ ಮತಾಂತರ ಮಾಡುವವರು ‘ಹಿಂದೂಗಳ ಮತಾಂತರ ಮಾಡುವ ಒಂದು ದೊಡ್ಡ ಅವಕಾಶವಾಗಿದೆ’ ಎಂದು ತಿಳಿಯುತ್ತಿದ್ದಾರೆ ಮತ್ತು ಅವರು ಹಾಗೆ ಮಾಡಲೂ ಪ್ರಯತ್ನಿಸುತ್ತಿದ್ದಾರೆ. ಇದು ಮಾನವೀಯತೆಗೆ ದೊಡ್ಡ ಕಳಂಕವಾಗಿದೆ. ನೈಸರ್ಗಿಕ ವಿಪತ್ತುಗಳು, ಯುದ್ಧ, ನಕ್ಸಲವಾದ ನಡೆಯುತ್ತಿದ್ದರೆ ಹಿಂದೂಗಳ ಮತಾಂತರ ಮುಂದುವರಿಯುತ್ತದೆ, ಇದೇ ಇಚ್ಛೆಯನ್ನು ಮತಾಂತರ ಮಾಡುವ ಕ್ರೈಸ್ತ ಮಿಶನರಿಗಳು ಇಟ್ಟುಕೊಂಡಿದ್ದಾರೆ. ಹಿಂದೂಗಳ ದೇವತೆಗಳ ಬಗ್ಗೆ ದ್ವೇಷ ಸೃಷ್ಟಿಸಿ ಹಾಗೂ ‘ಕ್ರೈಸ್ತ ಪಂಥವನ್ನು ಆಚರಣೆಗೆ ತರುವ ಮೂಲಕ ಯೇಸುವಿನ ಹೆಸರನ್ನು ಉಚ್ಚರಿಸಿದರೆ ಕರೋನಾ ನಿಮಗೆ ಯಾವುದೇ ಹಾನಿ ಮಾಡುವುದಿಲ್ಲ’, ಹೀಗೆ ಹೇಳುತ್ತಾ ಕ್ರೈಸ್ತ ಮಿಶನರಿಗಳು ಮತಾಂತರಗೊಳಿಸುತ್ತಾರೆ, ಎಂದು ಗಂಭೀರವಾದ ಪ್ರತಿಪಾದನೆಯನ್ನು ಇಂದೋರ್‌ನ ಶ್ರೀ ಅಖಂಡಾನಂದ ಆದಿವಾಸಿ ಗುರುಕುಲ ಆಶ್ರಮದ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಶ್ರೀ ಪ್ರಣವಾನಂದ ಸರಸ್ವತಿಜಿ ಮಹಾರಾಜರು ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಈ ಕಾರ್ಯಕ್ರಮದಲ್ಲಿ ‘ಕೊರೋನಾ ಮಹಾಮಾರಿಯ ಕಾಲದಲ್ಲಿಯೂ ಲಕ್ಷಗಟ್ಟಲೆ ಹಿಂದೂಗಳ ಮತಾಂತರ : ಏಕೆ ಮತ್ತು ಹೇಗೆ ?’ ಈ ಆನ್‌ಲೈನ್ ‘ವಿಶೇಷ ವಿಚಾರಸಂಕಿರಣ’ದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ‘ಫೇಸ್‌ಬುಕ್’ ಮತ್ತು ‘ಯೂಟ್ಯೂಬ್’ ಮೂಲಕ 14777 ಜನರು ವೀಕ್ಷಿಸಿದ್ದಾರೆ.

ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ಚೇತನ ಜನಾರ್ದನ ಅವರು ಮಾತನಾಡುತ್ತಾ, ‘ಅನಫೋಲ್ಡಿಂಗ್ ವರ್ಲ್ಡ’ ಈ ಸಂಸ್ಥೆಯ ವಿಶೇಷ ಕಾರ್ಯಕಾರಿ ಅಧಿಕಾರಿ ಡೆವಿಡ್ ರಿವಸ್ ಇವರು ಇತ್ತಿಚೆಗೆ ‘ನಮ್ಮ ಸಂಸ್ಥೆಯ ಮೂಲಕ, ಕೊರೋನಾದ ಕಾಲಾವಧಿಯಲ್ಲಿ ಭಾರತದಲ್ಲಿ ಒಂದು ಲಕ್ಷ ಹಿಂದೂಗಳನ್ನು ಮತಾಂತರಿಸಲಾಯಿತು ಮತ್ತು 50 ಸಾವಿರ ಹಳ್ಳಿಗಳನ್ನು ದತ್ತು ಪಡೆದುಕೊಂಡಿದೆ’ ಎಂದು ಹೇಳಿದ್ದಾರೆ. ಬೈಬಲ್ ಅನ್ನು ವಿವಿಧ ಭಾಷೆಗಳಿಗೆ ಭಾಷಾಂತರಿಸುವ ಹೆಸರಿನಲ್ಲಿ, ಈ ವಿದೇಶಿ ಸಂಸ್ಥೆಯ ಮತಾಂತರ ಕಾರ್ಯವು ನಮ್ಮ ದೇಶದಲ್ಲಿ ನಡೆಯುತ್ತಿದೆ. ನಾವು ಇನ್ನೂ ಕೊರೋನಾದ ಮೇಲೆ ಸಂಪೂರ್ಣ ಹಿಡಿತ ಸಾಧಿಸದಿದ್ದರೂ, ಈ ಪರಿಸ್ಥಿತಿಯ ದುರುಪಯೋಗ ಪಡೆದು ಹಿಂದೂಗಳನ್ನು ಮತಾಂತರ ಮಾಡುವ ಸಂಸ್ಥೆಯ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳು ಒತ್ತಾಯಿಸಬೇಕು, ಎಂದರು.

ಆಂಧ್ರಪ್ರದೇಶದ ‘ಹಿಂದೂ ದೇವಾಲಯ ಪರೀಕ್ಷಣ ಸಮಿತಿ’ಯ ಕೃಷ್ಣ ಜಿಲ್ಲಾ ಸಂಯೋಜಕರಾದ ಶ್ರೀ. ಕೆ. ಉಮಾಶಂಕರ ಅವರು ಮಾತನಾಡುತ್ತಾ, ‘ಚರ್ಚಗಳು ಮತ್ತು ಮಸೀದಿಗಳು ಪಡೆದ ಹಣವನ್ನು ಅವರವರ ಪಂಥದ ಪ್ರಚಾರಕ್ಕಾಗಿ ಬಳಸಲಾಗುತ್ತದೆ; ಆದರೆ ಹಿಂದೂಗಳ ದೇವಾಲಯಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದರ ಹಣವನ್ನು ಸರಕಾರಿ ಕೆಲಸಗಳಿಗೆ ಬಳಸಲಾಗುತ್ತದೆ. ಭಾರತವು ಇನ್ನೂ 2-3 ವಿಭಜನೆಗಳನ್ನು ನೋಡಲು ಬಯಸದಿದ್ದರೆ, ದೇಶದಲ್ಲಿ ‘ಮತಾಂತರ ನಿಷೇಧ’ ಕಾನೂನನ್ನು ತರಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ, ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳು ಜಾತಿ ರಾಜಕಾರಣದ ಮೂಲಕ ಮತಾಂತರಗೊಳ್ಳುತ್ತಿದ್ದಾರೆ. ಆರೋಗ್ಯ ಮತ್ತು ಆರ್ಥಿಕ ವಿಷಯದಲ್ಲಿ ಈ ಮತಾಂತರಗಳು ನಡೆಯುತ್ತಿವೆ’, ಎಂದರು.

ಈ ಸಮಯದಲ್ಲಿ ಮುಂಬಯಿನ ವೈದ್ಯಕೀಯ ತಜ್ಞ ಡಾ. ಅಮಿತ ಥಡಾನಿಯವರು ಮಾತನಾಡುತ್ತಾ, ಹಿಂದೂಗಳನ್ನು ಆಸ್ಪತ್ರೆಗಳಲ್ಲಿ ವಿವಿಧ ವಿಧಾನಗಳ ಮೂಲಕ ಮತಾಂತರಗೊಳಿಸಲಾಗುತ್ತದೆ. ಅನೇಕರಿಗೆ ಈ ಬಗ್ಗೆ ತಿಳಿದಿದ್ದರೂ, ಅವರು ಅದನ್ನು ಬಹಿರಂಗವಾಗಿ ಚರ್ಚಿಸುತ್ತಿರುವಂತೆ ಕಾಣುತ್ತಿಲ್ಲ. ಯಾವಾಗ ಈ ಬಗ್ಗೆ ಮುಕ್ತ ಚರ್ಚೆ ಆಗುತ್ತದೆಯೋ. ಆಗ ಜಾಗೃತಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇತ್ತೀಚೆಗೆ ‘ಇಂಡಿಯನ್ ಮೆಡಿಕಲ್ ಅಸೊಸಿಯೇಶನ್’ನ ಅಧ್ಯಕ್ಷ ಡಾ. ಜಯಲಾಲ ಇವರು ಮತಾಂತರವನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ಅಂತಹ ವ್ಯಕ್ತಿಯು ಹುದ್ದೆಯಲ್ಲಿ ಹೇಗಿರಬಹುದು? ಈ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು.