ಪೊಲೀಸರು ರಾತ್ರಿಯಿಡೀ ಆಮ್ಲಜನಕ ವಾಹನವನ್ನು ತಡೆ ಹಿಡಿದು ನಿಲ್ಲಿಸಿದುದೇ ಕೊರೋನಾ ರೋಗಿಯ ಮರಣವಾಗಿದೆ ಎಂದು ಹೇಳಿಕೆ.

ಪೊಲೀಸ್ ಅಧೀಕ್ಷಕರನ್ನು ವಿಚಾರಣೆಗೊಳಪಡಿಸುವ ಆದೇಶ !

ಜಿಂದ್ (ಹರಿಯಾಣ) – ಪೊಲೀಸರು ಇಲ್ಲಿ ರಾತ್ರಿಯಿಡೀ ಆಮ್ಲಜನಕವನ್ನು ಸಾಗಿಸುವ ವಾಹನವನ್ನು ನಿಲ್ಲಿಸಿದ್ದರಿಂದ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಆದರೆ ಪೊಲೀಸರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ‘ಈ ವಾಹನದಲ್ಲಿ ಎರಡು ಆಮ್ಲಜನಕ ಸಿಲಿಂಡರ್‌ಗಳು ಪತ್ತೆಯಾಗಿತ್ತು. ನಂತರ ಚಾಲಕನು ಘಟನಾಸ್ಥಳದಲ್ಲಿ ಅಗತ್ಯ ದಾಖಲೆಗಳನ್ನು ತೋರಿಸಲಿಲ್ಲ. ದಾಖಲೆಗಳನ್ನು ತೋರಿಸಿದ ನಂತರ ಅವರನ್ನು ರಾತ್ರಿಯೇ ಬಿಡಲಾಗಿತ್ತು’ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಂದ್ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಅವರು, ಆರೋಪಗಳಲ್ಲಿ ಸತ್ಯಗಳು ಕಂಡುಬಂದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇಲ್ಲಿ ಇನ್ನೋವಾ ವಾಹನ ಚಾಲಕನೊಬ್ಬನು ಕೊರೋನಾ ರೋಗಿಯ ಜೀವ ಉಳಿಸಲು ಪಂಜಾಬ್‌ನ ಧುರಿಯಿಂದ ಆಮ್ಲಜನಕ ಸಿಲಿಂಡರ್ ಸಾಗಿಸುತ್ತಿದ್ದನು. ಆತನಿಗೆ ರೋಗಿಯ ಆಮ್ಲಜನಕ ಮುಗಿಯುವ ಮೊದಲು ಹರಿಯಾಣಾ ಹಾಗೂ ದೆಹಲಿಯನ್ನು ದಾಟಿ ರಾತ್ರಿ ೩ ಗಂಟೆಯ ಹೊತ್ತಿಗೆ ಗಾಜಿಯಾಬಾದ್‌ಗೆ ಪ್ರಯಾಣಿಸಬೇಕಾಗಿತ್ತು; ಆದರೆ, ರಾತ್ರಿ ೧೧ ರ ಸುಮಾರಿಗೆ ಜಿಂದ್ ಪೊಲೀಸರು ಆತನನ್ನು ಮಧ್ಯದಲ್ಲಿ ತಡೆದರು. ವಾಹನದ ತಪಾಸನೇ ಮುಗಿಸಿದ ನಂತರ ಬೆಳಿಗ್ಗೆ ಬಿಡುಗಡೆ ಮಾಡಲಾಯಿತು; ಆದರೆ ಅಷ್ಟೊತ್ತಿಗೆ ಸಂಬಂಧಪಟ್ಟ ಕೊರೋನಾ ರೋಗಿಯು ಮೃತಪಟ್ಟಿದನು.