ಪರಾತ್ಪರ ಗುರು ಡಾ. ಆಠವಲೆಯವರು ತಾವು ಉಪಯೋಗಿಸಿದ ವಸ್ತುಗಳನ್ನು ಸಾಧಕರಿಗೆ ಚೈತನ್ಯವನ್ನು ಪಡೆಯಲು ಕೊಡುವುದು

(ಪೂ.) ಸಂದೀಪ ಆಳಶಿ

‘ಪರಾತ್ಪರ ಗುರು ಡಾ. ಆಠವಲೆಯವರು ಉಪಯೋಗಿಸಿದ ಎಲ್ಲ ವಸ್ತುಗಳಲ್ಲಿ, ಉದಾ. ಬಾಲಪೆನ್, ಪೆನ್ಸಿಲ್, ಹಸ್ತಲಿಖಿತ ಕಾಗದ, ಬಾಚಣಿಕೆ, ಬಟ್ಟೆ, ಹಾಗೆಯೇ ಅವರ ಕೂದಲು ಮುಂತಾದವುಗಳಲ್ಲಿ ಸಕಾರಾತ್ಮಕ ಶಕ್ತಿ ಇರುವುದು ಅನೇಕ ಪ್ರಯೋಗಗಳಲ್ಲಿ ಸಿದ್ಧವಾಗಿದೆ ಹಾಗೂ ಸಾಧಕರಿಗೆ ಅಂತಹ ಅನುಭೂತಿಗಳೂ ಬಂದಿವೆ. ಇದು ಗಮನಕ್ಕೆ ಬಂದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ೨೦ ವರ್ಷಗಳ ಹಿಂದೆಯೇ ತಾವು ಉಪಯೋಗಿಸಿದ ವಸ್ತುಗಳನ್ನು ಸಾಧಕರಿಗೆ ಚೈತನ್ಯ ಸಿಗಲೆಂದು ಕೊಡಲು ಪ್ರಾರಂಭಿಸಿದರು. ‘ಸಾಧಕರಿಗೆ ಸಕಾರಾತ್ಮಕ ಶಕ್ತಿ ಸಿಗಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ವಸ್ತುಗಳನ್ನು ಸಾಧಕರಿಗೆ ಕೋಣೆಯಲ್ಲಿನ ಕಪಾಟಿನಲ್ಲಿ ಅಥವಾ ಹಾಸಿಗೆಯ ಕೆಳಗಡೆ ಇಡಲು ಕೊಡುತ್ತಾರೆ. ಇತರ ಸಂತರು ಭಕ್ತರಿಗೆ ವಿಭೂತಿಯನ್ನು ನೀಡುತ್ತಾರೆ, ಆದರೆ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಚೈತನ್ಯವನ್ನು ದೊರಕಿಸಿಕೊಡಲು ಇಂತಹ ವಸ್ತುಗಳನ್ನು ಕೊಡುತ್ತಾರೆ !

– (ಪೂ.) ಶ್ರೀ. ಸಂದೀಪ ಆಳಶಿ