ಬಾಗಲಕೋಟೆಯಲ್ಲಿ ಲಂಚ ಸಂಗ್ರಹದ ಪ್ರಕರಣದಲ್ಲಿ ಆರೋಗ್ಯಾಧಿಕಾರಿಯ ಬಂಧನ

ಬಾಗಲಕೋಟೆ : ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಹಾಂತೇಶ ನಿಡಸನೂರ ಇವರನ್ನು ಲಂಚ ಸಂಗ್ರಹದ ಪ್ರಕರಣದಲ್ಲಿ ಬಂಧಿಸಲಾಗಿದೆ. ಇವರು ಜಿಲ್ಲೆಯಲ್ಲಿರುವ ಆರೋಗ್ಯ ಇಲಾಖೆಯ ವಿವಿಧ ಕಚೇರಿಗಳಿಂದ ಪರ್ಸೆಂಟೇಜ್ ಆಧಾರದಲ್ಲಿ ಲಂಚದ ಹಣ ಸಂಗ್ರಹಿಸುತ್ತಿದ್ದರು. ಪ್ರಯಾಣ ಭತ್ಯೆ ಮಂಜೂರು ಸಂಬಂಧ ಈ ಲಂಚ ಸ್ವೀಕರಿಸಲಾಗುತ್ತಿದ್ದು, ಆ ಹಣವನ್ನು ಕಾರಿನಲ್ಲಿ ತರುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಈ ಕಾರಿನಲ್ಲಿ ೫ ಲಕ್ಷದ ೮ ಸಾವಿರ ರೂಪಾಯಿ ಪತ್ತೆ ಆಗಿತ್ತು.