‘ಸನಾತನ ಪ್ರಭಾತ ಪತ್ರಿಕೆಯು ನಿಮ್ಮದೇ ಆಗಿದೆ, ಎಂದು ಹಿಂದುತ್ವನಿಷ್ಠರಿಗೆ ಹೇಳಿ ಆಧಾರ ನೀಡುವುದು

‘ಸನಾತನ ಪ್ರಭಾತವು ‘ಸನಾತನ ಸಂಸ್ಥೆಯ ಮುಖವಾಣಿ ಪತ್ರಿಕೆಯಾಗಿದೆ, ಎಂದು ಸಮಾಜವು ತಿಳಿಯುತ್ತದೆ; ಆದರೆ ಪರಾತ್ಪರ ಗುರು ಡಾಕ್ಟರರು ಮಾತ್ರ ‘ಸನಾತನ ಪ್ರಭಾತವು ‘ಸಮಸ್ತ ಹಿಂದುತ್ವವಾದಿಗಳ ಮುಖವಾಣಿ ಪತ್ರಿಕೆ ಎಂದು ಕಾರ್ಯ ಮಾಡಬೇಕು, ಎಂಬ ಬೋಧನೆಯನ್ನು ಸಾಧಕರಿಗೆ ನೀಡಿದ್ದಾರೆ. ಅವರನ್ನು ಭೇಟಿಯಾಗಲು ಬರುವ ಪ್ರತಿಯೊಬ್ಬ ಹಿಂದುತ್ವನಿಷ್ಠರಿಗೆ ಅವರು, ‘ಸನಾತನ ಪ್ರಭಾತ ಪತ್ರಿಕೆಯು ನಿಮ್ಮದೇ ಆಗಿದೆ ಎಂದು ತಿಳಿಯಿರಿ ಮತ್ತು ನಿಮ್ಮ ಸಂಘಟನೆಯ ವಾರ್ತೆಗಳನ್ನು ‘ಸನಾತನ ಪ್ರಭಾತದಲ್ಲಿ ಮುದ್ರಿಸಲು ನೀಡಿರಿ ! ‘ಕರ್ನಾಟಕದಲ್ಲಿ ‘ಒಂದು ಸಂಘಟನೆಯು ಧರ್ಮರಕ್ಷಣೆಯ ಕಾರ್ಯವನ್ನು ಸತತವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುತ್ತಿತ್ತು. ಆಗ ಪರಾತ್ಪರ ಗುರು ಡಾಕ್ಟರರು ಆ ಸಂಘಟನೆಯ ಪದಾಧಿಕಾರಿಗಳಿಗೆ, ‘ಸನಾತನ ಪ್ರಭಾತ ‘ಕನ್ನಡ ಸಾಪ್ತಾಹಿಕದಲ್ಲಿ ಒಂದು ಪುಟವನ್ನು ನಾವು ನಿಮ್ಮ ಸಂಘಟನೆಗಾಗಿ ಕೊಡುವೆವು. ಆವಶ್ಯಕ ಲೇಖನಗಳನ್ನು ನೀವು ಕಳುಹಿಸಿರಿ ನಾವು ಪ್ರಕಟಿಸುವೆವು ಎಂದು ಹೇಳಿದರು.

ಹಿಂದುತ್ವನಿಷ್ಠ ಜಾಲತಾಣಗಳಲ್ಲಿ ಅತ್ಯಧಿಕ ವಾಚಕ ಸಂಖ್ಯೆಯಿರುವ hindujagruti.org ಜಾಲತಾಣದಲ್ಲಿಯೂ ವಿವಿಧ ಸಂಘಟನೆಗಳ ಕಾರ್ಯಗಳ ಸುದ್ದಿಗಳನ್ನು ನಿತ್ಯ ಪ್ರಕಟಿಸಲಾಗುತ್ತದೆ ಇದನ್ನು ಮಾಡುವುದರ ಹಿಂದೆ ‘ಹಿಂದುತ್ವನಿಷ್ಠರು ಮಾಡುತ್ತಿರುವ ಕಾರ್ಯದಲ್ಲಿ ನಮ್ಮದೊಂದು ಸಣ್ಣ ಸಹಯೋಗ, ಎಂಬ ದೃಷ್ಟಿಕೋನವನ್ನು ಪರಾತ್ಪರ ಗುರು ಡಾಕ್ಟರರು ನೀಡಿದ್ದಾರೆ.