ಲಡಾಖ್‌ನಲ್ಲಿನ ಪರಾಕ್ರಮದ ಗೌರವಾನ್ವಿತರು : ಎಸ್.ಎಫ್.ಎಫ್.’ (ಸ್ಪೆಶಲ್ ಫ್ರಂಟಿಯರ್ ಫೋರ್ಸ್) ಸೈನಿಕರು !

‘ಲಡಾಖ್‌ನಲ್ಲಿ ಪೆಂಗಾಂಗ್ ತ್ಸೋ ಸರೋವರದ ದಕ್ಷಿಣದಲ್ಲಿ ಆಗಸ್ಟ್ ೨೯ ಮತ್ತು ೩೦ ರಂದು ಚೀನಾದ ೫೦೦ ರಿಂದ ೬೦೦ ಸೈನಿಕರು ಭಾರತೀಯ ಪ್ರದೇಶದೊಳಗೆ ನುಗ್ಗಲು ಪ್ರಯತ್ನಿಸುತ್ತಿರುವುದು ಭಾರತೀಯ ಸೈನಿಕರಿಗೆ ಕಾಣಿಸಿತು. ಆಗ ಭಾರತೀಯ ಸೈನಿಕರು ಅವರನ್ನು ಒಳಗೆ ಬರಲು ಬಿಟ್ಟರು, ಆ ಮೇಲೆ ಹೋರಾಟ ಆರಂಭವಾಯಿತು.

ಟೆರರ್ ಮ್ಯಾಗಝಿನ್ !

ಭಾರತ ಮತ್ತು ಅಮೇರಿಕಾದ ಭೌಗೋಲಿಕ ಪರಿಸ್ಥಿತಿ, ಅರ್ಥ ಕಾರಣ, ಸಮಾಜಕಾರಣ ಭಿನ್ನವಾಗಿದೆ. ಅದಕ್ಕಿಂತಲೂ ಹೆಚ್ಚು ಎರಡೂ ದೇಶಗಳ ಸಂಸ್ಕೃತಿ ಬೇರೆಯೇ ಆಗಿದೆ. ಆದ್ದರಿಂದ ಭಾರತದಲ್ಲಿ ಬಂದು ಪತ್ರಿಕೋದ್ಯಮ ಮಾಡಲಿಕ್ಕಿದ್ದರೆ ಇಲ್ಲಿನ ಇತಿಹಾಸ, ಭೂಗೋಲ ಮತ್ತು ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕಾಗುತ್ತದೆ. ‘ಗೂಗಲ್ನಲ್ಲಿ ‘ಸರ್ಚ್ ಮಾಡಿ ಭಾರತವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರೆ, ಸುಳ್ಳು ಇತಿಹಾಸವೇ ಮುಂದೆ ಬರುತ್ತದೆ.

ಮ್ಯಾಕ್‌ಮೋಹನ ರೇಖೆ ಮತ್ತು ಚೀನಾದ ವಿರೋಧ

ಸದ್ಯದ ಸ್ಥಿತಿಯಲ್ಲಿ ಭಾರತ-ಚೀನಾ ಗಡಿ ವಿವಾದದಲ್ಲಿನ ಎಲ್ಲ ರೇಖೆಗಳನ್ನು ಮುರಿಯುವ ಚೀನಾದ ಪ್ರಯತ್ನದ ನಂತರದ ಘಟನಾಕ್ರಮಗಳು ಸಂಪೂರ್ಣ ಇತಿಹಾಸವನ್ನು ಬದಲಾಯಿಸಿದವು. ೧೯೪೭ ರಲ್ಲಿ ಬ್ರಿಟಿಷರಿಗೆ ಭಾರತವನ್ನು ಬಿಡ ಬೇಕಾಯಿತು, ಅನಂತರ ೩ ವರ್ಷಗಳಲ್ಲಿ ಅಂದರೆ ೧೯೫೦ ರಲ್ಲಿ ಚೀನಾ ಟಿಬೇಟನ್ನು ಕಬಳಿಸಿತು. ೧೯೫೪ ರಲ್ಲಿ ಭಾರತ-ಚೀನಾದ ನಡುವೆ ಪಂಚಶೀಲ ಒಪ್ಪಂದವಾಯಿತು; ಆದರೆ ಅದೇ ಸಮಯದಲ್ಲಿ ಭಾರತ ಸ್ವತಃ ಗಡಿಯನ್ನು ಸ್ಥಾಪಿಸಲು ಆರಂಭಿಸಿತು.

ಶತ್ರುರಾಷ್ಟ್ರಗಳ ಮೈತ್ರಿ !

ಅಮೇರಿಕಾದ ಮಧ್ಯಸ್ಥಿಕೆಯೊಂದಿಗೆ ಸಂಯುಕ್ತ ಅರಬ್ ಎಮಿರೇಟ್ (ಯುಎಇ) ಮತ್ತು ಬಹರೀನ್ ಈ ಇಸ್ಲಾಮೀ ದೇಶಗಳು ಇಸ್ರೇಲ್ ಜೊತೆಗೆ ಮೈತ್ರಿ ಮಾಡಿಕೊಂಡಿವೆ. ಈ ಮೂರೂ ದೇಶಗಳು ಈಗ ‘ಮಿತ್ರ ದೇಶಗಳೆಂದು ಗುರುತಿಸಲ್ಪಡುವವು ಹಾಗೂ ವ್ಯಾಪಾರ, ಆರೋಗ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಅವುಗಳಿಗೆ ಒಟ್ಟಾಗಿ ಕಾರ್ಯ ಮಾಡಲಿಕ್ಕಿವೆ. ಇತ್ತೀಚೆಗಷ್ಟೇ ಸಂಯುಕ್ತ ಅರಬ್ ಎಮಿರೇಟ್ ಮತ್ತು ಇಸ್ರೇಲ್ ಇವುಗಳ ನಡುವೆ ಶಾಂತಿ ಒಪ್ಪಂದವಾಯಿತು.

ರಕ್ಷಣಾ ಕ್ಷೇತ್ರದಲ್ಲಿನ ಆತ್ಮನಿರ್ಭರ ಭಾರತ : ವಾಸ್ತವ ಮತ್ತು ಅಪೇಕ್ಷಿತ !

ನಮ್ಮ ರಕ್ಷಣಾ ತಜ್ಞರು ನಾವು ಯಾವುದೇ ಕೆಲಸಗಳನ್ನು ಖಾಸಗಿ ಕಾರ್ಖಾನೆಗಳಿಗೆ ಕೊಡಬಾರದು, ಏಕೆಂದರೆ ಅದರಿಂದ ರಹಸ್ಯ ಬಯಲಾಗುವುದು; ಎಂದು ಸರಕಾರಕ್ಕೆ ತಪ್ಪು ಸಲಹೆಯನ್ನು ನೀಡಿದರು. ಇದರಿಂದ ಆ ಪ್ರಯತ್ನವೂ ಆಗಲಿಲ್ಲ. ನೀವು ಸುಖೋಯಿ ವಿಮಾನಗಳನ್ನು ರಶ್ಯಾದಿಂದ ಖರೀದಿಸುತ್ತಿದ್ದೀರಿ, ಅವುಗಳನ್ನು ಭಾರತದ ಉದ್ಯಮಿಗಳು ತಯಾರಿಸಿದರೆ, ಹೇಗೆ ರಹಸ್ಯ ಬಯಲಾಗುವುದು ?

ದೇವಸ್ಥಾನಗಳ ಭೂಮಿಯ ‘ಮತಾಂತರ !

ಭಾರತ ದೇಶವು ಜಗತ್ತಿನ ‘ಆಧ್ಯಾತ್ಮಿಕ ರಾಜಧಾನಿಯಾಗಿದೆ. ಸನಾತನ ಹಿಂದೂ ಧರ್ಮ ಮತ್ತು ದೇವಸ್ಥಾನ ಸಂಸ್ಕೃತಿ ಈ ಆಧ್ಯಾತ್ಮಿಕತೆಯ ಸಾರವಾಗಿದೆ. ಹಿಂದಿನ ಕಾಲದಲ್ಲಿ ಪರಕೀಯ ಆಕ್ರಮಣಕಾರರು ದೇವಸ್ಥಾನಗಳನ್ನು ಧ್ವಂಸಗೊಳಿಸಿ ದೇವತೆಗಳ ಮೂರ್ತಿಗಳನ್ನು ವಿದ್ರೂಪಗೊಳಿಸುತ್ತಿದ್ದರೆ, ಇಂದು ‘ಸೆಕ್ಯುಲರ್ ವಾದದ ಮುಖವಾಡ ತೊಟ್ಟ ಸರಕಾರಗಳು ದೇವಸ್ಥಾನಗಳ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿವೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ ತೆರೆಮರೆಯಲ್ಲಿ ನಡೆಯುತ್ತಿರುವ ದೇವಸ್ಥಾನಗಳ ಸಂಪತ್ತಿನ ಕೊಳ್ಳೆ ಹೊಡೆಯುವಿಕೆಯು ಚಿಂತೆಯ ವಿಷಯವಾಗಿದೆ.

ಗಲಭೆಯ ಬಣ್ಣ

ಕುರಾನ್ ಪ್ರತಿಯನ್ನು ಸುಟ್ಟಿರುವುದನ್ನು ತಿಳಿದು ‘ಅಲ್ಲಾ-ಹು-ಅಕಬರ್ ಎಂದು ಘೋಷಣೆ ಕೂಗುತ್ತಾ ಅಲ್ಲಿ ನೆಲೆಸಿದ್ದ ನಿರಾಶ್ರಿತ ಮತಾಂಧರು ಗಲಭೆಯನ್ನು ಭುಗಿಲೆಬ್ಬಿಸಿ ಕಂಡ ಕಂಡಲ್ಲಿ ಬೆಂಕಿ ಹಚ್ಚತೊಡಗಿದರು. ಪೊಲೀಸರ ಮೇಲೆ ಕಲ್ಲು ತೂರಿದರು. ೩೦೦ಕ್ಕಿಂತ ಹೆಚ್ಚು ಮತಾಂಧರ ಗುಂಪು ಈ ಕೃತ್ಯವನ್ನು ಮಾಡಿತು. ರಸಮಸ್ ಪಾಲುಡಾನ್‌ರು ‘ನಾರ್ಡಿಕ್ ದೇಶಗಳ ಇಸ್ಲಾಮೀಕರಣ ಈ ವಿಷಯದ ಕುರಿತಾದ ಸಭೆಯಲ್ಲಿ ಪಾಲ್ಗೊಳ್ಳಲು ಬರುವವರಿದ್ದರು.

ಅಶಿಸ್ತಿನ ವಿರುದ್ಧ ಆಕ್ರೋಶ !

ಸದ್ಯ ಭಾರತವು ಜಗತ್ತಿನಲ್ಲಿ ಕೊರೋನಾಬಾಧಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ಈಗ ಪ್ರತಿದಿನ ೬೦ ರಿಂದ ೭೦ ಸಾವಿರಗಳ ಮಧ್ಯದ ಸಂಖ್ಯೆಯಲ್ಲಿ ಕೊರೋನಾಬಾಧಿತರು ಕಂಡು ಬರುತ್ತಿದ್ದಾರೆ. ಒಂದು ವೇಳೆ ಈ ವೇಗವು ಇದೇ ರೀತಿ ಮುಂದುವರಿದರೆ, ಭಾರತವು ಬೇಗನೆ ೧ ಕೋಟಿ ರೋಗಿಗಳ ಸಂಖ್ಯೆಯ ಹಂತವನ್ನು ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ.

ಈಶ್ವರೀ ದೂತನ ಸ್ವರ ಬಾನೆತ್ತರಕ್ಕೆ ತಲುಪಿತು !

ಸಂಗೀತಶಕ್ತಿಯೊಂದಿಗೆ ನಿಮ್ಮ ಯೋಗಶಕ್ತಿ ಜೊತೆಗೂಡಿದರೆ, ದ್ವಿಶಕ್ತಿಗಳು ಸೇರಿಕೊಂಡು ನೀವು ‘ರಾಕೆಟ್ ನಲ್ಲಿ ದೇವರೆಡೆಗೆ ಹೋಗುವಿರಿ ಎಂದು ಇಂದಿನ ಕಾಲದಲ್ಲಿಯೂ ದೃಢವಾಗಿ ಪ್ರತಿಪಾದಿಸುವ ಮೇವಾತಿ ಮನೆತನದ ಪದ್ಮವಿಭೂಷಣ ಪಂಡಿತ ಜಸರಾಜರು ಈಗ ನಿಜವಾಗಿಯೂ ಭಗವಂತನ ಚರಣಗಳಲ್ಲಿ ಅವರ ಸೇವೆಗೆ ರುಜುವಾಗಲು ಈ ಭೂತಲದಿಂದ ನಿರ್ಗಮಿಸಿದರು.

‘ಜಾತ್ಯತೀತ ಗಲಭೆ !

‘ಈ ಗಲಭೆ ಪೂರ್ವನಿಯೋಜಿತವಾಗಿತ್ತು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಹೇಳಿದ್ದಾರೆ. ಅದು ಸತ್ಯವೂ ಆಗಿದೆ. ಮತಾಂಧರ ಪ್ರತಿಯೊಂದು ಗಲಭೆಯೂ ಪೂರ್ವನಿಯೋಜಿತವಾಗಿರುತ್ತದೆ. ಮೂಲದಲ್ಲಿ ಮತಾಂಧರು ಯಾವಾಗಲೂ ಗಲಭೆ ಮಾಡಲು ಸಿದ್ಧರಾಗಿಯೇ ಇರುತ್ತಾರೆ. ಅವರ ಬಳಿ ಅಕ್ರಮ ಶಸ್ತ್ರಾಸ್ತ್ರಗಳು ದೊಡ್ಡ ಪ್ರಮಾಣದಲ್ಲಿರುತ್ತವೆ. ಅವರಿಗೆ ಗಲಭೆ ಮಾಡಲು ಕೇವಲ ಕಾರಣದ ಅವಶ್ಯಕತೆಯಿರುತ್ತದೆ.