ಈಶ್ವರೀ ದೂತನ ಸ್ವರ ಬಾನೆತ್ತರಕ್ಕೆ ತಲುಪಿತು !

ನಮ್ಮ ಶಾಸ್ತ್ರೀಯ ಸಂಗೀತ ಸಹಜವಾಗಿ ಭಗವಂತನವರೆಗೆ ತಲುಪಿಸುತ್ತದೆ; ಅಲ್ಲ ಅದು ಹತ್ತಿರದ ಮಾರ್ಗವಾಗಿದೆ. ಸಂಗೀತಶಕ್ತಿಯೊಂದಿಗೆ ನಿಮ್ಮ ಯೋಗಶಕ್ತಿ ಜೊತೆಗೂಡಿದರೆ, ದ್ವಿಶಕ್ತಿಗಳು ಸೇರಿಕೊಂಡು ನೀವು ‘ರಾಕೆಟ್ ನಲ್ಲಿ ದೇವರೆಡೆಗೆ ಹೋಗುವಿರಿ ಎಂದು ಇಂದಿನ ಕಾಲದಲ್ಲಿಯೂ ದೃಢವಾಗಿ ಪ್ರತಿಪಾದಿಸುವ ಮೇವಾತಿ ಮನೆತನದ ಪದ್ಮವಿಭೂಷಣ ಪಂಡಿತ ಜಸರಾಜರು ಈಗ ನಿಜವಾಗಿಯೂ ಭಗವಂತನ ಚರಣಗಳಲ್ಲಿ ಅವರ ಸೇವೆಗೆ ರುಜುವಾಗಲು ಈ ಭೂತಲದಿಂದ ನಿರ್ಗಮಿಸಿದರು. ಆದರೆ ಅವರ ಸ್ವರ ಕಳೆದಿಲ್ಲ, ಭಗವಂತನ ಸೇವೆಗಾಗಿ ಉಚ್ಚ ಲೋಕಕ್ಕೆ ಹೋಗಿದೆ. ಜಸರಾಜರ ಪುತ್ರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವಾಗ “ಅವರು ಈಗ ಭಗವಂತನಿಗಾಗಿ ಹಾಡುವರು ಎಂದು ಹೇಳಿದ್ದಾರೆ. ‘ಅವರು ಇಲ್ಲಿಯೂ ಭಗವಂತನಿಗಾಗಿಯೇ ಹಾಡುತ್ತಿದ್ದರು ಎಂದು ಆಗಾಗ ಅರಿವಾಗುತ್ತಿತ್ತು. ಅವರ ಕಣ್ಣುಗಳನ್ನು ಮುಚ್ಚಿ ಧ್ಯಾನಾವಸ್ಥೆಯಲ್ಲಿಯೇ ಹಾಡುತ್ತಿದ್ದರು. ಆ ಸಮಯದಲ್ಲಿ ಅವರ ಮುಖಾರವಿಂದವನ್ನು ನೋಡಿದಾಗ ಅವರು ಧ್ಯಾನಸ್ಥರಾಗಿದ್ದಾರೆ ? ಎಂದೂ ಅನಿಸುತ್ತಿತ್ತು.

ನಿಜವಾದ ಉಪಾಸಕ

ಈಶ್ವರನ ನಿಜವಾದ ಉಪಾಸಕನು ಕರ್ತೃತ್ವವನ್ನು ತಾನು ತೆಗೆದುಕೊಳ್ಳುವುದಿಲ್ಲ ಮತ್ತು ಎಲ್ಲವನ್ನೂ ಈಶ್ವರನ ಚರಣಗಳಿಗೆ ಅರ್ಪಿಸುತ್ತಾನೆ. ‘ಈಶ್ವರನಿಂದಲೇ ಆಗುತ್ತಿದೆ, ಎಂದು ಅವನ ಭಾವವಿರುತ್ತದೆ. ಪಂಡಿತಜೀಯವರು ೨೦೦೫ ನೇ ಇಸವಿಯಲ್ಲಿ ‘ಬಿಬಿಸಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ “ನಾನು ಸಂಗೀತಕ್ಷೇತ್ರದಲ್ಲಿ ಏನಾದರೂ ಸಾಧಿಸಿದ್ದೇನೆ ಎಂದು ನನಗೆ ಅನಿಸುವುದಿಲ್ಲ. ನಾನು ಕೇವಲ ಮಾಧ್ಯಮವಾಗಿದ್ದೇನೆ. ನಾನೆಲ್ಲಿ ಹಾಡುತ್ತೇನೆ ? ನಾನು ಏನೂ ಮಾಡಿಯೇ ಇಲ್ಲ. ಇದೆಲ್ಲವೂ ಕೇವಲ ಈಶ್ವರನ ಕೃಪೆಯಾಗಿದೆ, ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದರು. ಪಂಡಿತ ಜಸರಾಜರು ತಮ್ಮನ್ನು ಈಶ್ವರನ ದೂತನೆಂದು ತಿಳಿಯುತ್ತಿದ್ದರು. ಅವರಲ್ಲಿರುವ ಸಾಧಕತ್ವದ ಮತ್ತೊಂದು ಉದಾಹರಣೆಯು ಮುಂದಿನ ಪ್ರಸಂಗದಿಂದ ಪ್ರಖರವಾಗಿ ಗಮನಕ್ಕೆ ಬರುವುದು. ‘ಸಂಗೀತ ಮಾರ್ತಂಡ ಬಿರುದನ್ನು ಪಡೆದಿರುವ ಪಂಡಿತಜೀಯವರು ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಸುಮಾರು ೨೫ ವರ್ಷಗಳ ಹಿಂದೆ ಮಹಾರಾಷ್ಟ್ರದ ಠಾಣೆ ಎಂಬಲ್ಲಿ ಅವರ ಗಾಯನ ಕಾರ್ಯಕ್ರಮವನ್ನು ಒಂದು ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿತ್ತು. ಅಲ್ಲಿಯೇ ಅವರ ವಾಸ್ತವ್ಯಕ್ಕೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಅವರ ಗಾಯನ ಬೆಳಗ್ಗೆ ೩ ರ ನಂತರ ಪ್ರಾರಂಭವಾಗುವುದರಲ್ಲಿತ್ತು. ಅವರು ಶಾಲೆಯಲ್ಲಿಯೇ ವಾಸ್ತವ್ಯ ಮಾಡಿದರು. ಆಗ ಮೈ ಕೊರೆಯುವ ಚಳಿಗಾಲದ ದಿನಗಳಾಗಿದ್ದವು. ಅವರು ಬೆಳಗ್ಗೆ ಸ್ನಾನವನ್ನು ಮಾಡಿದರು ಮತ್ತು ಕೆಳಗೆ ಮೈದಾನಕ್ಕೆ ಕಾರ್ಯಕ್ರಮಕ್ಕೆ ಬಂದರು. ಅವರಿಗಾಗಿ ಯಾವುದೇ ಪ್ರತ್ಯೇಕವಾದ ಆದರಾತಿಥ್ಯವಿರಲಿಲ್ಲ. ಇಂದಿನ ಯಾವುದೇ ಜಗತ್ಪ್ರಸಿದ್ಧ ಕಲಾವಿದರು ಈ ರೀತಿ ಸರಳವಾಗಿ ಇರಬಲ್ಲರು ಎಂದೆನಿಸುವುದಿಲ್ಲ.

ಪಂಡಿತಜೀಯವರ ಸಂಗೀತ ಸಾಧನೆ !

‘ಶಾಸ್ತ್ರೀಯ ಸಂಗೀತ ನಿಮ್ಮನ್ನು ಬಾನೆತ್ತರಕ್ಕೆ ಕೊಂಡೊಯ್ಯುವುದು, ಅಂದರೆ ಈಶ್ವರನೆಡೆಗೆ ಕರೆದೊಯ್ಯುವುದು ಎಂದು ಹೇಳುವ ಪಂಡಿತ ಜಸರಾಜರು ಜೀವಮಾನವಿಡಿ ಗಾಯನವನ್ನು ‘ಸಾಧನೆ ಎಂದು ಹಾಡಿದರು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಶಾಸ್ತ್ರೀಯ ಗಾಯಕರು ಯಾವಾಗ ಗಾಯನಕ್ಕೆ ಕುಳಿತುಕೊಳ್ಳುತ್ತಾರೆಯೋ, ಆಗ ಅವರು ನಾದ ಹಿಡಿಯಲು ಪ್ರಾರಂಭ ಮಾಡಿದ ಸ್ವಲ್ಪ ಸಮಯದ ಬಳಿಕ ತಬಲಾ ನುಡಿಸುವವನೆಡೆಗೆ ದೃಷ್ಟಿಯನ್ನು ಹರಿಸುತ್ತಾರೆ. ತದನಂತರ ತಬಲಾ ನುಡಿಸುವವನು ಪ್ರಾರಂಭಿಸುತ್ತಿದ್ದನು, ಪಂಡಿತಜೀಯವರ ಕಣ್ಣುಗಳೆದುರಿಗೆ ದೇವಿಯ ಸ್ವರೂಪ ಬರುವುದರಿಂದ ಪಂಡಿತಜಿಯವರು ತಬಲಾ ನುಡಿಸಲು ಸನ್ನೆ ಮಾಡುತ್ತಿರಲಿಲ್ಲ. ಅವರ ಆರಂಭದ ನಮನ ಸಾಧನೆ ಪೂರ್ಣವಾದ ಬಳಿಕವಷ್ಟೇ, ಅವರು ಗಾಯನವನ್ನು ಪ್ರಾರಂಭಿಸುತ್ತಿದ್ದರು. ಪಂಡಿತಜೀಯವರಲ್ಲಿ “ನೀವು ರಾಗದ ಕಾಲವನ್ನು ಹೇಗೆ ನಿರ್ಧರಿಸುತ್ತೀರಿ ? ಎಂದು ಕೇಳಿದಾಗ, ಅದಕ್ಕೆ ಅವರು “ನೀವು ಸ್ವಲ್ಪ ಧ್ಯಾನವನ್ನು ತಗಲಿಸಿದರೆಂದರೆ, ನೀವು ಈಗ ಯಾವ ರಾಗವನ್ನು ಹಾಡಬೇಕೋ, ಆ ರಾಗದ ಸ್ವರಲಹರಿ ಕೇಳಿಸುತ್ತದೆ ಎಂದು ಹೇಳಿದ್ದರು. ಪಂಡಿತಜಿಯವರು “೨೨ ಶೃತಿಗಳಲ್ಲಿ ಗಾಯನ ಮಾಡುತ್ತಿದ್ದು, ಅವುಗಳು ತನ್ನಿಂತಾನೇ ಸಿದ್ಧವಾಗುತ್ತವೆ (ಹಾಡಲ್ಪಡುತ್ತದೆ). ಅದನ್ನು ಹೇಳಬೇಕಾಗುವುದಿಲ್ಲ. ಯಾವ ಶೃತಿಯಲ್ಲಿ ಹಾಡುತ್ತಿದ್ದೇನೆ, ಎಂದು ಹೇಳತೊಡಗಿದರೆ, ಧ್ಯಾನ ಭಂಗವಾಗಿ ಹಾಡು ಹಾಳಾಗುತ್ತದೆ ಎಂದು ಹೇಳುತ್ತಿದ್ದರು. ತಮ್ಮ ಶಾಸ್ತ್ರೀಯ ಸಂಗೀತವೂ ಹೇಗೆ ವೈಜ್ಞಾನಿಕವಗಿದೆ ಎಂಬುದರ ಮಹತ್ವವನ್ನು ಹೇಳುವಾಗ ಅವರು ಒಂದು ಉದಾಹರಣೆಯನ್ನು ನೀಡಿದ್ದರು. “ಒಂದೇ ಕೋಮಲ ಋಷಭವನ್ನು ಬೆಳಗ್ಗೆ ಮತ್ತು ಸಾಯಂಕಾಲ ಬೇರೆ ರೀತಿಯಲ್ಲಿ ಹಾಡಬೇಕಾಗುತ್ತದೆ. ಬೆಳಿಗ್ಗೆ ಅದನ್ನು ‘ಭೈರವದಲ್ಲಿ ಹಾಡಲಾಗುತ್ತದೆ, ಸಾಯಂಕಾಲ ‘ಮಾರವಾ ಅಥವಾ ‘ಪುರಿಯಾ ಧನಶ್ರೀ ಈ ರಾಗದಲ್ಲಿ ಹಾಡಲಾಗುತ್ತದೆ ಎಂದು ಹೇಳುತ್ತಿದ್ದರು. ಭಾರತದಲ್ಲಿರುವ ಸಂಗೀತಕ್ಷೇತ್ರದ ಎಲ್ಲ ಗೌರವಯುತ ೭ ಪುರಸ್ಕಾರಗಳು ಅವರಿಗೆ ದೊರೆತಿವೆ. ‘ಎಲ್ಲಿಯವರೆಗೆ ಸಂಗೀತ ವಿಶಾರದ ಪೂರ್ಣಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಕೂದಲು ಕತ್ತರಿಸುವುದಿಲ್ಲ, ಎಂದು ಅವರು ೧೪ ನೇ ವಯಸ್ಸಿನಲ್ಲಿ ಪ್ರತಿಜ್ಞೆಯನ್ನು ಮಾಡಿದ್ದರು. ಅವರು ಅವರ ಅಣ್ಣರಿಂದ ಆರಂಭಿಕ ಸಂಗೀತ ಶಿಕ್ಷಣವನ್ನು ಪಡೆದರು; ಬಳಿಕ ಬಾಬಾ ಶ್ಯಾಮ ಮನೋಹರ ಗೋಸ್ವಾಮಿ ಮಹಾರಾಜರ ಸಾನ್ನಿಧ್ಯದಲ್ಲಿ ಅವರು ಹೊಸ ಬಂದಿಶ ರಚನೆ ಮಾಡಿದರು. ಅವರು ಸ್ಪಷ್ಟ ಉಚ್ಚಾರಣೆಯ ಖ್ಯಾಲ ಗಾಯನಕ್ಕಾಗಿ ಹೆಸರುವಾಸಿಯಾಗಿದ್ದರು. ವಿಭಿನ್ನ ರಾಗಗಳಲ್ಲಿ ಸ್ತ್ರೀ-ಪುರುಷರ ಧ್ವನಿಯ ಜುಗಲಬಂದಿಗಾಗಿ ಅವರು ವಿಶೇಷವಾಗಿ ಪ್ರಸಿದ್ಧರಾಗಿದ್ದರು. ಆ ಜುಗಲಬಂದಿಯು ‘ಜಸರಂಗಿ ಹೆಸರಿನಿಂದ ಗುರುತಿಸಲ್ಪಡತೊಡಗಿತು. ಅವರ ‘ಓಂ ನಮೋ ಭಗವತೇ ವಾಸುದೇವಾಯ, ‘ಗೋವಿಂದ ದಾಮೋದರ ಮಾಧವೇತಿ ಮತ್ತು ‘ಮಧುರಾಷ್ಟಕಮ್ ಈ ಭಕ್ತಿಗೀತೆಗಳು ವಿಜೃಂಭಿಸಿದವು. ಅವರು ೭೫ ನೇ ವಯಸ್ಸಿನಲ್ಲಿ “ನನ್ನ ಇಂತಹ ಸಂಗೀತಭಕ್ತಿ ೩೫ ನೇ ವರ್ಷದಲ್ಲಿರುತ್ತಿದ್ದರೆ, ನನ್ನ ಜೀವನ ಧನ್ಯವಾಗುತ್ತಿತ್ತು, ಎಂದು ಹೇಳಿದ್ದರು. ಕೊನೆಯ ಕ್ಷಣದಲ್ಲಿ ತೊಂದರೆಯಾಗುತ್ತಿದ್ದಾಗ ಅವರು ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದರು ಮತ್ತು ಮೂರು ಸಲ ದೀರ್ಘ ಶ್ವಾಸವನ್ನು ತೆಗೆದುಕೊಂಡು ಪ್ರಾಣವನ್ನು ಬಿಟ್ಟರು. ಇದೂ ವೈಶಿಷ್ಟ್ಯಪೂರ್ಣವಾಗಿದೆ.

ಕಲಾವಿದರು ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು !

ಭಾರತೀಯ ಸಂಗೀತ ಕ್ಷೇತ್ರದ ಅತ್ಯಂತ ಉನ್ನತ ಸ್ಥಾನದಲ್ಲಿರುವ ಗುರು-ಶಿಷ್ಯ ಪರಂಪರೆಯ ಮುಖ್ಯ ಕೊಂಡಿ ಇಂದು ಪಂಡಿತಜೀಯವರ ರೂಪದಿಂದ ನಮ್ಮಿಂದ ಕಳಚಿದೆ. ಪಂಡಿತಜೀಯವರು ಸಿದ್ಧಗೊಳಿಸಿರುವ ೭೫ ಕ್ಕಿಂತ ಅಧಿಕ ಪ್ರಮುಖ ಶಿಷ್ಯಂದಿರು ಇಂದು ಇದ್ದಾರೆ.  ‘ಸಂಗೀತವು ಸಾಧನೆಯಾಗಿದ್ದು ಮತ್ತು ಈಶ್ವರಪ್ರಾಪ್ತಿಯೇ ಸಂಗೀತ ಸಾಧನೆಯ ಮುಖ್ಯ ಉದ್ದೇಶವಾಗಿದೆ. ಈ ಕಾರಣದಿಂದ ಒಳ್ಳೆಯ ಸಂಗೀತ ಬರಲು ಮೊದಲು ಒಳ್ಳೆಯ ಸಾಧನೆಯನ್ನು ಮಾಡಬೇಕಾಗುತ್ತದೆ. ಆದರೆ ದುರಾದೃಷ್ಟವತ್ ಈ ವಿಷಯ ಇದೇ ಇತ್ತೀಚಿನ ದುರ್ದೈವದಿಂದ ಯಾರಿಗೂ ತಿಳಿದಿಲ್ಲ. ಹಾಡು ‘ಸಾಧನೆಯೆಂದು ಹಾಡುವ ಕಾಲ ಮುಗಿದಿದ್ದು, ಈಗ ಎಲ್ಲರಿಗೂ ಶೀಘ್ರಗತಿಯಲ್ಲಿ ಹಣ ಮತ್ತು ಪ್ರಸಿದ್ಧಿಬೇಕಾಗಿದೆ. ದೂರದರ್ಶನ ವಾಹಿನಿಗಳಲ್ಲಿನ ಗಾಯನ ಸ್ಪರ್ಧೆಯು ಸಂಗೀತವನ್ನು ಮಾರಾಟದ ಸರಕನ್ನಾಗಿ ಮಾಡುವ ಒಂದು ರೂಪವಾಗಿದೆ. ಚಿಕ್ಕ ಮಕ್ಕಳಿಗೂ ರಿಯಾಜದ ಅಭ್ಯಾಸವನ್ನು ಕಲಿಸದೇ, ವಿನಾಕಾರಣ ಅವರು ಸ್ಪರ್ಧೆಯಲ್ಲಿ ಸೆಳೆಯಲ್ಪಡುತ್ತಿದ್ದಾರೆ. ರಾಕ್ಷಸೀ ಪಾಶ್ವಿಮಾತ್ಯ ಸಂಗೀತದ ಪ್ರಭಾವವು ಭಾರತೀಯ ಸಂಗೀತ ಕ್ಷೇತ್ರದ ಮೇಲಿನ ಇನ್ನೊಂದು ಆಕ್ರಮಣ ಎನ್ನಬಹುದು. ಭಾವಗೀತೆ ಮತ್ತು ಅತ್ಯಂತ ಹಳೆಯ ಚಲನಚಿತ್ರಗಳ ಹಾಡುಗಳ ಸಂಗೀತದಲ್ಲಿ ಇಲ್ಲಿಯವರೆಗಂತೂ ಕನಿಷ್ಟ ಪಕ್ಷ ‘ಹಾಡುಗಳಿದ್ದವು; ಇತ್ತೀಚಿನ ಹಾಡುಗಳಲ್ಲಿ ವಾದ್ಯಗಳು ಅಧಿಕ ಮತ್ತು ಸುಸ್ವರ ಅತ್ಯಲ್ಪವಿರುತ್ತದೆ ಅಥವಾ ಇರುವುದೇ ಇಲ್ಲ. ‘ರೀಮಿಕ್ಸಗಳಂತಹ ಪ್ರಕಾರಗಳು ಭಾರತೀಯ ಸಂಗೀತದ ಶುದ್ಧತೆಯನ್ನು ಲೋಪಗೊಳಿಸಲು ಕೈ ಜೋಡಿಸಿವೆ. ಸದ್ಯ ‘ಕಲೆಗಾಗಿ ಕಲೆ ಎಂದು ಪ್ರಯೋಗಗಳ ಹೆಸರಿನಲ್ಲಿ ಮನಸ್ಸಿಗೆ ತೋಚಿದಂತಹ ಸಂಗೀತ ಪ್ರಚಲಿತಗೊಳ್ಳುತ್ತಿದೆ. ಹೊಸ ಪೀಳಿಗೆಯು ಭಾರತೀಯ ಶಾಸ್ತ್ರೀಯ ಸಂಗೀತದ ಮಹತ್ವವನ್ನು ಅರಿತುಕೊಂಡು ಅದು ‘ಸಾಧನೆಗಾಗಿಯೇ ಇದೆಯೆಂದು ತಿಳಿದುಕೊಳ್ಳಬೇಕು. ಭಗವಾನ ಶಿವನಿಂದ ಉತ್ಪತ್ತಿಯಾಗಿರುವ ಓಂಕಾರದ ಬೀಜರೂಪವಾಗಿರುವ ಭಾರತೀಯ ಶಾಸ್ತ್ರೀಯ ಸಂಗೀತ ಶ್ರೀ ಗಣೇಶ ಹಾಗೂ ಶ್ರೀ ಸರಸ್ವತಿ ಮುಂತಾದವರ ಉಪಾಸನೆಯಿಂದಲೇ ಸಾಧ್ಯವಾಗುವುದು. ಹೊಸ ಪೀಳಿಗೆಯು ಪಂಡಿತ ಜಸರಾಜರು ಸಾಧನೆಯೆಂದು ಮಾಡಿರುವ ಉಪಾಸನೆಯ ಆದರ್ಶವನ್ನಿಟ್ಟು ಮಾರ್ಗಕ್ರಮಣ ಮಾಡಿದರೆ ಮಾತ್ರ ಅವರ ಯೋಗದಾನ ಸಾರ್ಥಕವಾಗುವುದು.