ದೇವಸ್ಥಾನಗಳ ಭೂಮಿಯ ‘ಮತಾಂತರ !

ಭಾರತ ದೇಶವು ಜಗತ್ತಿನ ‘ಆಧ್ಯಾತ್ಮಿಕ ರಾಜಧಾನಿಯಾಗಿದೆ. ಸನಾತನ ಹಿಂದೂ ಧರ್ಮ ಮತ್ತು ದೇವಸ್ಥಾನ ಸಂಸ್ಕೃತಿ ಈ ಆಧ್ಯಾತ್ಮಿಕತೆಯ ಸಾರವಾಗಿದೆ. ಹಿಂದಿನ ಕಾಲದಲ್ಲಿ ಪರಕೀಯ ಆಕ್ರಮಣಕಾರರು ದೇವಸ್ಥಾನಗಳನ್ನು ಧ್ವಂಸಗೊಳಿಸಿ ದೇವತೆಗಳ ಮೂರ್ತಿಗಳನ್ನು ವಿದ್ರೂಪಗೊಳಿಸುತ್ತಿದ್ದರೆ, ಇಂದು ‘ಸೆಕ್ಯುಲರ್ ವಾದದ ಮುಖವಾಡ ತೊಟ್ಟ ಸರಕಾರಗಳು ದೇವಸ್ಥಾನಗಳ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿವೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ ತೆರೆಮರೆಯಲ್ಲಿ ನಡೆಯುತ್ತಿರುವ ದೇವಸ್ಥಾನಗಳ ಸಂಪತ್ತಿನ ಕೊಳ್ಳೆ ಹೊಡೆಯುವಿಕೆಯು ಚಿಂತೆಯ ವಿಷಯವಾಗಿದೆ. ತಮಿಳುನಾಡಿನಲ್ಲಿ ಹಿಂದೂಯೇತರ ವ್ಯಕ್ತಿ ಮತ್ತು ಸಂಘಟನೆಗಳು ಕಾನೂನು ಬಾಹಿರವಾಗಿ ದೇವಸ್ಥಾನಗಳ ಪರಿಸರವನ್ನು ಕಬಳಿಸುತ್ತಿವೆ. ‘ದೇವಸ್ಥಾನಗಳಿಗೆ ಹೊಂದಿಕೊಂಡಿರುವ ಭೂಮಿಯ ಮೇಲೆ ಕ್ರಮಬದ್ಧವಾಗಿ ‘ಕ್ರಾಸ್ ಇಡುವುದು, ಅಲ್ಲಿ ಪ್ರಾರ್ಥನಾಸ್ಥಳಗಳ ನಿರ್ಮಾಣ ಮತ್ತು ಕ್ರಮೇಣ ದೇವಸ್ಥಾನದ ಭೂಮಿಯನ್ನು ಅತಿಕ್ರಮಣ ಮಾಡುವುದು, ಇದು ಈ ಹಿಂದೂದ್ವೇಷಿ ಮತಾಂಧರ ಕುಟಿಲನೀತಿ ಆಗಿದೆ. ತಮಿಳುನಾಡಿನ ಪ್ರಾಚೀನ ಶ್ರೀ ಉಚ್ಛಿಷ್ಟ ವಿನಾಯಗರ (ವಿನಾಯಕ) ದೇವಸ್ಥಾನದ ಹತ್ತಿರ ಕ್ರಿಶ್ಚಿಯನ್ ಮಿಶನರಿಗಳು ಕಟ್ಟಿರುವ ಕಾನೂನುಬಾಹಿರ ಸ್ಮಶಾನ ಭೂಮಿ ಅದರದ್ದೇ ಒಂದು

ಅಂಶವಾಗಿದೆ. ೧ ಸಾವಿರದ ೨೦೦ ವರ್ಷಗಳಷ್ಟು ಹಳೆಯದಾಗಿರುವ ಮತ್ತು ೮ ಎಕರೆ ಕ್ಷೇತ್ರದಲ್ಲಿರುವ ಶ್ರೀ ಉಚ್ಛಿಷ್ಟ ವಿನಾಯಗರ ದೇವಸ್ಥಾನವನ್ನು ಏಶಿಯಾದ ಅತಿ ದೊಡ್ಡ ವಿನಾಯಗರ ದೇವಸ್ಥಾನವೆಂದು ತಿಳಿಯಲಾಗುತ್ತದೆ. ಕ್ರಿಶ್ಚಿಯನ್ ಮಿಶನರಿಗಳು ಕೆಲವು ತಿಂಗಳುಗಳಿಂದ ಈ ದೇವಸ್ಥಾನದ ಎದುರಿನ ಭೂಮಿಯಲ್ಲಿ ಮೃತದೇಹವನ್ನು ಹೂಳಲು ಪ್ರಾರಂಭಿಸಿದರು. ದೇವಸ್ಥಾನ ಮತ್ತು ಹೂಳುವ ಭೂಮಿಯ ನಡುವೆ ಕೇವಲ ೧೦ ಮೀಟರ್‌ನಷ್ಟು ಅಂತರವಿದೆ. ವಿಶೇಷವೆಂದರೆ ಜಿಲ್ಲಾಧಿಕಾರಿ ಕಾರ್ಯಾಲಯವು ಈ ಅತಿಕ್ರಮಣದೆಡೆಗೆ ಗಮನ ನೀಡುತ್ತಿಲ್ಲ. ಈ ವಿಷಯದಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ದೂರು ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಒಂದು ವೇಳೆ ಅತಿಕ್ರಮಣದ ವಿರುದ್ಧ ದೂರು ನೀಡಿದರೂ ಅದನ್ನು ನಿರ್ಲಕ್ಷಿಸುತ್ತಿದ್ದರೆ, ಅದನ್ನು ಸಂಘಟಿತ ಅಪರಾಧವೆಂದೇ ಪರಿಗಣಿಸಬೇಕಾಗುವುದು. ಇದರಲ್ಲಿ ಯಾರ‍್ಯಾರ ಹಿತಾಸಕ್ತಿ ಅಡಗಿದೆಯೆನ್ನುವುದನ್ನು ಪತ್ತೆ ಹಚ್ಚಬೇಕು.

ದೇವಸ್ಥಾನಗಳ ಧ್ವಂಸ

‘ಹಿಂದೂ ಧಾರ್ಮಿಕ ದತ್ತಿ ಸಂಸ್ಥೆ ಮತ್ತು ಧರ್ಮದಾಯಿ ಸಂಪತ್ತು ಕಾನೂನಿನನ್ವಯ ದಕ್ಷಿಣ ಭಾರತದ ಸಾವಿರಾರು ದೇವಸ್ಥಾನಗಳನ್ನು ಸರಕಾರಿಕರಣ ಮಾಡಲಾಗುತ್ತಿದೆ. ಕೇವಲ ತಮಿಳುನಾಡುವೊಂದರಲ್ಲಿಯೇ ‘ಹಿಂದೂ ಧಾರ್ಮಿಕ ದತ್ತಿ ಸಂಸ್ಥೆ ಮತ್ತು ಧರ್ಮದಾಯಿ ಸಂಪತ್ತು ಇಲಾಖೆಯ ಬಳಿ ಸರಿಸುಮಾರು ೩೭ ಸಾವಿರ ದೇವಸ್ಥಾನಗಳ ಜವಾಬ್ದಾರಿಯಿದೆ. ಈ ಇಲಾಖೆಯನ್ನು ‘ದೇವಸ್ಥಾನ ಮತ್ತು ದೇವಸ್ಥಾನಗಳ ಸಂಪತ್ತಿನ ರಕ್ಷಣೆಯಾಗಬೇಕು, ಎನ್ನುವ ಉದ್ದೇಶದೊಂದಿಗೆ ಸ್ಥಾಪನೆ ಮಾಡಿದ್ದರೂ, ಪ್ರತ್ಯಕ್ಷದಲ್ಲಿ ಉದ್ದೇಶಕ್ಕೆ ತಿಲಾಂಜಲಿ ನೀಡುವ ಕೃತ್ಯಗಳು ಇಲಾಖೆಯಿಂದ ನಡೆದಿದೆ. ದೇವಸ್ಥಾನದ ಪದ್ಧತಿ-ಪರಂಪರೆಯ ವಿರುದ್ಧ ನಿರ್ಣಯವನ್ನು ತೆಗೆದುಕೊಳ್ಳುವುದು, ದೇವಸ್ಥಾನಗಳ ಸಂಪತ್ತನ್ನು ಕ್ರೈಸ್ತರಿಗೆ ಅನುದಾನವೆಂದು ನೀಡುವುದು, ದೇವಸ್ಥಾನಗಳ ಭೂಮಿಯ ಮೇಲೆ ವ್ಯಾವಹಾರಿಕ ಅಂಗಡಿಗಳನ್ನು ಮತ್ತು ನಿವಾಸಿ ಕಟ್ಟಡಗಳನ್ನು ಕಟ್ಟುವುದು, ಭಾವಿಕರ ಹಣವನ್ನು ಅಪವ್ಯಯ ಮಾಡುವುದು. ಹೀಗೆ ಅನೇಕ ನಿಯಮಬಾಹಿರ ಕೃತ್ಯಗಳು ಈ ಇಲಾಖೆಯ ಅಧಿಕಾರಿಗಳಿಂದ ನಡೆಯುತ್ತಿದೆ. ಈ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನಗಳ ದುಃಸ್ಥಿತಿ ಇದಾಗಿದ್ದರೆ, ಈ ಇಲಾಖೆಯ ಅಧೀನದಲ್ಲಿ ಇಲ್ಲದ ದೇವಸ್ಥಾನಗಳೊಂದಿಗೆ ಕ್ರೈಸ್ತಪರವಾಗಿರುವ ತಮಿಳುನಾಡು ಸರಕಾರವು ಅನ್ಯಾಯದಿಂದ ವರ್ತಿಸುತ್ತಿದೆ. ಅದರ ಒಂದು ಉದಾಹರಣೆಯೆಂದರೆ ದೇವಸ್ಥಾನಗಳು ಮತ್ತು ಮಸೀದಿ-ಚರ್ಚಗಳಿಗೆ ವಿಧಿಸಲಾಗಿರುವ ಬೇರೆ ಬೇರೆ ವಿದ್ಯುತ್ ದರ. ‘ತಮಿಳುನಾಡಿನ ವಿದ್ಯುತ್ ವಿತರಣಾ ವಿಭಾಗದವತಿಯಿಂದ ದೇವಸ್ಥಾನಗಳಿಗೆ ೧೦೦ ‘ಯುನಿಟ್ ವರೆಗೆ ೫ ರೂಪಾಯಿ ಪ್ರತಿ ‘ಯುನಿಟ್ ದರದಂತೆ ಹಾಗೂ ಅದರ ಮುಂದಿನ ವಿದ್ಯುತ್ ವಿನಿಯೋಗಕ್ಕೆ ೮.೦೫ ರೂಪಾಯಿ ಪ್ರತಿ ‘ಯುನಿಟ್ ದರದಂತೆ ವಿದ್ಯುತ್ ದರವನ್ನು ಸಂಗ್ರಹಿಸಲಾಗುತ್ತದೆ. ಇದೇ ದರ ಮಸೀದಿ ಮತ್ತು ಚರ್ಚಗಳಿಗೆ ೧೨೦ ‘ಯುನಿಟ್ ವರೆಗೆ ೨.೮೫ ರೂಪಾಯಿ ಮತ್ತು ಅದರ ಮುಂದಿನ ವಿದ್ಯುತ್ ವಿನಿಯೋಗಕ್ಕೆ ೫.೭೫ ರೂಪಾಯಿ ಪ್ರತಿ ‘ಯುನಿಟ್ ಇದೆ. ಈ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮದಿಂದ ಬಹಿರಂಗವಾಯಿತು. ‘ಹಿಂದೂಗಳ ದಮನ ಮತ್ತು ಹಿಂದೂಯೇತರರಿಗೆ ತಲೆಬಾಗುವುದು ಇದನ್ನೇ ಸರ್ವಧರ್ಮಸಮಭಾವವೆನ್ನುವುದೇ?, ಎನ್ನುವ ಪ್ರಶ್ನೆ ಇದರಿಂದ ಉದ್ಭವಿಸುತ್ತದೆ. ದೇವಸ್ಥಾನಗಳು ಚೈತನ್ಯದ ಸ್ರೋತವಾಗಿವೆ; ಆದರೆ ಹಿಂದೂ ಯೇತರರಿಂದ ದೇವಸ್ಥಾನಗಳ ಕಬಳಿಕೆ ಅವುಗಳ ಪಾವಿತ್ರ್ಯವನ್ನು ಭಂಗಗೊಳಿಸುವ ಪ್ರಯತ್ನಗಳಾಗುತ್ತಿವೆ. ಪುಡುಕ್ಕೊಟ್ಟಾಯಿ ಜಿಲ್ಲೆಯ ೧೮ ನೇ ಶತಮಾನದ ಪ್ರಾಚೀನ ಶಿವದೇವಸ್ಥಾನದ ಜಲಸ್ರೋತದ ಮೇಲೆ ಕ್ರೈಸ್ತರು ಅತಿಕ್ರಮಣ ಮಾಡಿ ಅದರ ಮೇಲೆ ಚರ್ಚ ನಿರ್ಮಿಸಲು ಪ್ರಯತ್ನಿಸಿದರು. ಸಾಥುರಾಗಿರಿ ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಕಟ್ಟಿದ್ದ ವಿಶ್ರಾಂತಿಗೃಹದ ಹತ್ತಿರ ಅನಧಿಕೃತವಾಗಿ ಪ್ರಾರ್ಥನಾ ಸ್ಥಳವನ್ನು ಕಟ್ಟಲಾಗಿತ್ತು. ರಾಸಿಪುರಂ ಹತ್ತಿರ ದೇವಸ್ಥಾನದ ಆವರಣದಲ್ಲಿ ಅಲ್ಪಸಂಖ್ಯಾತರಿಗಾಗಿ ಶೌಚಾಲಯವನ್ನು ಕಟ್ಟಿದ್ದರು; ಆದರೆ ಹಿಂದೂಗಳ ವಿರೋಧದ ಬಳಿಕ ಅದನ್ನು ಸ್ಥಳಾಂತರಿಸಲಾಯಿತು. ಪುರಾಸಾವಲ್ಕಮ್‌ನ ಗಂಗಾದೀಶ್ವರ ದೇವಸ್ಥಾನದ ೪ ದೊಡ್ಡ ಮೈದಾನಗಳನ್ನು ‘ಸಾಲ್ವೇಶನ್ ಆರ್ಮಿ ಚರ್ಚಗೆ ‘ಲೀಸ್ ಆಧಾರದ ಮೇಲೆ (ಬಾಡಿಗೆ ಆಧಾರದ ಮೇಲೆ ಅವಧಿಗಾಗಿ ನೀಡುವುದು) ಉಚಿತವಾಗಿ ನೀಡಲಾಯಿತು. ವಾಸ್ತವದಲ್ಲಿ ದೇವಸ್ಥಾನಗಳ ಸಂಪತ್ತು, ಸರ್ಕಾರಿ ಕಾನೂನಿನ ಅನುಗುಣವಾಗಿ ದೇವಸ್ಥಾನಗಳ ಒಡೆತನದ ಕಟ್ಟಡಗಳ ಭೂಮಿಯನ್ನು ಯಾವುದೇ ಹಿಂದೂಯೇತರ ಸಂಸ್ಥೆಗೆ ಬಾಡಿಗೆಯ ಆಧಾರದ ಮೇಲೆ ನೀಡಲು ಅಥವಾ ಅದನ್ನು ಮಾರಾಟ ಮಾಡಲು ಅವಕಾಶವಿಲ್ಲ. ಆದಾಗ್ಯೂ ‘ಹಿಂದೂ ಧಾರ್ಮಿಕ ದತ್ತಿ ಸಂಸ್ಥೆ ಮತ್ತು ಧರ್ಮದಾಯಿ ಸಂಪತ್ತು ಇಲಾಖೆಯಿಂದ ಇಂತಹ ಚಟುವಟಿಕೆಗಳು ನಡೆಯುತ್ತಿವೆ. ಇದರ ಮಾಹಿತಿಯನ್ನು ‘ಆರ್ಗನೈಸರ್ ಹೆಸರಿನ ಜಾಲತಾಣದಲ್ಲಿ ನೀಡಲಾಗಿದೆ. ಇಂತಹ ನೂರಾರು ಉದಾಹರಣೆಗಳನ್ನು ನೀಡಲು ಸಾಧ್ಯವಿದೆ. ತಮಿಳುನಾಡಿನಲ್ಲಿ ಪ್ರತಿವರ್ಷ ಅಂದಾಜು ಶೇ.೨೦ರಷ್ಟು ಭೂಮಿಯನ್ನು ಮುಸಲ್ಮಾನರು ಮತ್ತು ಕ್ರೈಸ್ತರು ವಶ ಪಡಿಸಿಕೊಳ್ಳುತ್ತಾರೆ. ಮೊದಲು ಕೇವಲ ಬಡವರು ಮತ್ತು ಮುಗ್ಧ ಹಿಂದೂಗಳನ್ನು ಮತಾಂತರಿಸಲಾಗುತ್ತಿತ್ತು; ಆದರೆ ಈಗ ಮತಾಂಧರಿಂದ ಒಂದು ರೀತಿಯಲ್ಲಿ ದೇವಸ್ಥಾನಗಳ ಭೂಮಿ ಮತಾಂತರವಾಗುತ್ತಿದೆ.

ಹಿಂದೂಗಳ ಧರ್ಮಕರ್ತವ್ಯ

ಒಟ್ಟಾರೆ ‘ಜಾತ್ಯತೀತ ಸರಕಾರವು ಮಾಡಿರುವ ದೇವಸ್ಥಾನಗಳ ಲೂಟಿಯನ್ನು ನೋಡಿದರೆ ಹಿಂದೂಗಳು ದೇವಸ್ಥಾನ ಸಂಸ್ಕೃತಿಯ ರಕ್ಷಣೆಗಾಗಿ ವ್ಯಾಪಕ ಹೋರಾಟವನ್ನು ನಡೆಸುವ ಅವಶ್ಯಕತೆಯಿದೆ. ದೇವಸ್ಥಾನ ಸಂಪತ್ತಿನ ರಕ್ಷಣೆಗಾಗಿ ಕೆಲವು ಜಾಗೃತ ಹಿಂದೂ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಸಾಮಾಜಿಕ, ಹಾಗೆಯೇ ನ್ಯಾಯಾಲಯದ ಮುಖಾಂತರ ಹೋರಾಡುತ್ತಿವೆ. ಇಂತಹ ಸಂಘಟನೆಗಳ ರೆಕ್ಕೆಗಳಿಗೆ ಬಲ ತುಂಬುವ ಜವಾಬ್ದಾರಿ ಜನಸಾಮಾನ್ಯ ಹಿಂದೂ ಭಕ್ತರದ್ದಾಗಿದೆ. ಇದರಿಂದ ದೇವಸ್ಥಾನಗಳಿಗೆ ಹೋಗಿ ಕೇವಲ ದರ್ಶನವನ್ನು ಪಡೆಯುವ ಮಾನಸಿಕತೆಯಲ್ಲಿರದೇ ಹಿಂದೂಗಳು ದೇವಸ್ಥಾನಗಳನ್ನು ರಕ್ಷಿಸಲು ಪ್ರಾಣವನ್ನು ಪಣಕ್ಕಿಟ್ಟು ಹೋರಾಡಬೇಕು. ಹಿಂದಿನ ಕಾಲದಲ್ಲಿ ಮೊಗಲ ಆಕ್ರಮಣಕಾರಿಗಳು ದೇವಸ್ಥಾನಗಳನ್ನು ಲೂಟಿ ಮಾಡಿದರು. ಇಂದಿನ ಆಧುನಿಕ ಗಝನಿಗಳು ಬೇರೆ ಮಾರ್ಗದಿಂದ ದೇವಸ್ಥಾನಗಳನ್ನು ಲೂಟಿ ಮಾಡುತ್ತಿದ್ದಾರೆ. ಅದನ್ನು ನ್ಯಾಯೋಚಿತ ಮಾರ್ಗದಿಂದ ವಿರೋಧಿಸಬೇಕು. ‘ಧರ್ಮೋ ರಕ್ಷತಿ ರಕ್ಷಿತಃ ಎಂದರೆ ಧರ್ಮವನ್ನು ರಕ್ಷಿಸುವವರನ್ನೇ ಧರ್ಮ ಅಂದರೆ ಈಶ್ವರ ರಕ್ಷಣೆ ಮಾಡುತ್ತಾರೆ, ಎನ್ನುವ ವಚನವಿದೆ. ಆ ದಿಶೆಯಲ್ಲಿ ಕೃತಿಶೀಲರಾಗುವುದೆಂದರೆ ಈಶ್ವರನ ಉಪಾಸನೆಯೇ ಆಗಿದೆ.