ಶಸ್ತ್ರಾಸ್ತ್ರಗಳ ನಿರ್ಮಿತಿಯ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರ ಏಕೆ ಆಗುವುದಿಲ್ಲ ?
‘ಸೈನ್ಯದಳಕ್ಕೆ ಬೇಕಾಗುವ ಸಾಹಿತ್ಯಗಳನ್ನು ನಾವು ‘ಆತ್ಮನಿರ್ಭರ ಭಾರತ ಈ ಕಾರ್ಯಕ್ರಮದ ಅಂತರ್ಗತ ದೇಶದಲ್ಲಿಯೇ ನಿರ್ಮಿಸಲು ಪ್ರಯತ್ನಿಸೋಣ, ಎಂದು ಇತ್ತೀಚೆಗಷ್ಟೆ ರಕ್ಷಣಾಸಚಿವ ರಾಜನಾಥ ಸಿಂಹ ಇವರು ಹೇಳಿದ್ದರು. ಅವರು ಅದಕ್ಕಾಗಿ ದೊಡ್ಡ ಕಾರ್ಯಕ್ರಮವನ್ನು ಕೂಡ ನಮ್ಮ ಮುಂದೆ ಮಂಡಿಸಿದ್ದಾರೆ. ಇಂದು ದೇಶದಲ್ಲಿನ ಶಸ್ತ್ರಾಸ್ತ್ರಗಳ ಸ್ಥಿತಿ ಹೇಗಿದೆ ? ಇದನ್ನು ನೋಡಲು ನಾವು ೨೦೧೪ ರ ವರೆಗಿನ ಮತ್ತು ಅದರ ನಂತರದ ದೇಶದ ಸ್ಥಿತಿಯನ್ನು ನೋಡೋಣ.
೧ ಅ. ರಕ್ಷಣಾ ತಜ್ಞರು ನೀಡಿರುವ ತಪ್ಪು ಸಲಹೆಯನ್ನು ಸವಿಸ್ತಾರ ವಿಚಾರ ಮಾಡದೆ ಸರಕಾರ ಕೃತಿಯಲ್ಲಿ ತರುವುದು : ನಮ್ಮ ದೇಶ ಸ್ವತಂತ್ರವಾಗಿ ೭೩ ವರ್ಷಗಳಾದವು. ೨೦೧೪ ಕ್ಕಿಂತ ಮೊದಲು ನಮಗೆ ಬೇಕಾಗುವ ಶಸ್ತ್ರಾಸ್ತ್ರಗಳಲ್ಲಿ ಶೇ. ೭೦ ರಷ್ಟು ಶಸ್ತ್ರಾಸ್ತ್ರಗಳನ್ನು ನಾವು ವಿದೇಶಗಳಿಂದ, ಅಂದರೆ ಅಮೇರಿಕಾ, ಇಸ್ರೈಲ್ ಮತ್ತು ರಶ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದೆವು ಇದನ್ನು ಕಡಿಮೆಗೊಳಿಸಲು ನಾವು ದೇಶದಲ್ಲಿ ಸರಕಾರದ ವತಿಯಿಂದ ಶಸ್ತ್ರಾಸ್ತ್ರಗಳ ಕಾರ್ಖಾನೆಗಳನ್ನು ಸ್ಥಾಪಿಸಿದೆವು; ಆದರೆ ಅವುಗಳಿಂದ ಹೆಚ್ಚೇನೂ ಉಪಯೋಗವಾಗಲಿಲ್ಲ. ಅದಕ್ಕಾಗಿ ನಾವು ಖಾಸಗಿ ಉದ್ಯಮಿಗಳ ಸಹಾಯ ಪಡೆಯಲು ಪ್ರಯತ್ನಿಸಲಿಲ್ಲ. ನಮ್ಮ ರಕ್ಷಣಾ ತಜ್ಞರು ನಾವು ಯಾವುದೇ ಕೆಲಸಗಳನ್ನು ಖಾಸಗಿ ಕಾರ್ಖಾನೆಗಳಿಗೆ ಕೊಡಬಾರದು, ಏಕೆಂದರೆ ಅದರಿಂದ ರಹಸ್ಯ ಬಯಲಾಗುವುದು; ಎಂದು ಸರಕಾರಕ್ಕೆ ತಪ್ಪು ಸಲಹೆಯನ್ನು ನೀಡಿದರು. ಇದರಿಂದ ಆ ಪ್ರಯತ್ನವೂ ಆಗಲಿಲ್ಲ. ನೀವು ಸುಖೋಯಿ ವಿಮಾನಗಳನ್ನು ರಶ್ಯಾದಿಂದ ಖರೀದಿಸುತ್ತಿದ್ದೀರಿ, ಅವುಗಳನ್ನು ಭಾರತದ ಉದ್ಯಮಿಗಳು ತಯಾರಿಸಿದರೆ, ಹೇಗೆ ರಹಸ್ಯ ಬಯಲಾಗುವುದು ? ಇಷ್ಟು ಸಾಮಾನ್ಯ ಚಿಂತನೆ ಸಹ ಮಾಡದೇ ಅವರು ಹೇಳಿದ್ದನ್ನು ಸರಕಾರ ಒಪ್ಪಿತು.
೧ ಆ. ಸಮಸ್ಯೆಗಳನ್ನು ಎದುರಿಸುವ ಕ್ಷಮತೆಯನ್ನೇ ತೋರಿಸದ ಸರಕಾರ : ಆಡಳಿತದವರ ಅಜ್ಞಾನ, ಸರಕಾರಿ ಕಾರ್ಖಾನೆಗಳ ದೊಡ್ಡ ನಿಷ್ಕ್ರಿಯತೆ, ಟ್ರೇಡ್ ಯೂನಿಯನ್ಸ್, ಯಾವುದೇ ತಂತ್ರಜ್ಞಾನವನ್ನು ಭಾರತಕ್ಕೆ ತರಲು ಬಿಡದಿರುವುದು ಮುಂತಾದ ವಿವಿಧ ಕಾರಣಗಳಿಂದ ದೇಶದಲ್ಲಿ ಶಸ್ತ್ರಗಳನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ ಹಾಗೂ ಈ ಸಮಸ್ಯೆಗಳನ್ನು ನಿವಾರಿಸಲು ಅಂದಿನ ಆಡಳಿತವೂ ಪ್ರಯತ್ನಿಸಲಿಲ್ಲ.
೧ ಇ. ಚೀನಾದಂತೆ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲು ಸಾಧ್ಯವಾಗಲಿಲ್ಲ : ೧೫ ವರ್ಷಗಳ ಹಿಂದೆ ಚೀನಾ ಶಸ್ತ್ರಾಸ್ತ್ರಗಳನ್ನು ಇತರ ದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿತ್ತು; ನಂತರ ಇದನ್ನು ನಿಲ್ಲಿಸಿತು ಮತ್ತು ತಾನೇ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸತೊಡಗಿತು. ಈಗ ಅದು ಶಸ್ತ್ರಾಸ್ತ್ರಗಳನ್ನು ಇತರ ದೇಶಗಳಿಗೆ ರಪ್ತು ಮಾಡಲು ಪ್ರಯತ್ನಿಸುತ್ತಿದೆ. ನಮಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ.
೨. ‘ಮೇಕ್ ಇನ್ ಇಂಡಿಯಾದ ಯಶಸ್ಸಿಗಾಗಿ ರಕ್ಷಣಾ ಸಚಿವಾಲಯ ಮತ್ತು ಖಾಸಗಿ ಉದ್ಯಮಿಗಳು ಒಟ್ಟಾಗಬೇಕು
೨ ಅ. ಯುದ್ಧದಲ್ಲಿ ಹೋರಾಡುವ ವಿಮಾನಗಳನ್ನು ಕೂಡ ಭಾರತದಲ್ಲಿ ತಯಾರಿಸಲು ಸಾಧ್ಯವಾಗದಿರುವುದು : ‘ಮೇಕ್ ಇನ್ ಇಂಡಿಯಾದಿಂದಾಗಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಒಳ್ಳೆಯ ದಿನಗಳು ಬರಬಹುದು. ಹಾಗಾದರೆ ಈ ಹಿಂದೆ ಅದೇಕೆ ಸಾಧ್ಯವಾಗಲಿಲ್ಲ ? ಭಾರತದ ‘ಮಿನಿಸ್ಟ್ರೀ ಆಫ್ ಡಿಫೆನ್ಸ್ (MOD) ಅಂದರೆ ಸೈನ್ಯದಲ್ಲಿ ಅದಕ್ಕೆ (MAD) (ಮಿನಿಸ್ಟ್ರೀ ಎಗೇನ್ಸ್ಟ್ ಡಿಫೆನ್ಸ್), ಅಂದರೆ ಅದಕ್ಕೆ ‘ಮ್ಯಾಡ್ ಎಂದು ಹೇಳಲಾಗುತ್ತಿತ್ತು. ಆ ಅಧಿಕಾರಿಗಳಿಗೆ ಭಾರತದಲ್ಲಿ ಶಸ್ತ್ರಗಳನ್ನು ಹೇಗೆ ತಯಾರಿಸಬಹುದು, ಎಂಬುದು ತಿಳಿಯಲಿಲ್ಲ. ನಮ್ಮ ದೇಶದಲ್ಲಿ ‘ಎಲ್ಸಿ ತೇಜಸ್ ಯುದ್ಧದ ವಿಮಾನಗಳನ್ನು ತಯಾರಿಸಲು ‘ಡಿಆರ್‌ಡಿಓ (ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನೈಝೇಶನ್) ಕಳೆದ ೪೦ ವರ್ಷಗಳಿಂದ ಪ್ರಯತ್ನ ಮಾಡುತ್ತಿದೆ; ಆದರೆ ಅದಕ್ಕೆ ಹೆಚ್ಚಿನ ಯಶಸ್ಸು ಸಿಗಲಿಲ್ಲ.
೨ ಆ. ಅಂದಿನ ರಕ್ಷಣಾಸಚಿವ ಮನೋಹರ ಪರ್ರೀಕರ್ ಇವರಿಂದಾಗಿ ಭಾರತೀಯ ವಾಯುದಳದಲ್ಲಿ ೨ ‘ಸ್ಕ್ವಾಡ್ರನ್ಗಳ ಸಮಾವೇಶ ! : ಮನೋಹರ ಪರ್ರೀಕರ್ ರಕ್ಷಣಾ ಸಚಿವರಾಗಿರುವಾಗ ಅವರು ಭಾರತೀಯ ವಾಯುದಳಕ್ಕೆ, ‘ಡಿಆರ್‌ಡಿಓ ಇಷ್ಟು ಪ್ರಯತ್ನ ಮಾಡಿದೆ ಎಂದಾದರೆ, ನಿಮಗೆ ೨ ‘ಸ್ಕ್ವಾಡ್ರನ್ಗಳನ್ನು ತೆಗೆದುಕೊಳ್ಳಲೇ ಬೇಕಾಗುವುದು. ಅದಕ್ಕಾಗಿ ನಾವು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ ಎಂದು ಹೇಳಿದ್ದರು.
ವಾಯುದಳ ಈ ವಿಮಾನಗಳನ್ನು ತೆಗೆದುಕೊಳ್ಳಲು ಸಿದ್ಧವಿರಲಿಲ್ಲ; ಏಕೆಂದರೆ ವಾಯುದಳದ ಗುಣಮಟ್ಟವು ‘ಎಲ್ಸಿಎ ತೇಜಸ್ನ ಗುಣಮಟ್ಟಕ್ಕನುಸಾರ ಇರಲಿಲ್ಲ. ಪರ್ರೀಕರ್ ಇವರು ಆಗ್ರಹ ಮಾಡಿದುದರಿಂದ ಭಾರತದ ವಾಯುದಳದಲ್ಲಿ ೨ ‘ಸ್ಕ್ವಾಡ್ರನ್ಗಳ ಸಮಾವೇಶ ಮಾಡಲಾಯಿತು. ಈಗ ನಾವು ನಮ್ಮಲ್ಲಿನ ‘ಮಿಗ್ ವಿಮಾನಗಳ ಸ್ಥಾನದಲ್ಲಿ ‘ಎಲ್ಸಿಎ ತೇಜಸ್ ವಿಮಾನಗಳನ್ನು ಉಪಯೋಗಿಸಲು ನಿರ್ಧರಿಸಿದ್ದೇವೆ. ಏಕೆಂದರೆ ನಮ್ಮಲ್ಲಿನ ೧೦ ಮಿಗ್ ವಿಮಾನಗಳು ಹಳೆಯದಾಗಿವೆ, ಆದರೆ ಇದು ಕೂಡಲೇ ಸಾಧ್ಯವಿಲ್ಲ. ಅವುಗಳ ಸ್ಥಾನದಲ್ಲಿ ತೇಜಸ್ ತರಲು ೨ ರಿಂದ ೩ ವರ್ಷಗಳು ತಗಲಬಹುದು. ‘ಎಲ್ಸಿಎ ತೇಜಸ್ ಈ ಉಪಕ್ರಮಕ್ಕೆ ತುಂಬಾ ಸಮಯ ತಗಲಿತು ಹಾಗೂ ಅದರ ಬೆಲೆಯೂ ತುಂಬಾ ಹೆಚ್ಚಾಯಿತು.
೨ ಇ. ಯುದ್ಧ ವಿಮಾನಗಳನ್ನು ಹೊರಗಿನಿಂದ ಖರೀದಿಸುವುದು ದುಬಾರಿಯಾಗಿರುವುದರಿಂದ ಅವುಗಳನ್ನು ದೇಶದಲ್ಲಿಯೇ ತಯಾರಿಸುವುದು ಆವಶ್ಯಕ : ತೇಜಸ್‌ನ ಆಧುನಿಕ ಆವೃತ್ತಿಯ ನಿರ್ಮಾಣದಲ್ಲಿ ದೇಶದಲ್ಲಿನ ವಿಜ್ಞಾನಿಗಳಿಗ ಯಶಸ್ಸು ಸಿಗುವುದು; ಏಕೆಂದರೆ, ಹೊರಗಿನಿಂದ ವಿಮಾನಗಳನ್ನು ಖರೀದಿಸುವುದು ತುಂಬಾ ದುಬಾರಿಯಾಗುತ್ತದೆ, ಉದಾ. ರಾಫೆಲ್‌ನ ಬೆಲೆ ೫೦೦-೬೦೦ ಕೋಟಿ ರೂಪಾಯಿಗಳಷ್ಟಿತ್ತು ಹಾಗೂ ಅವುಗಳ ಮೇಲೆ ಹೂಡಿಕೆ ಮಾಡಿದ ಶಸ್ತ್ರಗಳ ಬೆಲೆ ೧೧ ರಿಂದ ೧೨ ಸಾವಿರ ಕೋಟಿ ರೂಪಾಯಿಗಳಷ್ಟಿತ್ತು. ಆದ್ದರಿಂದ ಭಾರತದಲ್ಲಿಯೇ ಇಂತಹ ವಿಮಾನಗಳು ತಯಾರಾಗಬೇಕು, ಎಂಬುದರಲ್ಲಿ ಸಂಶಯವಿಲ್ಲ. ರಕ್ಷಣಾ ಸಚಿವಾಲಯ ಮತ್ತು ಭಾರತದ ಖಾಸಗಿ ಉದ್ಯೋಗಗಳು ಒಟ್ಟಾಗಿ ಬಂದು ಕಾರ್ಯವನ್ನು ಮಾಡಿದರೆ, ಭಾರತದ ‘ಮೇಕ್ ಇನ್ ಇಂಡಿಯಾಗೆ ಯಶಸ್ಸು ಸಿಗುವುದು.
೩. ಆತ್ಮನಿರ್ಭರರಾದರೆ ಭಾರತದ ಅರ್ಥವ್ಯವಸ್ಥೆಯಲ್ಲಿ ಸೈನ್ಯ ದಳದ ಯೋಗದಾನವು ಮಹತ್ವಪೂರ್ಣವಾಗಲಿದೆ !
‘ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ನಮ್ಮ ಸೈನ್ಯ ತಯಾರಿದೆ, ಎಂದು ಸೈನ್ಯದಳದ ಪ್ರಮುಖರು ಹೇಳಿದ್ದಾರೆ. ಇದರಲ್ಲಿ ಭಾರತಕ್ಕೆ ಖಂಡಿತವಾಗಿಯೂ ಯಶಸ್ಸು ಸಿಗುವುದು. ನಮಗೆ ಬೇಕಾಗುವ ಗುಣಮಟ್ಟದ ಶಸ್ತ್ರಗಳನ್ನು ತಯಾರಿಸಲು ತುಂಬಾ ಅಡಚಣೆಗಳು ಬರುತ್ತಿವೆ. ಓರ್ವ ಅಧಿಕಾರಿಗಳು, ‘ನಾವು ‘ಮೇಕ್ ಇನ್ ಇಂಡಿಯಾಗೆ
ಸಹಾಯ ಮಾಡಲು ತಯಾರಿದ್ದೇವೆ ಎಂದು ಹೇಳಿದ್ದಾರೆ. ಭಾರತೀಯ ಕಂಪನಿಗಳಿಗೆ ಈ ಕೆಲಸವನ್ನು ನೀಡಿದರೆ, ನಾವು ಇದರಲ್ಲಿ ಬೇಗನೇ ಆತ್ಮನಿರ್ಭರವಾಗಬಹುದು ಈಗ ನಾವು ಹೊರಗಿನ ದೇಶಗಳಿಂದ ತಂತ್ರಜ್ಞಾನವನ್ನು ಪಡೆದು ಒಳ್ಳೆಯ ಗುಣಮಟ್ಟದ ಉತ್ಪಾದನೆಗಳನ್ನು ತಯಾರಿಸಲು ಪ್ರೋತ್ಸಾಹವನ್ನು ನೀಡುತ್ತಿದ್ದೇವೆ, ಉದಾ. ಎಕೆ-೪೭ ರಾಯಫಲ್‌ನ ತಂತ್ರಜ್ಞಾನವನ್ನು ರಶ್ಯಾದಿಂದ ಪಡೆದು ನಾವು ಅವುಗಳನ್ನು ಭಾರತದಲ್ಲಿ ತಯಾರಿಸಲಿದ್ದೇವೆ.
ಇಷ್ಟು ಮಾತ್ರವಲ್ಲ, ಇಸ್ರೈಲ್ ಮತ್ತು ಅನೇಕ ದೇಶಗಳು ಭಾರತಕ್ಕೆ ತಂತ್ರಜ್ಞಾನವನ್ನು ಹಸ್ತಾಂತರಿಸಲು ಮುಂದೆ ಬರುತ್ತಿವೆ. ಹೀಗೆ ಮಾಡಿದರೆ, ಭಾರತದ ರಕ್ಷಣಾ ಕ್ಷೇತ್ರಕ್ಕೆ ದೊಡ್ಡ ಅವಕಾಶ ಸಿಗುವುದು, ಉದ್ಯೋಗ ಹೆಚ್ಚಾಗುವುದು ಮತ್ತು ಭಾರತದ ಅರ್ಥವ್ಯವಸ್ಥೆಯಲ್ಲಿ ಸೈನ್ಯದಳದ ಕೊಡುಗೆಯೂ ಹೆಚ್ಚಾಗುವುದು. ಭಾರತ ‘ಸರ್ಜಿಕಲ್ ಸ್ಟ್ರೈಕ್ ಮತ್ತು ‘ಏರ್ ಸ್ಟ್ರೈಕ್ ಮಾಡಿದಾಗ ಶೇರು ಪೇಟೆ ತುಂಬಾ ಮೇಲೆ ಹೋಗಿತ್ತು. ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ‘ಆತ್ಮನಿರ್ಭರ ಭಾರತದ ಘೋಷಣೆ ಮಾಡಿದಾಗ ಕೂಡ ಸಾರ್ವಜನಿಕ ಕ್ಷೇತ್ರದಲ್ಲಿನ ಕಂಪನಿಗಳ ಶೇರ‍್ಸ್‌ಗಳ ಬೆಲೆ ಹೆಚ್ಚಾಗಿತ್ತು. ಇದರ ಅರ್ಥವೆಂದರೆ, ‘ಆತ್ಮನಿರ್ಭರ ಭಾರತ ಉಪಕ್ರಮವನ್ನು ಹಮ್ಮಿಕೊಂಡರೆ ಭಾರತದಲ್ಲಿನ ಕಾರ್ಖಾನೆಗಳಿಗೆ ಒಳ್ಳೆಯ ದಿನಗಳು ಬರುವವು, ಎಂದು ಜನರಿಗೂ ಅನಿಸುತ್ತದೆ.
೪. ಯುದ್ಧತಂತ್ರವನ್ನು ಬದಲಾಯಿಸಿದ್ದರಿಂದ ಭಾರತೀಯ ಸೈನ್ಯದಲ್ಲಿಯೂ ತತ್ಪರತೆಯಿಂದ ಬದಲಾವಣೆಯು ಆವಶ್ಯಕ !
ಈಗ ಯುದ್ಧದ ತಂತ್ರ ಬದಲಾಗುತ್ತಿದೆ. ಹಿಂದಿನ ಕಾಲದಲ್ಲಿ ಯುದ್ಧಗಳು ಗಡಿಯಲ್ಲಿಯೇ ನಡೆಯುತ್ತಿದ್ದವು, ಈಗ ಚೀನಾ ಈ ಯುದ್ಧವನ್ನು ದೇಶದ ಒಳಗೆ ತಂದಿದೆ. ಹಿಂದಿನ ಯುದ್ಧಗಳು ಕೆಲವು ದಿನ ಅಥವಾ ಕೆಲವು ವಾರ ನಡೆಯುತ್ತಿದ್ದುವು; ಆದರೆ ಈಗಿನ ಯುದ್ಧವು ೩೬೫ ದಿನ ನಡೆಯುತ್ತಿದೆ. ಆದ್ದರಿಂದ ನಾವು ಕೂಡ ತತ್ಪರತೆಯಿಂದ ಬದಲಾವಣೆಯನ್ನು ಮಾಡುವುದು ಅವಶ್ಯಕವಾಗಿದೆ. ಚೀನಾ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ. ಆದ್ದರಿಂದ ಭಾರತೀಯ ಸೈನ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪುನಾರಚನೆಯಾಗುತ್ತಿದೆ. ನಾವು ‘ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಈ ಸಂಕಲ್ಪನೆಯನ್ನು ಆರಂಭಿಸಿದ್ದೇವೆ. ಸದ್ಯ ನಮ್ಮ ‘ಸಿಡಿಎಸ್ ಅಂದರೆ, ಮೂರೂ ದಳಗಳಿಗೆ ಜನರಲ್ ಬಿಪಿನ್ ರಾವತ್ ಪ್ರಮುಖರಾಗಿರುತ್ತಾರೆ. ಸೈನ್ಯದ ಪುನಾರಚನೆ ಆಗುತ್ತಿದೆ. ಹೊಸಹೊಸ ತಂತ್ರಜ್ಞಾನಗಳು ಬರುತ್ತಿವೆ. ಆದ್ದರಿಂದ ಶಸ್ತ್ರಗಳೂ ಅತ್ಯಾಧುನಿಕವಾಗಿರುವುದು ಆವಶ್ಯಕವಾಗಿದೆ.
೫. ಭಾರತದಲ್ಲಿ ತಯಾರಾದ ‘ಅರ್ಜುನ ಟ್ಯಾಂಕ್‌ಗಳು ಸೈನ್ಯದಳಕ್ಕೆ ಸೇರ್ಪಡೆ !
ನಮ್ಮ ‘ಅರ್ಜುನ ಟ್ಯಾಂಕ್‌ಗಳನ್ನು ನಮ್ಮದೇ ‘ಡಿಆರ್‌ಡಿಓ ತಯಾರಿಸಿದೆ. ಅವುಗಳನ್ನು ತಯಾರಿಸಲು ತುಂಬಾ ಸಮಯ ಬೇಕಾಯಿತು. ಆದ್ದರಿಂದ ಅವುಗಳ ಬೆಲೆ ತುಂಬಾ ಹೆಚ್ಚಾಯಿತು. ಆದ್ದರಿಂದ ಭಾರತೀಯ ಸೈನ್ಯವು ಅವುಗಳನ್ನು ಸ್ವೀಕರಿಸಲು ಸಿದ್ಧವಿರಲಿಲ್ಲ. ಅಂದಿನ ರಕ್ಷಣಾಸಚಿವರಾದ ಮನೋಹರ ಪರ್ರೀಕರ ಇವರು ಈ ಟ್ಯಾಂಕ್‌ಗಳ ಎರಡು ರೆಜಿಮೆಂಟ್‌ಗಳನ್ನು ಸೈನ್ಯದಳಕ್ಕೆ ತೆಗೆದುಕೊಳ್ಳುವಂತೆ ಮಾಡಿದರು. ಒಂದು ರೆಜಿಮೆಂಟ್‌ನಲ್ಲಿ ೪೨ ರಿಂದ ೪೫ ಟ್ಯಾಂಕ್‌ಗಳಿರುತ್ತವೆ. ಆದ್ದರಿಂದ ಈಗ ೮೦ ರಿಂದ ೯೦ ‘ಅರ್ಜುನ ಟ್ಯಾಂಕ್‌ಗಳು ಭಾರತೀಯ ಸೈನ್ಯದಲ್ಲಿವೆ.
೬. ರಕ್ಷಣಾ ಸಾಮಾಗ್ರಿಗಳು ದೇಶದಲ್ಲೇ ತಯಾರಾದರೆ ರಕ್ಷಣಾ ಕ್ಷೇತ್ರದಲ್ಲಿ ಕ್ರಾಂತಿಯಾಗುವುದು !
ಪ್ರಧಾನಮಂತ್ರಿ ಮೋದಿಯವರು ‘ಆತ್ಮನಿರ್ಭರ ಭಾರತ ! ಈ ಘೋಷಣೆಯನ್ನು ಮಾಡಿದರು. ಅದರಂತೆ ರಕ್ಷಣಾ ಸಚಿವಾಲಯ ‘ಆತ್ಮನಿರ್ಭರ ಭಾರತದ ಅಂತರ್ಗತ ಕೊಡುಗೆ ನೀಡಲು ಸಿದ್ಧವಿದೆ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ನೌಕರಿಗಳು ಹುಟ್ಟಲಿವೆ. ಹಿಂದೆ ನಾವು ಹೊರಗಿನ ಕಂಪನಿಗಳಿಗೆ ಕೆಲಸಗಳನ್ನು ಕೊಡುತ್ತಿದ್ದೆವು, ಈಗ ಆ ಕೆಲಸಗಳನ್ನು ಭಾರತೀಯ ಕಂಪನಿಗಳಿಗೆ ಕೊಡಲಾಗುವುದು. ಈ ವಿಷಯದಲ್ಲಿ ನಮ್ಮ ಸೈನ್ಯದಳ, ‘ಡಿಆರ್‌ಡಿಓ, ನಮ್ಮ ಕಾರ್ಖಾನೆಗಳು ಮತ್ತು ಖಾಸಗಿ ಕಾರ್ಖಾನೆಗಳೊಂದಿಗೆ ಚರ್ಚೆಯಾಗಿದೆ. ಈ ನಿರ್ಣಯವನ್ನು ಮುಂದಿನ ೪ ವರ್ಷಗಳಲ್ಲಿ ಅನ್ವಯಗೊಳಿಸಲಾಗುವುದು ಹಾಗೂ ೧೦೧ ಉತ್ಪಾದನೆಗಳು ಭಾರತದಲ್ಲಿಯೇ ತಯಾರಾಗುವವು. ಇನ್ನು ಮುಂದೆ ನಮ್ಮ ಅರ್ಥವ್ಯವಸ್ಥೆಯ ‘ಕ್ಯಾಪಿಟಲ್ ಬಜೆಟ್ ನ್ನು ವಿದೇಶಿ ಹಾಗೂ ಸ್ವದೇಶಿ ಇವೆರಡು ಭಾಗಗಳಲ್ಲಿ ವಿಭಜಿಸಲಾಗುವುದು. ಪ್ರತಿವರ್ಷ ೫೨ ಸಾವಿರ ಕೋಟಿ ರೂಪಾಯಿಗಳನ್ನು ಭಾರತೀಯ ಉದ್ಯಮಿಗಳಿಗೆ ಈ ಸಾಮಾಗ್ರಿಗಳನ್ನು ನಿರ್ಮಾಣ ಮಾಡಲು ಕೊಡಲಾಗುವುದು. ಆದ್ದರಿಂದ ಭಾರತದಲ್ಲಿಯೆ ತೋಪು, ಬಂದೂಕುಗಳು, ರಡಾರ್ಸ್, ತೋಪುಗಳನ್ನು ಸಾಗಿಸುವ ವಾಹನಗಳು, ನೌಕಾದಳದ ಅನೇಕ ಯುದ್ಧನೌಕೆಗಳು, ಯುದ್ಧ ವಿಮಾನಗಳು ತಯಾರಾಗುವವು. ಅದೇ ರೀತಿ ಯುದ್ಧಕಾಲದಲ್ಲಿ ಬೇಕಾಗುವ ವಾಹನಗಳು ಕೂಡ ಇಲ್ಲಿಯೇ ತಯಾರಾಗುವವು. ಇದರಿಂದ ರಕ್ಷಣಾ ಕ್ಷೇತ್ರದಲ್ಲಿ ಕ್ರಾಂತಿಯಾಗುವುದು. ನಾವು ಸುಮಾರು ೧೦೧ ಉತ್ಪಾದನೆಗಳ ಆಮದನ್ನು ನಿಲ್ಲಿಸಲಿಕ್ಕಿದ್ದೇವೆ. ಆದುದರಿಂದ ಇವುಗಳನ್ನು ಭಾರತದಲ್ಲಿಯೇ ತಯಾರಿಸಬೇಕಾಗುವುದು. ಇದೆಲ್ಲವೂ ಮುಂದಿನ ನಾಲ್ಕೈದು ವರ್ಷಗಳಲ್ಲಿ ಸಾಧ್ಯವಾಗಲಿದೆ. ಇದರಿಂದ ಭಾರತ ಆತ್ಮನಿರ್ಭರವಾಗುವುದು.
೮. ವಿದೇಶಿ ವಸ್ತುಗಳಿಗಿಂತ ಭಾರತೀಯ ವಸ್ತುಗಳ ಬೆಲೆ ಕಡಿಮೆ ಇರಬೇಕು !
ಭಾರತದಲ್ಲಿ ತಯಾರಿಸಿದ ವಸ್ತುಗಳ ಬೆಲೆಯು ವಿದೇಶದಲ್ಲಿ ಖರೀದಿಸಿದ ವಸ್ತುಗಳಿಗಿಂತ ಕಡಿಮೆಯಿರಬೇಕು; ಆದರೆ ಹಾಗಾಗುವುದಿಲ್ಲ. ನಾವು ರಶ್ಯಾದಿಂದ ಸುಖೋಯಿ ವಿಮಾನಗಳನ್ನು ಖರೀದಿ ಮಾಡಿದ್ದೆವು. ಅನಂತರ ನಾವು ಆ ವಿಮಾನಗಳನ್ನು ಬೆಂಗಳೂರಿನಲ್ಲಿರುವ ನಮ್ಮ ‘ಹಿಂದೂಸ್ಥಾನ ಎರೋನಾಟಿಕ್ಸ ಲಿಮಿಟೆಡ್ ಕಂಪನಿಯಲ್ಲಿ ತಯಾರಿಸಿದೆವು. ನಾವು ರಶ್ಯಾದಿಂದ ಸುಖೋಯಿ ವಿಮಾನಗಳನ್ನು ಖರೀದಿಸುವಾಗ ಒಂದು ವಿಮಾನದ ಬೆಲೆ ೩೫೦ ಕೋಟಿ ರೂಪಾಯಿಗಳಷ್ಟಿತ್ತು. ಅದೇ ವಿಮಾನವನ್ನು ನಾವು ಬೆಂಗಳೂರಿನ ‘ಹಿಂದುಸ್ಥಾನ ಎರೋನಾಟಿಕ್ಸ್ ಲಿಮಿಟೆಡ್ನಲ್ಲಿ ತಯಾರಿಸಿದಾಗ ಅದಕ್ಕೆ ೪೫೦ ಕೋಟಿ ರೂಪಾಯಿ ಕೊಡಬೇಕಾಯಿತು. ಇಂತಹ ಆತ್ಮನಿರ್ಭರತೆ ಏತಕ್ಕೆ ಬೇಕು ? ಅದು ಇನ್ನುಮುಂದೆ ಆಗಬಾರದು.
೮ ಅ. ಉತ್ಪಾದನೆಗಳ ಬೆಲೆ ಕಡಿಮೆ ಮತ್ತು ತಂತ್ರಜ್ಞಾನದ ಗುಣಮಟ್ಟ ಚೆನ್ನಾಗಿರಬೇಕು ! : ಭಾರತದಲ್ಲಿ ಟ್ಯಾಂಕ್‌ಗಳನ್ನು ಸಾಗಿಸಲು ‘ಟೆಟ್ರಾ ವಾಹನಗಳನ್ನು ಉಪಯೋಗಿಸಲಾಗುತ್ತದೆ. ಈ ವಾಹನಗಳ ತಯಾರಕರು ನಮಗೆ ಈ ವಾಹನಗಳನ್ನು ೫೦ ಲಕ್ಷ ರೂಪಾಯಿಗಳಿಗೆ ಒಂದರಂತೆ ಕೊಡುವುದಾಗಿ ಒಪ್ಪಿಕೊಂಡಿದ್ದರು. ಅದೇ ವಾಹನವನ್ನು ನಮ್ಮ ಸರಕಾರದ ‘ಬಿಈಎಮ್‌ಎಲ್ನ (ಭಾರತ ಅರ್ಥ್ ಮೂವರ‍್ಸ್ ಲಿಮಿಟೆಡ್) ಕಾರ್ಖಾನೆಯಲ್ಲಿ ತಯಾರಿಸಲಾಯಿತು, ಆಗ ಅವುಗಳ ಬೆಲೆ ಮೂರುಪಟ್ಟು ಹೆಚ್ಚಾಯಿತು. ಉತ್ಪಾದನೆಯ ಬೆಲೆ ಕಡಿಮೆ ಇರುವುದರೊಂದಿಗೆ ತಂತ್ರಜ್ಞಾನದ ಗುಣಮಟ್ಟವೂ ಚೆನ್ನಾಗಿರಬೇಕು. ಈ ಉತ್ಪಾದನೆಗಳ ನಿರ್ವಹಣೆ (ರಿಪೇರಿ) ನಮ್ಮಿಂದಾಗಬೇಕು. ಅದೇ ರೀತಿ ಅದರ ಮುಂದಿನ ಆಧುನಿಕರಣದ ದೃಷ್ಟಿಯಲ್ಲಿಯೂ ವಿಚಾರಮಾಡಬೇಕಾಗಿದೆ.
೯. ಆತ್ಮನಿರ್ಭರ ಭಾರತದ ದಿಶೆಯಲ್ಲಿ ಸೈನ್ಯದಳದ ಪ್ರಯಾಣ
ರಕ್ಷಣಾ ಕ್ಷೇತ್ರದಲ್ಲಿ ನಾವು ಖಾಸಗಿ ಕಂಪನಿಗಳಿಗೆ ಅವಕಾಶವನ್ನು ನೀಡಿರುವುದು ಅತ್ಯಂತ ಒಳ್ಳೆಯ ವಿಷಯವಾಗಿದೆ. ಅದರ ಲಾಭ ನಮಗೆ ಸಿಗತೊಡಗಿದೆ. ಪುಣೆಯಲ್ಲಿನ ‘ಭಾರತ ಫೋರ್ಜ್ ಈ ಕಂಪನಿಯು ಸೈನ್ಯದಳಕ್ಕಾಗಿ ಆಧುನಿಕ ತೋಪುಗಳನ್ನು ತಯಾರಿಸಿದೆ. ಅವು ಸೈನ್ಯದಳಕ್ಕೆ ಒಪ್ಪಿಗೆ ಆಗಿವೆ ಹಾಗೆಯೇ ‘ಎಲ್ ಅಂಡ್ ಟಿ ಯು ನಮಗೆ ಒಂದು ಒಳ್ಳೆಯ ಸಬ್‌ಮರಿನ್ ತಯಾರಿಸಿ ಕೊಟ್ಟಿದೆ. ಈ ಮೇಲಿನ ಎಲ್ಲ ವಿಷಯಗಳ ಬಗ್ಗೆ ವಿಚಾರ ಮಾಡಿದರೆ, ‘ಆತ್ಮನಿರ್ಭರ ಭಾರತ ಈ ಯೋಜನೆಗೆ ಖಂಡಿತ ಯಶಸ್ಸು ಸಿಗುವುದು ! – (ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ