ಮತಾಂಧರು ಎಂದಿನಂತೆ ತಮ್ಮ ಧಾರ್ಮಿಕ ಶ್ರದ್ಧಾಸ್ಥಾನದ ತಥಾಕಥಿತ ಅಪಮಾನವಾದಾಗ ಗಲಭೆ ಮಾಡಿದರು. ಈ ಬಾರಿ ಗಲಭೆ ಬೆಂಗಳೂರಿನಲ್ಲಿ ನಡೆದಿದೆ. ಇದರಲ್ಲಿ ೬೦ ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡರು. ಗಾಯಗೊಂಡವರಲ್ಲಿ ಒಬ್ಬ ಹೆಚ್ಚುವರಿ ಪೊಲೀಸ್ ಆಯುಕ್ತರೂ ಇದ್ದಾರೆ. ೩೦೦ ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದರು. ೨ ಪೊಲೀಸ್ ಠಾಣೆಗಳನ್ನು ಧ್ವಂಸಗೊಳಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಸ್ವರಕ್ಷಣೆಗಾಗಿ ನಡೆಸಿದ ಗೊಲೀಬಾರಿನಲ್ಲಿ ೩ ಮತಾಂಧರು ಮೃತಪಟ್ಟರು. ರಾಜ್ಯದಲ್ಲಿ ಭಾಜಪ ಸರಕಾರವಿರುವುದರಿಂದ ಕೊನೆಗೂ ಪೊಲೀಸರು ಗೊಲೀಬಾರ ನಡೆಸಿ ಗಲಭೆಯನ್ನು ನಿಲ್ಲಿಸಿದರು. ‘ಗೊಲೀಬಾರ್ ಮಾಡದೇ ಮತಾಂಧರ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಎಂಬುದನ್ನು ಗಮನದಲ್ಲಿರಿಸಿ ಇನ್ನು ಮುಂದೆ ದೇಶದ ಯಾವುದೇ ಸ್ಥಳದಲ್ಲಿ ಮತಾಂಧರು ಗಲಭೆಯನ್ನು ಮಾಡಲು ಪ್ರಯತ್ನಿಸಿದರೆ, ಲಾಠಿ, ಅಶ್ರುವಾಯು ಇತ್ಯಾದಿಗಳನ್ನು ಉಪಯೋಗಿಸುವ ಬದಲು ನೇರ ಗೊಲೀಬಾರ್ ಮಾಡಲು ಆದೇಶ ನೀಡುವ ಕಾನೂನು ರೂಪಿಸಬೇಕು ಎಂದು ರಾಷ್ಟ್ರಪ್ರೇಮಿ ನಾಗರಿಕರು ಮನವಿ ಮಾಡಬೇಕು.
ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಸಾಮ್ಯವಾದಿ, ಎಮ್.ಐ.ಎಮ್, ಸಮಾಜವಾದಿ, ತೃಣಮೂಲ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್ ಇತ್ಯಾದಿ ಪಕ್ಷಗಳ ಸರಕಾರವಿರುತ್ತಿದ್ದರೆ, ಅನೇಕ ಹಿಂದೂಗಳ ಹತ್ಯೆಯಾದ ಬಳಿಕ, ಪೊಲೀಸರ ಹತ್ಯೆಯಾದ ಬಳಿಕ ಬಹುತೇಕವಾಗಿ ಗಲಭೆಯನ್ನು ತಡೆಯಲಾಗುತ್ತಿತ್ತು ಎನ್ನುವುದು ಪೂರ್ವಾನುಭವದಿಂದ ಯಾರಿಗಾದರೂ ಅನಿಸಬಹುದು. ಈಗಲೂ ಈ ರಾಜಕೀಯ ಪಕ್ಷಗಳು ಎಲ್ಲಿಯೂ ಮತಾಂಧರು ಮಾಡಿರುವ ಇಷ್ಟು ದೊಡ್ಡ ಹಿಂಸಾಚಾರದ ಬಳಿಕವೂ ಅದನ್ನು ವಿರೋಧಿಸಲಿಲ್ಲ ಎನ್ನುವುದನ್ನು ಗಮನದಲ್ಲಿಡಬೇಕು. ಅಲ್ಪಸಂಖ್ಯಾತರ ಮೇಲೆ ತಥಾಕಥಿತ ದೌರ್ಜನ್ಯ ಮಾಡುವುದರ ವಿರುದ್ಧ ಸತತ ಭಾಜಪ ಮತ್ತು ಹಿಂದುತ್ವನಿಷ್ಠರನ್ನು ಟೀಕಿಸುವ ಮಾಯಾವತಿ, ಮಮತಾ ಬ್ಯಾನರ್ಜಿ, ಅಖಿಲೇಶ ಯಾದವ, ರಾಹುಲ ಗಾಂಧಿ, ಅಸದುದ್ದೀನ ಓವೈಸಿ ಮುಂತಾದವರು ಬೆಂಗಳೂರಿನ ಘಟನೆಯ ಬಗ್ಗೆ ಈ ದೇಶದಲ್ಲಿ ಇಂತಹ ಯಾವುದೇ ಘಟನೆಯೇ ಸಂಭವಿಸಿಲ್ಲ ಎಂಬಂತೆ ಮೌನ ವಹಿಸಿದ್ದಾರೆ. ಜಾವೇದ ಅಖ್ತರ, ಸ್ವರಾಭಾಸ್ಕರ, ಶಬಾನಾ ಆಜ್ಮಿ, ಜಿತೇಂದ್ರ ಆಹ್ವಾಡ, ಪ್ರಶಾಂತ ಭೂಷಣ, ಅರುಂಧತಿ ರಾಯ್, ರಾಜದೀಪ ಸರದೇಸಾಯಿ, ರವೀಶ ಕುಮಾರ, ಕನ್ಹೈಯಾ ಕುಮಾರ ಮುಂತಾದ ತಥಾಕಥಿತ ಜಾತ್ಯತೀತರು ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ ಎನ್ನುವುದನ್ನು ಕಂಡುಹಿಡಿಯಲು ಒಂದು ವಿಶೇಷ ತನಿಖಾತಂಡವನ್ನು ಸ್ಥಾಪಿಸಬೇಕಾಗಬಹುದು ಎಂದು ಯಾರಾದರೂ ಹೇಳಿದರೆ ಆಶ್ಚರ್ಯವೇನಿಲ್ಲ. ಬೆಂಗಳೂರಿನ ಈ ಗಲಭೆಯ ಬಳಿಕ ಈ ಡಾಂಭಿಕತನ ಜನ್ಮಹಿಂದೂಗಳೆದುರು ಬಯಲಾಗಿದೆ. ಜನ್ಮಹಿಂದೂಗಳಿಗೆ ಸತತ ಜಾತ್ಯತೀತವಾದದ ಪಾಠ ಹೇಳುವ ಇವೆಲ್ಲ ರಾಜಕೀಯ ಪಕ್ಷಗಳು ಮತ್ತು ವ್ಯಕ್ತಿಗಳು ಎಷ್ಟು ಡಾಂಭಿಕರು ಎನ್ನುವುದನ್ನು ಈಗ ಜನ್ಮಹಿಂದೂಗಳು ಗಮನಿಸಬೇಕು. ಇದಕ್ಕೆ ಕಾರಣವೆಂದರೆ ಇವರು ಮೌನವಿದ್ದು ‘ಬೆಂಗಳೂರಿನ ಗಲಭೆ ಜಾತ್ಯತೀತ ಗಲಭೆಯಾಗಿತ್ತು. ಅದರಲ್ಲಿ ಯಾವುದೇ ಧರ್ಮದ ಕೈವಾಡವಿರಲಿಲ್ಲ ಎಂದು ಹೇಳಲಿಚ್ಛಿಸಿದ್ದರು. ಈ ಜನರು ಮತಾಂಧರಿಗೆ ಎಂದಿಗೂ ಜಾತ್ಯತೀತದ ಪಾಠವನ್ನು ಕಲಿಸುವುದಿಲ್ಲ ಮತ್ತು ಮತಾಂಧರೂ ಅದನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಅವರು ಅವರ ಧರ್ಮದಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಾರೆ, ಅವರ ಕಾನೂನು ಸ್ವತಂತ್ರವಾಗಿದೆ. ಜನ್ಮಹಿಂದೂಗಳು ಧರ್ಮಕ್ಕನುಸಾರ ನಡೆದುಕೊಳ್ಳುವುದಕ್ಕಿಂತ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ. ಈ ಕಾರಣದಿಂದ ಅವರು ಯಾವಾಗಲೂ ಮತಾಂಧರಿಂದ ಪೆಟ್ಟು ತಿನ್ನುತ್ತಾರೆ ಮತ್ತು ಆ ಕಡೆಗೆ ‘ಮತಾಂಧರಿಂದ ಪೆಟ್ಟು ತಿನ್ನುವುದೇ ನಿಜವಾದ ಜಾತ್ಯತೀತವಾಗಿದೆ, ಎಂದೇ ತಿಳಿದುಕೊಂಡು ಜೀವಿಸುತ್ತಿದ್ದಾರೆ. ಇದರಿಂದ ಡಾಂಭಿಕ ಜಾತ್ಯತೀತವಾದಿಗಳು ‘ಗಲಭೆಕೋರರಿಗೆ ಕಠಿಣ ಶಿಕ್ಷೆ ವಿಧಿಸಿರಿ, ಅವರ ಮೇಲೆ ಕ್ರಮಕೈಗೊಳ್ಳಿ ಎಂದು ಎಲ್ಲಿಯೂ ಮನವಿ ಮಾಡಿಕೊಂಡಿಲ್ಲ.
ಡಾಂಭಿಕ ಕಾಂಗ್ರೆಸ್ಸಿಗರು ಮತ್ತು ಪ್ರಗತಿಪರರು !
ಕಾಂಗ್ರೆಸ್ಸಿನ ಹಿಂದುಳಿದ ವರ್ಗದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಅಳಿಯ ನವೀನನು ಫೇಸಬುಕ್‌ನಲ್ಲಿ ಮಹಮ್ಮದ ಪೈಗಂಬರರ ವಿಷಯದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರಿಂದ ಈ ಗಲಭೆ ಘಟಿಸಿತು. ವಿಪಕ್ಷದವರು ‘ನವೀನ ಭಾಜಪದ ಕಾರ್ಯಕರ್ತನಾಗಿದ್ದಾನೆ ಎಂದು ಹೇಳುತ್ತಿದ್ದಾರೆ; ಆದರೆ ಅವನು ಕಾಂಗ್ರೆಸ್ ಶಾಸಕನ ಅಳಿಯನಾಗಿದ್ದಾನೆ ಎನ್ನುವುದು ಸತ್ಯವಾಗಿದೆ. ಹೀಗಿರುವಾಗ ಕಾಂಗ್ರೆಸ್ ತಮ್ಮ ಮೇಲಿನ ಇಂತಹ ಆಕ್ರ್ರಮಣದ ವಿಷಯದಲ್ಲಿ ಏಕೆ ಮಾತನಾಡುತ್ತಿಲ್ಲ ? ಮೂರ್ತಿಯವರ ಮನೆಯ ಮೇಲೆ ೨ ಸಾವಿರಕ್ಕಿಂತ ಅಧಿಕ ಮತಾಂಧರ ಗುಂಪು ಹಲ್ಲೆ ಮಾಡಿತು. ಅವರ ಮನೆಗೆ ಬೆಂಕಿಹಚ್ಚಿ ಧ್ವಂಸ ಮಾಡಿತು. ಹಿಂದುಳಿದ ವರ್ಗದವರ ಮೇಲೆ ಹಲ್ಲೆಯಾದಾಗ ಕೋಲಾಹಲವೆಬ್ಬಿಸುವ ಕಾಂಗ್ರೆಸ್ ಮತ್ತು ಪ್ರಗತಿಪರರು ಕೂಡ ಇದರ ಮೇಲೆ ಮೌನವಹಿಸಿದ್ದಾರೆ. ಇದರಿಂದ ಹಿಂದುಳಿದ ವರ್ಗದವರ ಬಗ್ಗೆ ಇರುವ ಅವರ ಪ್ರೀತಿಯು ಎಷ್ಟು ಡಾಂಭಿಕವಾಗಿದೆಯೆಂದು ಪುನಃ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಮತಾಂಧರಿಗಾಗಿ ತನ್ನ ಪಕ್ಷದ ಶಾಸಕರನ್ನೂ ಬಲಿ ಕೊಡಲು ಸಿದ್ಧರಾಗಿದ್ದಾರೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ. ಇಷ್ಟೇ ಅಲ್ಲದೇ ಮೂರ್ತಿಯವರೂ ಈ ವಿಷಯದಲ್ಲಿ ದೂರು ದಾಖಲಿಸದಿರಲು ನಿರ್ಧರಿಸಿದ್ದರು. ಮೂರ್ತಿಯವರ ಅಳಿಯ ಇದರಲ್ಲಿ ಸಿಲುಕಿದ್ದಾನೆ. ಆದ್ದರಿಂದಲೇ ಅವರು ಇಂತಹ ನಿರ್ಣಯವನ್ನು ತೆಗೆದುಕೊಂಡಿರಬಹುದು ಎಂದೂ ಅನಿಸುತ್ತದೆ. ಅಂದರೆ ಮತಾಂಧರನ್ನು ರಕ್ಷಿಸಲು ಅವಕಾಶ ನೀಡುವ ಪ್ರಯತ್ನವಾಗಿದೆ. ಇನ್ನೊಂದೆಡೆ ‘ಹಿಂದುಳಿದವರು-ಮುಸಲ್ಮಾನರು ಭಾಯಿ ಭಾಯಿ ಎನ್ನುವ ಆ ಪ್ರಗತಿ(ಅಧೋ)ಗತಿಪರರು ಮೂರ್ತಿಯವರ ಮನೆಯ ಮೇಲಿನ ಹಲ್ಲೆ ಬಗ್ಗೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ. ಮತಾಂಧರು ಹಿಂದೂಗಳ ಮೇಲೆ ಹಲ್ಲೆ ಮಾಡುವಾಗ ಅವರು ಹಿಂದುಳಿದವರು ಅಥವಾ ಬ್ರಾಹ್ಮಣ ಎಂದು ಭೇದ ಮಾಡುವುದಿಲ್ಲ. ಅವರು ಪ್ರತಿಯೊಬ್ಬರನ್ನೂ ‘ಹಿಂದೂ ಎಂದೇ ನೋಡುತ್ತಾರೆ ಮತ್ತು ಅವರ ಮೇಲೆ ಹಲ್ಲೆ ಮಾಡುತ್ತಾರೆ ಎನ್ನುವುದು ಎಲ್ಲರ ಗಮನಕ್ಕೆ ಯಾವಾಗ ಬರುವುದು ? ಎಂಬ ಪ್ರಶ್ನೆ ಮೂಡುತ್ತದೆ. ಕೇವಲ ರಾಜಕೀಯ ಲಾಭಕ್ಕಾಗಿ ಹಾಗೂ ಬ್ರಾಹ್ಮಣ ಮತ್ತು ಹಿಂದುತ್ವನಿಷ್ಠರ ದ್ವೇಷಕ್ಕಾಗಿಯೇ ಈ ರೀತಿಯಲ್ಲಿ ‘ಹಿಂದುಳಿದವರ್ಗ-ಮುಸಲ್ಮಾನ ಭಾಯಿ ಭಾಯಿ ತೋರಿಸಲು ಪ್ರಯತ್ನಿಸುತ್ತಾರೆ ಎಂದೂ ಅನಿಸುತ್ತದೆ. ಅದರಲ್ಲಿ ಈ ಗಲಭೆಯ ಸಮಯದಲ್ಲಿ ಮತಾಂಧರು ಶ್ರೀ ಹನುಮಂತನ ದೇವಸ್ಥಾನವನ್ನು ಗುರಿ ಮಾಡುವವರಿದ್ದರು. ಆಗ ಅವರ ಧರ್ಮ ಬಾಂಧವರೇ ಅದರ ರಕ್ಷಣೆ ಮಾಡಿದರು. ಈ ಗಲಭೆಯ ಕುರಿತು ಮೌನ ವಹಿಸುವವರು ಈಗ ಇದರ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿ ಮತಾಂಧರನ್ನು ರಕ್ಷಿಸಬಹುದು.
ಮತಾಂಧರ ಮೇಲೆ ನಿಯಂತ್ರಣ ಬೇಕು
‘ಈ ಗಲಭೆ ಪೂರ್ವನಿಯೋಜಿತವಾಗಿತ್ತು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಹೇಳಿದ್ದಾರೆ. ಅದು ಸತ್ಯವೂ ಆಗಿದೆ. ಮತಾಂಧರ ಪ್ರತಿಯೊಂದು ಗಲಭೆಯೂ ಪೂರ್ವನಿಯೋಜಿತವಾಗಿರುತ್ತದೆ. ಮೂಲದಲ್ಲಿ ಮತಾಂಧರು ಯಾವಾಗಲೂ ಗಲಭೆ ಮಾಡಲು ಸಿದ್ಧರಾಗಿಯೇ ಇರುತ್ತಾರೆ. ಅವರ ಬಳಿ ಅಕ್ರಮ ಶಸ್ತ್ರಾಸ್ತ್ರಗಳು ದೊಡ್ಡ ಪ್ರಮಾಣದಲ್ಲಿರುತ್ತವೆ. ಅವರಿಗೆ ಗಲಭೆ ಮಾಡಲು ಕೇವಲ ಕಾರಣದ ಅವಶ್ಯಕತೆಯಿರುತ್ತದೆ. ಅದರಲ್ಲಿ ದ್ವಿಚಕ್ರವಾಹನದ ಧಕ್ಕೆಯಾಯಿತು, ಹೋಳಿಯ ಸಮಯದಲ್ಲಿ ಬಣ್ಣ ಎರಚಿದರು, ಧರ್ಮಗ್ರಂಥದ ಪುಟಗಳನ್ನು ಹರಿದರೆಂಬ ಗಾಳಿ ಸುದ್ದಿ, ಮ್ಯಾನ್ಮಾರದಲ್ಲಿ ರೋಹಿಂಗ್ಯಾಗಳ ಮೇಲೆ ದೌರ್ಜನ್ಯವಾಯಿತು, ಇಂತಹ ಕಾರಣಗಳಿಂದ ಅವರು ಕೆಲವೇ ಕ್ಷಣಗಳಲ್ಲಿ ಗಲಭೆಯನ್ನು ನಡೆಸುತ್ತಾರೆ ಇಲ್ಲಿ ಭಾಜಪ ಸರಕಾರ ಇರುವಾಗಲೂ ಗಲಭೆಯನ್ನು ನಿಯಂತ್ರಿಸಲು ೬೦ ಪೊಲೀಸರು ಗಾಯಗೊಳ್ಳಬೇಕಾಯಿತು. ೩೦೦ ವಾಹನಗಳನ್ನು ಸುಡಬೇಕಾಯಿತು. ೨ ಪೊಲೀಸ್ ಠಾಣೆಗಳನ್ನು ಧ್ವಂಸಗೊಳಿಸಬೇಕಾಯಿತು. ಇದನ್ನು ಸಹಿಸಲು ಸಾಧ್ಯವಿಲ್ಲ. ಏಕೆಂದರೆ ಮತಾಂಧರು ಗಲಭೆ ಮಾಡಲು ಧೈರ್ಯ ಮಾಡಲಾಗದಂತಹ ಸ್ಥಿತಿಯನ್ನು ಶಾಸಕರು ನಿರ್ಮಾಣ ಮಾಡಬೇಕು. ಇದರಿಂದ ಸಮಾಜ ಮತ್ತು ದೇಶದ ರಕ್ಷಣೆಯಾಗಲಿದೆ.