ಅಮೇರಿಕಾದ ನಿಯತಕಾಲಿಕೆ ‘ಟೈಮ್ ಮ್ಯಾಗಝಿನ್ ಜಗತ್ತಿನ ೧೦೦ ಪ್ರಭಾವಿ ವ್ಯಕ್ತಿಗಳ ಹೆಸರಿನ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಸಹ ಸೇರಿಸಲಾಗಿದೆ. ಜಗತ್ತಿನಲ್ಲಿ ಮೋದಿಯವರ ಪ್ರಭಾವ ಹೆಚ್ಚುತ್ತಿದೆ, ಎನ್ನುವ ಸತ್ಯವನ್ನು ‘ಟೈಮ್ ಅಲ್ಲಗಳೆಯಲಿಲ್ಲ; ಆದರೆ ಅದನ್ನು ಮನಃಪೂರ್ವಕ ಸ್ವೀಕರಿಸುವ ಮಾನಸಿಕತೆಯನ್ನು ‘ಟೈಮ್ ತೋರಿಸಲಿಲ್ಲ. ಈ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸುವಾಗ ಸಂಪಾದಕ ಕಾರ್ಲ್ ವಿಕ್ ಇವರು ಮಂಡಿಸಿದ ಅಭಿಪ್ರಾಯವು ಮೋದಿ ದ್ವೇಷದಿಂದ ಕೂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಅವರ ಅಭಿಪ್ರಾಯಕ್ಕನುಸಾರ ಭಾರತದಲ್ಲಿ ಶೇ. ೮೦ ರಷ್ಟಿರುವ ಬಹು ಸಂಖ್ಯಾತ ಹಿಂದೂಗಳು ಮೋದಿಯವರನ್ನು ಆರಿಸಿದ್ದಾರೆ. ಇನ್ನೂ ಮುಂದುವರಿದು ‘ಮೋದಿ ಮತ್ತು ಅವರ ಪಕ್ಷವು ಭಾರತದಲ್ಲಿ ಮುಸಲ್ಮಾನವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ಆದ್ದರಿಂದ ಭಾರತೀಯ ಪ್ರಜಾಪ್ರಭುತ್ವದ ಅವನತಿ ಆಗುತ್ತಿದೆ, ಎಂದು ಕೂಡ ಅವರು ಹೇಳಿದ್ದಾರೆ. ಒಂದೆಡೆ ಮೋದಿಯವರನ್ನು ‘ಜಗತ್ತಿನ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಕೂರಿಸುವುದು, ಇನ್ನೊಂದೆಡೆ ‘ಅವರು ಪ್ರಜಾಪ್ರಭುತ್ವವನ್ನು ಅಪಾಯಕ್ಕೀಡು ಮಾಡುತ್ತಿದ್ದಾರೆ, ಎಂದು ಹೇಳುವುದು, ಇಂತಹ ಇಬ್ಬಗೆಯ ಧೋರಣೆಯನ್ನು ತೋರಿಸಿದ್ದಾರೆ. ಮಹತ್ವದ ವಿಷಯವೆಂದರೆ, ಯಾವ ವ್ಯಕ್ತಿ ಭಾರತೀಯ ಪ್ರಜಾ ಪ್ರಭುತ್ವವನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾರೆಯೋ, ಆ ವ್ಯಕ್ತಿ ‘ಟೈಮ್ಗೆ ಪ್ರಭಾವಶಾಲಿಯೆಂದು ಹೇಗೆ ಅನಿಸುತ್ತದೆ ? ಇದು ಬುದ್ಧಿಹೀನತೆಯ ಲಕ್ಷಣವಲ್ಲವೇ ? ಸತ್ಯವು ಕಹಿಯಾಗಿದ್ದರೂ, ಅದನ್ನು ಅಷ್ಟೇ ಪ್ರಾಮಾಣಿಕವಾಗಿ ಸಮಾಜದ ಮುಂದೆ ಮಂಡಿಸ ಬೇಕಾಗುತ್ತದೆ. ಇದು ಪತ್ರಿಕಾರಂಗದ ತತ್ತ್ವವಾಗಿದೆ; ಆದರೆ ಮೋದಿಯವರ ವಿಷಯದಲ್ಲಿ ‘ಟೈಮ್ ನಿಯತಕಾಲಿಕೆಯು ತತ್ತ್ವವನ್ನು ನಿರಾಕರಿಸುತ್ತಿರುವುದು ಕಾಣಿಸುತ್ತದೆ. ಪ್ರಜಾಪ್ರಭುತ್ವದ ಪದ್ಧತಿಯಲ್ಲಿ ಭಾರತದಲ್ಲಿ ಸಮ್ಮತಿಸಿದ ಹಾಗೂ ಭಾರತದ ಹಿತಕ್ಕಾಗಿ ಇರುವ ಪೌರತ್ವ ತಿದ್ದುಪಡಿ ಕಾನೂನನ್ನು ವಿರೋಧಿಸುವ ೮೨ ವರ್ಷದ ಬಿಲ್ಕೀಸ್ ಎನ್ನುವ ಮಹಿಳೆಯನ್ನು ಕೂಡ ಈ ಪಟ್ಟಿಯಲ್ಲಿ ಸೇರಿಸ ಲಾಗಿದೆ. ಶಾಹೀನ್‌ಬಾಗ್‌ನಲ್ಲಿನ ಆಂದೋಲನವನ್ನು ರಾಷ್ಟ್ರಘಾತಕ ಘಟಕಗಳಿಂದ ಮಾಡಲಾಗಿತ್ತು. ಅದಕ್ಕೆ ಮತಾಂಧರು ಮತ್ತು ಜಿಹಾದಿ ಸಂಘಟನೆಗಳ ಬೆಂಬಲವಿತ್ತು ಹಾಗೂ ದೆಹಲಿಯ ಗಲಭೆಯಲ್ಲಿ ತೊಡಗಿದ ಮತಾಂಧರಿಗೆ ಶಾಹೀನ್‌ಬಾಗ್‌ನ ಆಂದೋಲನ ದಲ್ಲಿ ತೊಡಗಿದ್ದ ಮತಾಂಧರೊಂದಿಗೆ ನಂಟಿತ್ತು. ಆದ್ದರಿಂದ ಇಂತಹ ರಾಷ್ಟ್ರಘಾತಕ ಆಂದೋಲನದ ಮುಖವಾಡ ಆಗಿದ್ದ ವೃದ್ಧ ಮಹಿಳೆ ‘ಟೈಮ್ಗೆ ಪ್ರಭಾವಶಾಲಿ ಎನಿಸುವುದೆಂದರೆ, ಇದು ಅದರ ಪತ್ರಿಕಾರಂಗದ ಮೇಲೆಯೇ ಸಂಶಯವನ್ನುಂಟು ಮಾಡುವು ದಾಗಿದೆ. ಭಾರತದ ರಾಷ್ಟ್ರಪ್ರೇಮಿ ಪ್ರಧಾನಮಂತ್ರಿ ಮತ್ತು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ ಮಹಿಳೆಯನ್ನು ಒಂದೇ ಸಾಲಿನಲ್ಲಿ ಕೂರಿಸುವುದೆಂದರೆ ಇದು ಕೇವಲ ಮೋದಿ ದ್ವೇಷವಲ್ಲ, ಭಾರತದ್ವೇಷವೇ ಆಗಿದೆ. ಒಂದು ರಾಷ್ಟ್ರದ ಪ್ರಧಾನ ಮಂತ್ರಿಗಳ ಕರ್ತವ್ಯವನ್ನು ನಿರಾಕರಿಸುವಾಗ ‘ಟೈಮ್ ತೋರಿಸಿದ ಅದರ ವೈಚಾರಿಕ ದಿವಾಳಿತನವು ಆಕ್ರೋಶಕಾರಿಯಾಗಿದೆ. ವೈಚಾರಿಕ
ಮಾಲಿನ್ಯದ ವಿಚಾರಗಳನ್ನು ಒಂದು ಪಕ್ಷ ಪ್ರತಿವಾದ ಮಾಡಿ ತಡೆ ಗಟ್ಟಬಹುದು; ಆದರೆ ಈ ಟೈಮ್ನ ವೈಚಾರಿಕತೆ ಉಗ್ರವಾದವಾಗಿದೆ. ಇದು ‘ಟೈಮ್ ಮ್ಯಾಗಝಿನ್ ಆಗಿರದೇ ‘ಟೆರರ್ ಮ್ಯಾಗಝಿನ್ ಆಗಿದೆ. ಜಗತ್ತಿನಲ್ಲಿ ವೈಚಾರಿಕ ಉಗ್ರವಾದವನ್ನು ಹಬ್ಬಿಸಿ ಜನರನ್ನು ಬುದ್ಧಿಭ್ರಷ್ಟರನ್ನಾಗಿ ಮಾಡುವ ಇಂತಹ ಪ್ರಸಾರಮಾಧ್ಯಮಗಳು ಉಗ್ರವಾದಕ್ಕಿಂತಲೂ ಅಪಾಯಕಾರಿಯಾಗಿವೆ.
ಶೆರಾನ್ ನೀತಿಯೇ ಬೇಕಾಗಿದೆ !
ಕೇವಲ ‘ಟೈಮ್ ಅಲ್ಲ, ಅಮೇರಿಕಾದಲ್ಲಿನ ‘ವಾಶಿಂಗ್ಟನ್ ಪೋಸ್ಟ್, ಸಿ.ಎನ್.ಎನ್., ‘ನ್ಯೂಯಾರ್ಕ್ ಟೈಮ್ಸ್, ‘ವಾಲ್‌ಸ್ಟ್ರೀಟ್ ಜರ್ನಲ್ ಇತ್ಯಾದಿ ಪ್ರಸಾರಮಾಧ್ಯಮಗಳು ಹಿಂದೂದ್ವೇಷಿ ಹಾಗೂ ಭಾರತ ದ್ವೇಷಿಯೇ ಆಗಿವೆ. ಭಾರತದ ವಿರುದ್ಧ ಬರೆಯುವುದೇ ಅವರಿಗೆ ಆದ್ಯ ಕರ್ತವ್ಯವೆನಿಸುತ್ತದೆ. ಅವರೊಂದಿಗೆ ನಿರಂತರ ಪ್ರತಿವಾದ ಮಾಡುವ ಅವಶ್ಯಕತೆಯಿದೆ; ಆದರೆ ಅವರಿಗೆ ಅವರ ಸ್ಥಾನವನ್ನು ತೋರಿಸಲು ಶೆರಾನ್‌ನೀತಿಯೇ ಬೇಕಾಗಿದೆ. ಏರಿಯಲ್ ಶೆರಾನ್ ಇವರು ಇಸ್ರೇಲ್‌ನ ೧೧ ನೆಯ ಪ್ರಧಾನಮಂತ್ರಿಯಾಗಿದ್ದರು. ಅಮೇರಿಕಾದ ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯವನ್ನು ನಂಬುವ ಅಲ್ಲಿನ ಪ್ರಸಾರಮಾಧ್ಯಮಗಳಿಗೆ ಶೆರಾನ್ ಇವರು ಮಾನವತಾ ವಿರೋಧಿ ಎಂದು ಅನಿಸುತಿದ್ದರು. ಆ ಕಾಲದಲ್ಲಿ ಸಿ.ಎನ್. ಎನ್. ಪ್ಯಾಲೆಸ್ಟೈನ್‌ಗೆ ಪ್ರೋತ್ಸಾಹವನ್ನು ನೀಡುತ್ತಾ ಇಸ್ರೇಲ್ ವಿರುದ್ಧ ಚಟುವಟಿಕೆಗಳನ್ನು ಆರಂಭಿಸಿತ್ತು. ಇಸ್ರೇಲ್ ಹೇಗೆ ‘ರಕ್ತ ಪೀಪಾಸು ಹಾಗೂ ‘ಯುದ್ಧಕೋರ ಆಗಿದ್ದು ಅದು ಪ್ಯಾಲೆಸ್ಟೈನ್‌ಗೆ ಕಿರುಕುಳ ಕೊಡುತ್ತಿದೆ, ಎಂಬುದನ್ನು ಈ ವಾರ್ತಾವಾಹಿನಿಗಳಿಂದ ಪ್ರಸಾರ ಮಾಡಲಾಗುತ್ತಿತ್ತು. ಆದ್ದರಿಂದ ಈ ವಾರ್ತಾವಾಹಿನಿಗೆ ಪಾಠ ಕಲಿಸಲು ಶೆರಾನ್ ಇವರು ಪಣತೊಟ್ಟರು. ಅವರು ಅಮೇರಿಕಾದ ‘ಜ್ಯೂ ಲಾಬಿಯನ್ನು ಸಕ್ರಿಯಗೊಳಿಸಿ ಈ ವಾಹಿನಿಗೆ ಸಿಗುವ ಜಾಹೀರಾತುಗಳನ್ನು ತಡೆದರು. ಇಸ್ರೇಲ್ ಮಾಡಿದ ಈ ಆರ್ಥಿಕ ಆಘಾತವನ್ನು ನಿಲ್ಲಿಸಲು ಈ ವಾಹಿನಿಯ ಸಂಪಾದಕರು ಇಸ್ರೇಲ್‌ಗೆ ಹೋದರು. ಶೆರಾನ್ ಇವರ ಮುಂದೆ ಮೊಣಕಾಲೂರಿದ ನಂತರ ಈ ವಾಹಿನಿಗೆ ಪುನಃ ಜಾಹೀರಾತು ಸಿಗಲು ಆರಂಭವಾಯಿತು. ವೈಚಾರಿಕ ಉಗ್ರವಾದವನ್ನು ಹೀಗೆಯೇ ಮಣ್ಣುಮುಕ್ಕಿಸಬೇಕು. ‘ವಿಚಾರಗಳ ಪ್ರತಿವಾದವನ್ನು ವಿಚಾರಗಳಿಂದ ಮಾಡಬೇಕಾಗುತ್ತದೆ; ಆದರೆ ಯಾವಾಗ ದೇಶದ ಸ್ವಾಭಿಮಾನದ ಮೇಲೆ, ಚರಿತ್ರೆಯ ಮೇಲೆ ಯಾರಾದರೂ ಕೆಸರೆರೆಚಲು ಪ್ರಯತ್ನಿಸುವರೋ, ದೇಶದ ಮಾನಭಂಗ ಮಾಡುವರೋ, ಅವರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಉತ್ತರ ನೀಡುವ ಅವಶ್ಯಕತೆಯಿದೆ. ನಿರಂತರ ಭಾರತದ ವಿರುದ್ಧ ದ್ವೇಷಕಾರುವ ಇಂತಹ ವಿದೇಶಿ ವಾರ್ತಾವಾಹಿನಿಗಳ ವಿರುದ್ಧ ಭಾರತ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ.
ಅಧ್ಯಯನಶೀಲ ಪತ್ರಿಕಾರಂಗದ ಕೊರತೆ !
ಭಾರತ ಮತ್ತು ಅಮೇರಿಕಾದ ಭೌಗೋಲಿಕ ಪರಿಸ್ಥಿತಿ, ಅರ್ಥ ಕಾರಣ, ಸಮಾಜಕಾರಣ ಭಿನ್ನವಾಗಿದೆ. ಅದಕ್ಕಿಂತಲೂ ಹೆಚ್ಚು ಎರಡೂ ದೇಶಗಳ ಸಂಸ್ಕೃತಿ ಬೇರೆಯೇ ಆಗಿದೆ. ಆದ್ದರಿಂದ ಭಾರತದಲ್ಲಿ ಬಂದು ಪತ್ರಿಕೋದ್ಯಮ ಮಾಡಲಿಕ್ಕಿದ್ದರೆ ಇಲ್ಲಿನ ಇತಿಹಾಸ, ಭೂಗೋಲ ಮತ್ತು ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕಾಗುತ್ತದೆ. ‘ಗೂಗಲ್ನಲ್ಲಿ ‘ಸರ್ಚ್ ಮಾಡಿ ಭಾರತವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರೆ, ಸುಳ್ಳು ಇತಿಹಾಸವೇ ಮುಂದೆ ಬರುತ್ತದೆ. ಆಧ್ಯಾತ್ಮಿಕ ದೃಷ್ಟಿಯಲ್ಲಿ ಹಾಗೂ ಸಾಂಸ್ಕೃತಿಕ ದೃಷ್ಟಿಯಲ್ಲಿ ಸಂಪನ್ನವಾಗಿರುವ ಭಾರತವನ್ನು ತಿಳಿದುಕೊಳ್ಳಲು ಈ ವಿದೇಶಿ ಪತ್ರಕರ್ತರು ಸಿದ್ಧರಿಲ್ಲ. ಫ್ರೆಂಚ್ ಪತ್ರಕರ್ತ ಫ್ರಾನ್ಸುವಾ ಗೋತಿಯೆ ಇವರಿಗನುಸಾರ ‘ವಿದೇಶಿ ಪತ್ರಕರ್ತರು ದೆಹಲಿಯಲ್ಲಿ ಕುಳಿತು ಭಾರತದಲ್ಲಿನ ವಾರ್ತೆಯನ್ನು ನೀಡುತ್ತಾರೆ. ಭಾರತವನ್ನು ತಿಳಿದುಕೊಳ್ಳಲು ಅವರಿಗೆ ಇಚ್ಛೆ ಇರುವುದಿಲ್ಲ. ಅವರಿಗೆ ಹಿಂದೂ -ಮುಸಲ್ಮಾನರ ಇತಿಹಾಸ ಗೊತ್ತಿಲ್ಲ, ಅವರಿಗೆ ಹಿಂದೂಗಳ ಮೇಲೆ ಸಾವಿರಾರು ವರ್ಷ ಆಗಿರುವ ದೌರ್ಜನ್ಯಗಳು ಗೊತ್ತಿಲ್ಲ, ಅವರು ಹಿಂದೂ ಅಥವಾ ಹಿಂದುತ್ವದ ವಿಷಯದಲ್ಲಿ ಅಧಿಕಾರದಿಂದ ಬರೆಯಲು ಸಾಧ್ಯವೇ ? ಬ್ರಿಟಿಶ ಪತ್ರಕರ್ತ ಪಾಲ್ ಬ್ರಂಟನ್ ಇವರ ‘ಭಾರತದ ಆಧ್ಯಾತ್ಮಿಕ ರಹಸ್ಯದ ಶೋಧನೆ ಈ ಪುಸ್ತಕ ೧೯೩೪ರಲ್ಲಿ ಪ್ರಸಿದ್ಧವಾಯಿತು. ‘ಭಾರತವು ಸರ್ಪಗಳ ಹಾಗೂ ಮಾಟಮಂತ್ರ ಮಾಡುವವರ ದೇಶವಾಗಿದೆ, ಎಂಬುದು ಅವರ ಅಭಿಪ್ರಾಯವಾಗಿತ್ತು; ಆದರೆ ಭಾರತದಲ್ಲಿ ಸುತ್ತಾಡಿದಾಗ ಅವರಿಗೆ ಭಾರತದ ಆಧ್ಯಾತ್ಮಿಕ ಮಹತ್ವವು ಇಷ್ಟವಾಯಿತು. ಅವರ ಅನುಭವವನ್ನು ಅವರು ಈ ಪುಸ್ತಕದಲ್ಲಿ ಬರೆದಿದ್ದಾರೆ. ಭಾರತದಲ್ಲಿನ ಸಂಸ್ಕೃತಿ ಮತ್ತು ಜನರನ್ನು ತಿಳಿದುಕೊಳ್ಳಲಿಕ್ಕಿದ್ದರೆ, ವಿದೇಶಿ ಪತ್ರಕರ್ತರು ತಮ್ಮ ಕೋಶದಿಂದ ಹೊರಗೆ ಬರಬೇಕು. ಅದಕ್ಕೆ ಅವರು ಸಿದ್ಧರಿಲ್ಲದಿದ್ದರೆ, ಇಂತಹ ಭಾರತದ್ವೇಷಿ ಹಾಗೂ ವೈಚಾರಿಕ ಉಗ್ರವಾದವನ್ನು ಹರಡಿಸುವ ಈ ಪತ್ರಕರ್ತರಿಗೆ ಪಾಠ ಕಲಿಸಲು ಭಾರತ ಕೂಡ ಸಿದ್ಧವಾಗಬೇಕು !