ಲಡಾಖ್‌ನಲ್ಲಿನ ಪರಾಕ್ರಮದ ಗೌರವಾನ್ವಿತರು : ಎಸ್.ಎಫ್.ಎಫ್.’ (ಸ್ಪೆಶಲ್ ಫ್ರಂಟಿಯರ್ ಫೋರ್ಸ್) ಸೈನಿಕರು !

(ನಿವೃತ್ತ) ಬ್ರಿಗೇಡಿಯರ್ ಹೇಮಂತ ಮಹಾಜನ

೧. ಪೆಂಗಾಂಗ್ ತ್ಸೋ ಸರೋವರದ ಯುದ್ಧದಲ್ಲಿ ‘ಎಸ್.ಎಫ್.ಎಫ್.’ನ ಸೈನಿಕರು ತೋರಿದ ಪರಾಕ್ರಮ !

‘ಲಡಾಖ್‌ನಲ್ಲಿ ಪೆಂಗಾಂಗ್ ತ್ಸೋ ಸರೋವರದ ದಕ್ಷಿಣದಲ್ಲಿ ಆಗಸ್ಟ್ ೨೯ ಮತ್ತು ೩೦ ರಂದು ಚೀನಾದ ೫೦೦ ರಿಂದ ೬೦೦ ಸೈನಿಕರು ಭಾರತೀಯ ಪ್ರದೇಶದೊಳಗೆ ನುಗ್ಗಲು ಪ್ರಯತ್ನಿಸುತ್ತಿರುವುದು ಭಾರತೀಯ ಸೈನಿಕರಿಗೆ ಕಾಣಿಸಿತು. ಆಗ ಭಾರತೀಯ ಸೈನಿಕರು ಅವರನ್ನು ಒಳಗೆ ಬರಲು ಬಿಟ್ಟರು, ಆ ಮೇಲೆ ಹೋರಾಟ ಆರಂಭವಾಯಿತು. ಈ ಯುದ್ಧದಲ್ಲಿ ಸೈನಿಕರು ಶಸ್ತ್ರಗಳನ್ನು ಉಪಯೋಗಿಸಿರಲಿಲ್ಲ, ಇದರಲ್ಲಿ ಪರಸ್ಪರ ತಳ್ಳಾಟ, ಬಾಕ್ಸಿಂಗ್, ಕುಸ್ತಿ, ಜ್ಯುಡೋ, ಕ್ಯೂಟೋ ಇತ್ಯಾದಿಗಳೊಂದಿಗೆ ಧೈರ್ಯ, ಶೌರ್ಯ, ನೇತೃತ್ವ ಮುಂತಾದ ಕೌಶಲ್ಯಗಳನ್ನು ಉಪಯೋಗಿಸಲಾಯಿತು ಹಾಗೂ ನಾವು ಈ ಯುದ್ಧವನ್ನು ಅತ್ಯಂತ ಚಾತುರ್ಯದಿಂದ ಹೋರಾಡಿದೆವು.

ಈ ಆಕ್ರಮಕ ಕಾರ್ಯಾಚರಣೆಯಲ್ಲಿ ಬಹುಶಃ ನಮ್ಮ ಒಬ್ಬಿಬ್ಬರು ಸೈನಿಕರು ಪ್ರಾಣ ಕಳೆದುಕೊಂಡಿರಬಹುದು; ಆದರೆ ಚೀನಾದ ೧೫ ರಿಂದ ೨೦ ಸೈನಿಕರು ಸಾವನ್ನಪ್ಪಿದ್ದಾರೆ. ಭಾರತೀಯ ಸೈನಿಕರು ಇದರೊಂದಿಗೆ ಅವರ ೨೦ ರಿಂದ ೨೫ ಸೈನಿಕರನ್ನು ಕೂಡ ಬಂಧಿಸಿದ್ದಾರೆ. ಅನಂತರ ಭಾರತೀಯ ಸೇನೆಯು ತ್ರಿಶೂಲ ಸಹಿತ ವಿವಿಧ ಬೆಟ್ಟಗಳ ಮೇಲೆ ೫ ರಿಂದ ೬ ಸಾವಿರ ಸೈನಿಕರನ್ನು ನೇಮಕ ಮಾಡಿತು. ಇದು ಅತ್ಯಂತ ಆಕ್ರಮಕ ಕೃತ್ಯವಾಗಿತ್ತು. ಈ ಹಿಂದೆ ಯಾವತ್ತೂ ಹೀಗೆ ಘಟಿಸಿರಲಿಲ್ಲ. ಈ ಪರಾಕ್ರಮವನ್ನು ತೋರಿಸಿದವರು ‘ಎಸ್.ಎಫ್.ಎಫ್.ನ (ಸ್ಪೆಶಲ್ ಫ್ರಂಟಿಯರ್ ಫೋರ್ಸ್) ಕಮಾಂಡೋಗಳಾಗಿದ್ದರು ! ಈ ಹಿಂದೆ ಈ ಫೋರ್ಸ್‌ನ ವಿಷಯದಲ್ಲಿ ಇಷ್ಟು ಬಹಿರಂಗವಾಗಿ ಚರ್ಚೆ ನಡೆದಿರಲಿಲ್ಲ; ಆದರೆ ಈಗ ಸರಕಾರಿ ವಾರ್ತೆಗಳನ್ನು ನೀಡುವ ಈ ವಾಹಿನಿಗಳು ಈ ಆಂದೋಲನದಲ್ಲಿ ‘ಎಸ್.ಎಫ್.ಎಫ್. ಪಾಲ್ಗೊಂಡಿದೆ ಎಂಬ ಮಾಹಿತಿಯನ್ನು ನೀಡಿವೆ.

೨. ಪರಾಕ್ರಮಿ ‘ಎಸ್.ಎಫ್.ಎಫ್. ಹಿನ್ನೆಲೆ

೧೯೪೯ ರಲ್ಲಿ ಚೀನಾ ಟಿಬೇಟ್‌ನ ಮೇಲೆ ಆಕ್ರಮಣ ಮಾಡಿತು. ಆಗ ದಲಾಯಿ ಲಾಮಾ ಟಿಬೇಟ್‌ನ ಮುಖ್ಯಸ್ಥರಾಗಿದ್ದರು. ಅವರು ಅತ್ಯಂತ ಶೂರ ಸೈನಿಕರಾಗಿದ್ದರು. ಚೀನಾ ಟಿಬೇಟ್‌ನ ಮೇಲೆ ಆಕ್ರಮಣ ಮಾಡಿ ದೌರ್ಜನ್ಯ ಮಾಡಲು ಆರಂಭಿಸಿತು. ನಿಃಶಸ್ತ್ರ ಟಿಬೇಟಿಯನ್ನರು ಚೀನಾದ ವಿರುದ್ಧ ಗಲಭೆಯೆಬ್ಬಿಸಲು ಪ್ರಯತ್ನಿಸಿದರು. ಆಗ ಸುಮಾರು ಒಂದುವರೆ ಲಕ್ಷ ಟಿಬೇಟಿಯನ್ನರನ್ನು ಚೀನಾ ಹತ್ಯೆಗೈದಿತ್ತು. ಆದ್ದರಿಂದ ೧೯೫೯ ರಲ್ಲಿ ದಲಾಯಿ ಲಾಮಾ ಮತ್ತು ಅವರ ಅನೇಕ ಅನುಯಾಯಿಗಳು ಭಾರತಕ್ಕೆ ಓಡಿ ಬಂದರು. ಅವರು ಈಗ ಭಾರತದ ಧರ್ಮಶಾಲೆಯ ಪರಿಸರದಲ್ಲಿ ವಾಸಿಸುತ್ತಿದ್ದು ಅವರ ಜನಸಂಖ್ಯೆ ಸುಮಾರು ೩ ಲಕ್ಷದವರೆಗಿದೆ. ಇಂತಹ ಸ್ಥಿತಿಯಲ್ಲಿ ಭಾರತ ಆಕ್ರಮಕ ಕೃತಿ ಮಾಡಿ ಟಿಬೇಟಿಯನ್ನರಿಗೆ ಸಹಾಯ ಮಾಡಬೇಕಿತ್ತು; ಆದರೆ ಆಗ ಭಾರತವೇ ಚೀನಾಗೆ ಭಯಪಟ್ಟು ಸಹಾಯ ಮಾಡಲು ಮುಂದಾಗಲಿಲ್ಲ. ಅಮೇರಿಕಾಗೆ ಚೀನಾದ ‘ಕಮ್ಯುನಿಸಮ್ ಇನ್ನು ಟಿಬೇಟ್, ನೇಪಾಳ ಮತ್ತು ಭಾರತದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗುವುದು, ಎಂದು ಅನಿಸಿತು. ಆದ್ದರಿಂದ ಅಮೇರಿಕಾ ಚೀನಾದ ವಿರುದ್ಧ ಟಿಬೇಟ್‌ನಲ್ಲಿ ಯುದ್ಧ ಮಾಡಲು ನಿರ್ಧರಿಸಿತು. ಅಮೇರಿಕಾ ಭಾರತಕ್ಕೆ, ನಾವು ಟಿಬೇಟ್‌ನ ಖಂಪಾ ಹೋರಾಟದ ಪಂಗಡದವರಿಗೆ ತರಬೇತಿ ನೀಡುತ್ತೇವೆ, ನೀವು ಸ್ಥಳದ ಏರ್ಪಾಡು ಮಾಡಿ, ಎಂದು ವಿನಂತಿಸಿತು. ಆಗ ಭಾರತವು ಸಂಪೂರ್ಣ ‘ನಾನ್ ಅಲಾಯನ್ದಲ್ಲಿ (ಅಹಿಂಸೆಯಲ್ಲಿ) ಸಿಲುಕಿದ್ದ ಕಾರಣ ಅವರಿಗೆ ಭಾರತದಲ್ಲಿ ತರಬೇತಿಗೆ ಅನುಮತಿ ನೀಡಲಿಲ್ಲ. ಕೊನೆಗೆ ಅವರು ಆ ತರಬೇತಿಯನ್ನು ನೇಪಾಳದ ಒಂದು ಎತ್ತರದ ಪ್ರದೇಶದಲ್ಲಿ ಪೂರ್ಣಗೊಳಿಸಿದರು.

೩. ಚೀನಾದಿಂದ ಖಂಪಾ ಸೈನಿಕರ ವಿಶ್ವಾಸಘಾತ !

ಖಂಪಾ ಸೈನಿಕರು ೧ – ೨ ವರ್ಷ ಸ್ವಲ್ಪ ಆಕ್ರಮಕರಾಗಿ ಕೃತಿ ಮಾಡಿದರು. ಚೀನಾ ಅವರನ್ನು ಅಲ್ಲಿಂದ ಹೊರಗೆ ಹಾಕಲು ನೇಪಾಳಕ್ಕೆ ಒತ್ತಡ ಹೇರಿತು. ಅನಂತರ ನೇಪಾಳ ಭಾರತಕ್ಕೆ ಹೇಳಿತು; ಭಾರತ ದಲಾಯಿಲಾಮಾ ಇವರಿಗೆ ಹೇಳಿತು ಹಾಗೂ ಲಾಮಾ ಇವರು ಖಂಪಾಗಳಿಗೆ, “ಯುದ್ಧ ಮಾಡುವುದು ನಮ್ಮ ಕೆಲಸವಲ್ಲ, ನೀವು ಶಸ್ತ್ರಗಳನ್ನು ತ್ಯಜಿಸಿ ನೇಪಾಳಕ್ಕೆ ಶರಣಾಗಿ. ನಂತರ ನಿಮ್ಮನ್ನು ಹಿಂದೆ ಕರೆಸಿಕೊಳ್ಳುತ್ತೇವೆ, ಎಂದು ಹೇಳಿದರು. ಆದರೆ ಆಗ ಕೆಲವರು ಇದನ್ನು ಒಪ್ಪಲಿಲ್ಲ; ಆದರೆ ಅನೇಕರು ಅದಕ್ಕೆ ಒಪ್ಪಿದರು. ಅವರೆಲ್ಲರನ್ನೂ ನೇಪಾಳ ವಶಪಡಿಸಿಕೊಂಡು ಚೀನಾಗೆ ಒಪ್ಪಿಸಿತು; ಆದರೆ ಚೀನಾ ಅವರನ್ನು ಕೊಂದು ಹಾಕಿತು. ಈ ರೀತಿಯಲ್ಲಿ ಖಂಪಾ ಸೈನಿಕರಿಗೆ ವಿಶ್ವಾಸಘಾತ ಮಾಡಲಾಯಿತು. ಅನಂತರ ಅಮೇರಿಕಾದ ಕಾರ್ಯಾಚರಣೆ ನಿಂತಿತು.

೪. ಭಾರತದ ಅಂಜುಬುರುಕತನ!

೧೯೬೨ ರ ಭಾರತ-ಚೀನಾ ಯುದ್ಧದ ನಂತರ ಭಾರತವು ಅಮೇರಿಕಾದ ಸಲಹೆಗನುಸಾರ ‘ಎಸ್.ಎಫ್.ಎಫ್. ಕಮಾಂಡೋ ಫೋರ್ಸ್ ನಿರ್ಮಾಣ ಮಾಡಿತು, ಅದಕ್ಕಾಗಿ ಭಾರತದಲ್ಲಿ ನೆಲೆಸಿರುವ ಟಿಬೇಟಿಯನ್‌ರನ್ನು ಉಪಯೋಗಿಸಲಾಯಿತು. ಇದರಲ್ಲಿ ಎಲ್ಲ ಟಿಬೇಟಿ ಯುವಕರಿದ್ದರು. ಇದರಲ್ಲಿ ಕೆಲವರು ಖಂಪಾಗಳೂ ಇದ್ದರು. ಅವರ ಅಧಿಕಾರಿಗಳು ಭಾರತೀಯ ಸೈನ್ಯದವರಾಗಿದ್ದರು. ಅವರಿಗೆ ಅತ್ಯಂತ ಉತ್ತಮವಾಗಿ ತರಬೇತಿ ನೀಡಲಾಯಿತು. ಅವರ ಸಹಾಯಕ್ಕಾಗಿ ವಾಯುದಳವನ್ನು ಕೂಡ ನೀಡಲಾಯಿತು. ೧೯೬೫-೬೭ ರವರೆಗೆ ಅವರ ಕಾರ್ಯ ಚೆನ್ನಾಗಿ ನಡೆಯುತ್ತಿತ್ತು. ನಂತರ ಎಸ್.ಎಸ್.ಬಿ. ಫೋರ್ಸ್ (ಗಡಿ ಭದ್ರತಾ ದಳ) ಸ್ಥಾಪಿಸಲಾಯಿತು. ಅದರ ಕಾರ್ಯವೂ ಇದೇ ರೀತಿಯದ್ದಾಗಿತ್ತು; ಆದರೆ ಭಾರತ ಚೀನಾಗೆ ಎಷ್ಟು ಹೆದರುತ್ತಿತ್ತೆಂದರೆ ಈ ‘ಎಸ್.ಎಫ್.ಎಫ್. ಮತ್ತು ‘ಎಸ್.ಎಸ್.ಬಿ.ಯ ಉಪಯೋಗವೇ ಆಗುತ್ತಿರಲಿಲ್ಲ. ಅದನ್ನು ಚೀನಾದ ವಿರುದ್ಧ ನಿಲ್ಲಿಸುವ ಕಾರ್ಯವೇ ನಿಂತು ಹೋಗಿತ್ತು.

೫. ವಿವಿಧ ಯುದ್ಧಗಳಲ್ಲಿ ‘ಎಸ್.ಎಫ್.ಎಫ್. ತೋರಿಸಿದ ಅತ್ಯುತ್ತಮ ಪರಾಕ್ರಮ !

ಅ. ೧೯೭೧ ರ ಯುದ್ಧದಲ್ಲಿ ‘ಎಸ್.ಎಫ್.ಎಫ್. ಭಾಗವಹಿಸಿತ್ತು. ಈ ಸೈನಿಕರಿಗೆ ಬೆಟ್ಟಗಳ ಮೇಲೆ ಕಾರ್ಯಾಚರಣೆ ಮಾಡುವ ಕೌಶಲ್ಯವಿತ್ತು. ಆದ್ದರಿಂದ ಅವರನ್ನು ಬಾಂಗ್ಲಾದೇಶದ ಚಿತ್ತಗಾವ್‌ನ ಬೆಟ್ಟದ ಮೇಲೆ ನೇಮಿಸಲಾಯಿತು. ಅಲ್ಲಿಂದ ಅವರಿಗೆ ಪಾಕ್ ಸೈನ್ಯದ ಮೇಲೆ ಆಕ್ರಮಣ ಮಾಡಲು ಹೇಳಲಾಯಿತು. ನಂತರ ಅವರು ಮುಕ್ತಿ ವಾಹಿನಿಯೊಂದಿಗೆ ಅನೇಕ ಕಾರ್ಯಾಚರಣೆಗಳನ್ನು ಮಾಡಿದರು. ಈ ಯುದ್ಧದಲ್ಲಿ ಅದು ಅತ್ಯಂತ ಉತ್ತಮವಾಗಿ ಕಾರ್ಯ ಮಾಡಿತು.

ಆ. ಕಾರ್ಗಿಲ್‌ನ ಯುದ್ಧವನ್ನು ಅತೀ ಎತ್ತರದ ಪ್ರದೇಶದಲ್ಲಿ ಮಾಡಲಾಯಿತು. ಅದರಲ್ಲಿ ಅವರನ್ನು ಉಪಯೋಗಿಸುವ ಪ್ರಯತ್ನವಾಗಿತ್ತು. ಅಲ್ಲಿಯೂ ಅವರು ಪರಾಕ್ರಮವನ್ನು ತೋರಿಸಿದರು.

ಇ. ಕೇಂದ್ರ ಸರಕಾರವು ೧೯೮೪ ರಲ್ಲಿ ‘ಆಪರೇಶನ್ ಬ್ಲೂ ಸ್ಟಾರ್ ಆಂದೋಲನವನ್ನು ಹಮ್ಮಿಕೊಂಡಿತ್ತು. ಈ ಆಂದೋಲನದ ಮೂಲಕ ಸುವರ್ಣ ಮಂದಿರದಲ್ಲಿ ಆಕ್ರಮಕ ಕಾರ್ಯಾಚರಣೆ ಮಾಡಿ ಅಲ್ಲಿ ಅಡಗಿದ್ದ ೭೦೦ ರಿಂದ ೮೦೦ ಉಗ್ರರನ್ನು ಹತ್ಯೆಗೈಯಲಾಯಿತು. ಆಗ ಅಲ್ಲಿ ಅಕಾಲ ತಖ್ತ ಎನ್ನುವ ಮಹತ್ವದ ಭಾಗವಿತ್ತು. ಅದನ್ನು ಬಿಡಿಸಲು ‘ಎಸ್.ಎಫ್.ಎಫ್. ಅನ್ನು ಉಪಯೋಗಿಸಲಾಯಿತು.

ಈ. ಕಾಶ್ಮೀರದಲ್ಲಿ ೧-೨ ಸ್ಥಳಗಳಲ್ಲಿ ಉಗ್ರವಾದ ವಿರೋಧಿ ಅಭಿಯಾನಗಳಲ್ಲಿಯೂ ಅದು ಪಾಲ್ಗೊಂಡಿತ್ತು. ಈ ಟಿಬೇಟಿಯನ್ನರು ಸ್ವತಂತ್ರ ಭಾರತದಲ್ಲಿ ಭಾರತೀಯ ಅಧಿಕಾರಿಗಳ ನೇತೃತ್ವದಲ್ಲಿ ಅತ್ಯಂತ ಉತ್ತಮ ಕಾರ್ಯವನ್ನು ಮಾಡಿದರು.

೬. ಟಿಬೇಟಿಯನ್ನರ ದೃಢವಾದ ವರ್ತನೆಯ ಫಲಿತಾಂಶ !

ಎತ್ತರದ ಸ್ಥಳಗಳಲ್ಲಿ ಯುದ್ಧ ಮಾಡಲು ಟಿಬೇಟಿಯನ್ನರನ್ನು ಕಳುಹಿಸಲಾಗುತ್ತದೆ. ೧೯೫೯ ರ ಅಂದಿನ ಟಿಬೇಟಿಯನ್ನರಿಗೆ ಈಗ ವಯಸ್ಸಾಗಿದೆ. ಸದ್ಯ ‘ಎಸ್.ಎಫ್.ಎಫ್.ನಲ್ಲಿರುವ ಟಿಬೇಟಿಯನ್ನರು ಭಾರತದಲ್ಲಿ ಜನಿಸಿದವರಾಗಿದ್ದಾರೆ. ಹಿಂದಿನ ಟಿಬೇಟಿಯನ್ನರಿಗಿದ್ದ ಜ್ಞಾನ ಈಗಿನವರಿಗಿಲ್ಲ. ಸೌಭಾಗ್ಯದಿಂದ ಅವರನ್ನು ಭಾರತ ಸರಕಾರ ಎತ್ತರದ ಸ್ಥಾನದಲ್ಲಿ ನೆಲೆಗೊಳಿಸಿದ್ದ ರಿಂದ ಅವರು ಅತೀ ತಣ್ಣಗಿನ ಪ್ರದೇಶದಲ್ಲಿ ವಾಸಿಸುತ್ತಾರೆ. ಆದ್ದರಿಂದ ಅವರು ಇನ್ನೂ ಗಟ್ಟಿಮುಟ್ಟಾಗಿದ್ದಾರೆ. ಈಗ ಅವರ ೫ – ೬ ಬೆಟಾಲಿಯನ್‌ಗಳನ್ನು ಮಾಡಲಾಗಿದೆ. ಅವರಿಂದ ಪ್ರಮಾಣ ಮಾಡಿಸಿಕೊಳ್ಳಲಾಗುತ್ತದೆ, ಆದ್ದರಿಂದ ಅವರ ಕಾರ್ಯ ಪ್ರಸಾರ ಮಾಧ್ಯಮ ಗಳಿಗೆ ಸಿಗುವುದಿಲ್ಲ. ಹಾಗಿರುವಾಗ ಈಗ ಭಾರತ ಸರಕಾರ ಅವರ ಹೆಸರನ್ನು ಏಕೆ ಉಚ್ಚರಿಸಿತು ? ಏಕೆಂದರೆ ಭಾರತವು ಚೀನಾಗೆ ಎಚ್ಚರಿಕೆ ನೀಡಿತ್ತು, ನಾವು ನಿಮ್ಮ ವಿರುದ್ಧ ಟಿಬೇಟಿಯನ್ನರನ್ನು ಉಪಯೋಗಿಸಿದ್ದೇವೆ, ಅವರು ನಿಮ್ಮ ಜನರನ್ನು ಕೂಡ ಬಂಧಿಸಿ ದ್ದಾರೆ. ನಿಮ್ಮ ಅನೇಕ ಸೈನಿಕರು ಇದರಲ್ಲಿ ಸಾವನ್ನಪ್ಪಿದ್ದಾರೆ. ಈ ಮಾಹಿತಿ ೫೦ ಲಕ್ಷ ಟಿಬೇಟಿಯನ್ನರ ವರೆಗೆ ತಲುಪಿದೆ, ಅಂದರೆ ಟಿಬೇಟಿನ ಯುವಕರು ಭಾರತೀಯ ಸೈನ್ಯದಲ್ಲಿ ಭಾಗವಹಿಸಿದ್ದಾರೆ ಮತ್ತು ಉತ್ಕೃಷ್ಟ ಪರಾಕ್ರಮವನ್ನು ತೋರಿಸಿದ್ದಾರೆ ! ಈಗ ಅವರನ್ನು ಬೇರೆ ಕಡೆಗಳಲ್ಲಿಯೂ ಉಪಯೋಗಿಸಲಾಗುವುದು. ಒಂದು ವೇಳೆ ಯುದ್ಧವಾದರೆ ಆಕ್ರಮಕ ಕಾರ್ಯಾಚರಣೆಗಾಗಿ ಭಾರತಕ್ಕೆ ಅವರಿಂದ ಖಂಡಿತ ಲಾಭವಾಗಬಹುದು ! – ನಿವೃತ್ತ ಬ್ರಿಗೇಡಿಯರ್ ಹೇಮಂತ ಮಹಾಜನ, ಪುಣೆ