ಆರೋಪಿಯ ವಿರುದ್ಧ ಸೆಕ್ಷನ್ ೩೦೨ ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಿ ! – ಆರೋಗ್ಯ ಸಹಾಯ ಸಮಿತಿಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಲ್ಲಿ ಬೇಡಿಕೆ

ಇಲ್ಲಿಯ ಕರೇಲಿಯಲ್ಲಿ ವಾಸಿಸುತ್ತಿರುವ ಮುಖೇಶ್ ಮಿಶ್ರಾ ಬರ ೩ ವರ್ಷದ ಮಗಳು ಖುಷಿ ಏಳು ದಿನಗಳ ಹಿಂದೆ ತೀರಿಕೊಂಡಳು. ಸ್ಥಳೀಯ ‘ಯುನೈಟೆಡ್ ಮೆಡಿಸಿಟಿ’ ಆಸ್ಪತ್ರೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಬಾಲಕಿ ಪೋಷಕರು ಅದರ ಹಣವನ್ನು ಕಟ್ಟದೇ ಇದ್ದರಿಂದ ಆಕೆಯ ಹೊಟ್ಟೆಗೆ ಹೊಲಿಗೆ ಹಾಕದೇ ಹೊರಗೆ ಕಳಿಸಿದ್ದರಿಂದ ಆಕೆಯು ಮೃತಪಟ್ಟಿದ್ದಳು

ಭದೋಹಿ (ಉತ್ತರ ಪ್ರದೇಶ)ದಲ್ಲಿ ‘ಶಂಕರ್ ಪಾರ್ವತಿ ಬೀಡಿ’ ಹೆಸರಿನಲ್ಲಿ ಉತ್ಪನ್ನಗಳ ಮಾರಾಟ !

ಅನೇಕ ಜನರು ಈ ಬೀಡಿಯನ್ನು ಬಳಸುತ್ತಿದ್ದಾರೆ ಮತ್ತು ಅದರ ಪ್ಯಾಕೆಟ್‌ಗಳನ್ನು ಚರಂಡಿಗಳಲ್ಲಿ ಮತ್ತು ಕಸದಲ್ಲಿ ಎಸೆಯುತ್ತಿದ್ದಾರೆ. ಇದರಿಂದಾಗಿ ದೇವತೆಗಳ ಅವಮಾನ ಆಗುತ್ತಿರುವುದರಿಂದ ಧರ್ಮಪ್ರೇಮಿ ಶಿವ ಯಾದವ್ ಇವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೇವಸ್ಥಾನ ಸರಕಾರಿಕರಣದ ವಿರುದ್ಧ ಧರ್ಮಪ್ರೇಮಿಗಳಿಂದ ಟ್ವಿಟರ್‌ನಲ್ಲಿ #FreeHinduTemples ಹೆಸರಿನ ಹ್ಯಾಶ್‌ಟ್ಯಾಗ್ ಟ್ರೆಂಡ್ !

ಯಾವುದೇ ಮಸೀದಿ ಅಥವಾ ಚರ್ಚ್‌ಅನ್ನು ತಮ್ಮ ನಿಯಂತ್ರಣದಲ್ಲಿ ತೆಗೆದುಕೊಳ್ಳಲು ಸರಕಾರ ಏಕೆ ಧೈರ್ಯ ಮಾಡುವುದಿಲ್ಲ ? ಹಿಂದೂ ದೇವಾಲಯಗಳ ಬಗ್ಗೆ ಮಾತ್ರ ಅಂತಹ ಧೈರ್ಯವನ್ನು ತೋರಿಸುತ್ತಿದೆ ?

‘ಬಾಂಬೆ ಬೇಗಮ್ಸ್’ ವೆಬ್ ಸರಣಿಯ ಪ್ರಸಾರವನ್ನು ನಿಲ್ಲಿಸಲು ನೆಟ್‌ಫ್ಲಿಕ್ಸ್‌ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣೆ ಆಯೋಗದಿಂದ ನೋಟಿಸ್

‘ಬಾಂಬೆ ಬೇಗಮ್ಸ್’ ಎಂಬ ನೆಟ್‌ಫ್ಲಿಕ್ಸ್ ವೆಬ್ ಸರಣಿಯ ಪ್ರಸಾರವನ್ನು ನಿಷೇಧಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್.ಸಿ.ಪಿ.ಸಿ.ಆರ್) ಒತ್ತಾಯಿಸಿದೆ. ವೆಬ್ ಸರಣಿಯನ್ನು ಮಾರ್ಚ್ ೮ ಅಂದರೆ ಅಂತರರಾಷ್ಟ್ರೀಯ ಮಹಿಳಾ ದಿನದಂದು ಪ್ರದರ್ಶಿಸಲಾಯಿತು. ಇದರಲ್ಲಿ ಮಕ್ಕಳ ಲೈಂಗಿಕ ಸಂಬಂಧಗಳನ್ನು ಚಿತ್ರಿಸಲಾಗಿದೆ ಎಂದು ಎನ್.ಸಿ.ಪಿ.ಸಿ.ಆರ್ ಆರೋಪಿಸಿ ನಿಷೇಧಿಸುವಂತೆ ಒತ್ತಾಯಿಸಿದೆ.

ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕರೆತಂದು ಗಲ್ಲಿಗೇರಿಸಿ ಎಂದು ಜಂತರಮಂತರದಲ್ಲಿ ಆಂದೋಲನದ ಮೂಲಕ ಹಿಂದೂ ಸೇನೆಯ ಬೇಡಿಕೆ!

ಅಂತರರಾಷ್ಟ್ರೀಯ ಭಯೋತ್ಪಾದಕ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕರೆತಂದು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಹಿಂದೂ ಸೇನಾದ ಕೆಲವು ಕಾರ್ಯಕರ್ತರು ಮಾರ್ಚ್ ೧೨ ರಂದು ಜಂತರಮಂತರನಲ್ಲಿ ಆಂದೋಲನ ನಡೆಸಿದರು.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರು ಭಕ್ತರಿಗೆ ದೇವಾಲಯಗಳನ್ನು ಒಪ್ಪಿಸುವುದಾಗಿ ನೀಡಿದ ಆಶ್ವಾಸನೆಗೆ ಸ್ವಾಗತ !

ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ. ಸಿ.ಟಿ. ರವಿಯವರು ‘ತಮಿಳುನಾಡಿನಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಎಲ್ಲಾ ದೇವಾಲಯಗಳನ್ನು ಭಕ್ತರಿಗೆ ಒಪ್ಪಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆ.

ಕಾಂಗ್ರೆಸ್‌ನಿಂದ ಭಾಜಪ ಪ್ರವೇಶಿಸಿದ ಮುಸಲ್ಮಾನ ಕಾರ್ಯಕರ್ತ ಆಕ್ರೋಶಿತ ಮತಾಂಧರಿಂದ ಬಹಿಷ್ಕೃತ

ವಕ್ಟ್ ಬೋರ್ಡ್‌ನಲ್ಲಿರುವ ಅಂಗಡಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಬ್ದುಲ್ ಮುನಾಫ್ ಐನಾಪುರಿ ಆರೋಪಿಸುತ್ತಿದ್ದಾರೆ.

ಮುಸ್ಲಿಮರಿಗೆ ಶೇ. ೧೦ ರಷ್ಟು ಮೀಸಲಾತಿ ಕೋರಿ ಮುಸ್ಲಿಂ ಲೀಗ್ ಮನವಿ

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಮೀಸಲಾತಿಯನ್ನು ಹಿಂಬಾಗಿಲಿನ ಮೂಲಕ ಕಬಳಿಸಲು ರಾಜಿಕೀಯ ಬೆಂಬಲದೊಂದಿಗೆ ನಡೆಯುತ್ತಿರುವ ಹುನ್ನಾರವನ್ನು ಮುಸ್ಲಿಂ ಲೀಗ್ ಖಂಡಿಸಿದೆ.

ದೇವಾಲಯಗಳ ಮೇಲಿನ ಆಘಾತಗಳ ವಿರುದ್ಧ ಮಾರ್ಚ್ ೧೪ ರಂದು ‘ದೇವಸ್ಥಾನ-ಸಂಸ್ಕೃತಿ ರಕ್ಷಾ ರಾಷ್ಟ್ರೀಯ ಅಧಿವೇಶನ’; ದೇಶಾದ್ಯಂತದ ದೇವಸ್ಥಾನದ ವಿಶ್ವಸ್ಥರು ಮತ್ತು ಗಣ್ಯರ ಸಹಭಾಗ !

ದೇವಾಲಯಗಳ ಮೇಲೆ ಹೇಗೆ ಆಘಾತಗಳಾಗುತ್ತಿದೆ, ಆಘಾತಗಳ ವಿರುದ್ಧ ಯಶಸ್ವಿಯಾಗಿ ಹೋರಾಡಿದ ಸಂಘಟನೆಗಳು ಮತ್ತು ವಕೀಲರ ಮಾರ್ಗದರ್ಶನ, ಜೊತೆಗೆ ದೇವಾಲಯದ ಸಂಸ್ಕೃತಿಯನ್ನು ರಕ್ಷಿಸುವ ನಿರ್ಣಯಗಳನ್ನು ಅಂಗೀಕರಿಸಿ ಮುಂದಿನ ದಿಕ್ಕನ್ನು ನಿರ್ಧರಿಸುವ ಬಗ್ಗೆ ರಾಷ್ಟ್ರೀಯ ಅಧಿವೇಶನವು ಗಮನವನ್ನು ಕೇಂದ್ರೀಕರಿಸಲಿದೆ.

ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಸ್ಥಳದಲ್ಲಿರುವ ಜ್ಞಾನವಪಿ ಮಸೀದಿಯನ್ನು ತೆರುವುಗೊಳಿಸಿ ಅಲ್ಲಿ ದೇವಾಲಯ ನಿರ್ಮಿಸಲು ಅನುಮತಿ ನೀಡುವಂತೆ ಒತ್ತಾಯ

ಸ್ತುತ ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲು ಮತ್ತು ಅಲ್ಲಿ ಹೊಸ ದೇವಾಲಯವನ್ನು ನಿರ್ಮಿಸಲು ಅನುಮತಿ ಕೋರಿ ವಾರಾಣಸಿಯ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.