ಅಂತಹ ಬೇಡಿಕೆ ಮಾಡುವ ಪ್ರಮೇಯವೇ ಬರಬಾರದು. ದೇಶದ ಅಸ್ತಿತ್ವಕ್ಕೆ ಮಾರಕವಾಗಿರುವ ಇಂತಹ ಭಯೋತ್ಪಾದಕರನ್ನು ಸರ್ಕಾರವೇ ಭಾರತಕ್ಕೆ ತಂದು ಗಲ್ಲಿಗೇರಿಸಬೇಕು!
ನವ ದೆಹಲಿ: ಅಂತರರಾಷ್ಟ್ರೀಯ ಭಯೋತ್ಪಾದಕ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಕರೆತಂದು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಹಿಂದೂ ಸೇನಾದ ಕೆಲವು ಕಾರ್ಯಕರ್ತರು ಮಾರ್ಚ್ ೧೨ ರಂದು ಜಂತರಮಂತರನಲ್ಲಿ ಆಂದೋಲನ ನಡೆಸಿದರು. ೧೨ ಮಾರ್ಚ್ ೧೯೯೩ ರಂದು ಮುಂಬೈ ಸರಣಿ ಬಾಂಬಾಸ್ಫೋಟಗಳ ಹಿಂದಿನ ಸೂತ್ರಧಾರಿ ದಾವೂದ್ ಆಗಿದ್ದರಿಂದ ಈ ಬೇಡಿಕೆ ಮಾಡಲಾಗಿದೆ.
ಹಿಂದೂ ಸೇನಾ ಮುಖ್ಯಸ್ಥ ವಿಷ್ಣು ಗುಪ್ತಾ ಅವರು ಈ ಬಗ್ಗೆ ಹೇಳುತ್ತಾ, ೧೯೯೩ ರ ಸ್ಫೋಟಕ್ಕೆ ಬಲಿಯಾದವರಿಗೆ ೨೮ ವರ್ಷಗಳ ನಂತರವೂ ಇನ್ನೂ ನ್ಯಾಯ ದೊರೆತಿಲ್ಲ. ಅವರಿಗೆ ನ್ಯಾಯ ಒದಗಿಸಲು ದಾವುದ್‌ನನ್ನು ಭಾರತಕ್ಕೆ ಕರೆತಂದು ಗಲ್ಲಿಗೇರಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ, ಎಂದರು.