ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರು ಭಕ್ತರಿಗೆ ದೇವಾಲಯಗಳನ್ನು ಒಪ್ಪಿಸುವುದಾಗಿ ನೀಡಿದ ಆಶ್ವಾಸನೆಗೆ ಸ್ವಾಗತ !

ಬಿಜೆಪಿಯು ತಮಿಳುನಾಡಿನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಸರಕಾರಿಕರಣವಾಗಿರುವ ದೇವಾಲಯಗಳನ್ನು ಮುಕ್ತಗೊಳಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

ಶ್ರೀ. ಸಿ.ಟಿ. ರವಿ

ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ. ಸಿ.ಟಿ. ರವಿಯವರು ‘ತಮಿಳುನಾಡಿನಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಎಲ್ಲಾ ದೇವಾಲಯಗಳನ್ನು ಭಕ್ತರಿಗೆ ಒಪ್ಪಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆ. ಅವರು ‘ದೇವಾಲಯಗಳನ್ನು ಮುಕ್ತಗೊಳಿಸಿ!’, ಅಭಿಯಾನವನ್ನು ಬೆಂಬಲಿಸಿ ಅದರ ಬಗ್ಗೆ ಅವರು ಟ್ವೀಟ್ ಸಹ ಮಾಡಿದ್ದಾರೆ. ಶಾಸಕ ಸಿ.ಟಿ. ರವಿ ಅವರ ಆಶ್ವಾಸನೆಯನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸುತ್ತಿದೆ. ಇದಕ್ಕೂ ಮೊದಲು ಕರ್ನಾಟಕದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ದೇವಾಲಯಗಳನ್ನು ಪುನಃ ಭಕ್ತರಿಗೆ ಹಸ್ತಾಂತರಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆಶ್ವಾಸನೆಯನ್ನು ನೀಡಿದ್ದರು. ಚುನಾವಣಾ ಪ್ರಣಾಳಿಕೆಯಲ್ಲಿಯೂ ಮುದ್ರಿಸಲಾಯಿತು. ಕರ್ನಾಟಕದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದ ನಂತರ ಮೊದಲಿಗೆ ಗೋ ಸಂರಕ್ಷಣಾ ಕಾನೂನು ಜಾರಿಗೆ ತಂದಿತು. ಅದರಂತೆಯೇ, ಕರ್ನಾಟಕದ ಎಲ್ಲಾ ದೇವಾಲಯಗಳ ಸರಕಾರಿಕರಣವನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡು ಎಲ್ಲ ಹಿಂದೂ ಭಕ್ತರ ಶ್ರದ್ಧೆಯನ್ನು ಗೌರವಿಸಬೇಕು ಎಂದು ಕರೆ ನೀಡಿದ ಹಿಂದೂ ಜನಜಾಗೃತಿ ಸಮಿತಿಯ ರಮೇಶ ಶಿಂದೆ ಇವರು ಭಾಜಪದ ಆಡಳಿತವಿರುವ ಇತರ ರಾಜ್ಯಗಳಲ್ಲಿಯೂ ಸರಕಾರಿಕರಣವನ್ನು ರದ್ದುಗೊಳಿಸಿ ಭಕ್ತರ ಸ್ವಾಧೀನಕ್ಕೆ ಒಪ್ಪಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಆಳ್ವಿಕೆಯಲ್ಲಿ, ವಿವಿಧ ರಾಜ್ಯಗಳಲ್ಲಿ ಸಾವಿರಾರು ದೇವಾಲಯಗಳನ್ನು ಸರಕಾರಿಕರಣಗೊಳಿಸಿ ಸರಕಾರವು ತನ್ನ ವಶಕ್ಕೆ ತೆಗೆದುಕೊಂಡಿತು ಮತ್ತು ದೇವಾಲಯದ ಹಣವನ್ನು ಲೂಟಿ ಮಾಡಿ ಹಿಂದೂ ಶ್ರದ್ಧಾಕೇಂದ್ರಗಳ ಮೇಲೆ ದಾಳಿ ಮಾಡಿತು. ಮಾತ್ರವಲ್ಲದೇ ಮಸೀದಿಗಳು ಮತ್ತು ಚರ್ಚುಗಳನ್ನು ಬಿಟ್ಟು ಕೇವಲ ಹಿಂದೂ ದೇವಾಲಯಗಳನ್ನು ಮಾತ್ರ ಸರಕಾರವು ಸರಕಾರಿಕರಣ ಮಾಡಿತು. ಈ ಅನ್ಯಾಯವನ್ನು ಸರಿಪಡಿಸಲು ಬಿಜೆಪಿಯೇ ಪ್ರಾರಂಭಿಸಬೇಕು ಎಂದೂ ಶ್ರೀ. ಶಿಂದೆಯವರು ಹೇಳಿದ್ದಾರೆ.