ಆರೋಪಿಯ ವಿರುದ್ಧ ಸೆಕ್ಷನ್ ೩೦೨ ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಿ ! – ಆರೋಗ್ಯ ಸಹಾಯ ಸಮಿತಿಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಲ್ಲಿ ಬೇಡಿಕೆ

ಪ್ರಯಾಗ್ರಾಜ್ (ಉತ್ತರ ಪ್ರದೇಶ)ದಲ್ಲಿ ವೈದ್ಯರ ಅಮಾನವೀಯ ವರ್ತನೆಯಿಂದ ೩ ವರ್ಷದ ಬಾಲಕಿಯ ಸಾವಿನ ಪ್ರಕರಣ

ಅಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಸಂವೇದನಾಶೀಲತೆ ಮತ್ತು ಮಾನವೀಯತೆ ಇಲ್ಲದ ಆಸ್ಪತ್ರೆಗಳು ಮತ್ತು ವೈದ್ಯರ ವಿರುದ್ಧ ಏಕೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ?

ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ನೀಡುತ್ತಿರುವ ಆರೋಗ್ಯ ಸಹಾಯ ಸಮಿತಿಯ ಕಾರ್ಯಕರ್ತರು

ವಾರಾಣಸಿ (ಉತ್ತರ ಪ್ರದೇಶ) – ಇಲ್ಲಿಯ ಕರೇಲಿಯಲ್ಲಿ ವಾಸಿಸುತ್ತಿರುವ ಮುಖೇಶ್ ಮಿಶ್ರಾ ಬರ ೩ ವರ್ಷದ ಮಗಳು ಖುಷಿ ಏಳು ದಿನಗಳ ಹಿಂದೆ ತೀರಿಕೊಂಡಳು. ಸ್ಥಳೀಯ ‘ಯುನೈಟೆಡ್ ಮೆಡಿಸಿಟಿ’ ಆಸ್ಪತ್ರೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಬಾಲಕಿ ಪೋಷಕರು ಅದರ ಹಣವನ್ನು ಕಟ್ಟದೇ ಇದ್ದರಿಂದ ಆಕೆಯ ಹೊಟ್ಟೆಗೆ ಹೊಲಿಗೆ ಹಾಕದೇ ಹೊರಗೆ ಕಳಿಸಿದ್ದರಿಂದ ಆಕೆಯು ಮೃತಪಟ್ಟಿದ್ದಳು.

ಒಂದು ರೀತಿಯಲ್ಲಿ ಕೊಲೆಯೇ ಆಗಿದೆ. ಇಂದಿನ ವೈದ್ಯಕೀಯ ಸೇವೆಯು ಕಾರ್ಪೊರೇಟ್ ವ್ಯವಹಾರದ ರೀತಿಯಲ್ಲಿ ಆಗಿದ್ದರಿಂದ ಇದರ ದುಷ್ಪರಿಣಾಮವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸಹಾಯ ಸಮಿತಿಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವಾರಾಣಸಿಯ ಜಿಲ್ಲಾಧಿಕಾರಿ ಮೂಲಕ ಮನವಿ ನೀಡಿ, ತಪ್ಪಿತಸ್ಥ ವೈದ್ಯರ ಮತ್ತು ಸಿಬ್ಬಂದಿಗಳ ವಿರುದ್ಧ ಸೆಕ್ಷನ್ ೩೦೨ ರ ಅಡಿಯಲ್ಲಿ ಅಪರಾಧಗಳನ್ನು ತಕ್ಷಣ ನೋಂದಾಯಿಸುವಂತೆ ಒತ್ತಾಯಿಸಿದೆ.

ವಕೀಲರಾದ ಅರುಣ್ ಕುಮಾರ್ ಮೌರ್ಯ ಮತ್ತು ಸ್ವಾತಂತ್ರ ತಿವಾರಿ, ‘ಜಾಗರುಕ್ ಎಕ್ಸ್‌ಪ್ರೆಸ್’ ಪತ್ರಿಕೆಯ ಪತ್ರಕರ್ತ ಶ್ರೀ. ಐ.ಬಿ. ಜೈಸ್ವಾಲ್, ‘ಕಾಶಿವರ್ತಾ’ದ ಪತ್ರಕರ್ತ ಶ್ರೀ. ರಾಜೇಶ್ ಸೇಠ, ಆರೋಗ್ಯ ಸಹಾಯ ಸಮಿತಿಯ ಡಾ. ಅಜಯ ಕುಮಾರ್ ಜಯಸ್ವಾಲ್, ಸನಾತನ ಸಂಸ್ಥೆಯ ಶ್ರೀ. ಗುರುರಾಜ್ ಪ್ರಭು ಮತ್ತು ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯ ಸಂಯೋಜಕ ಶ್ರೀ. ವಿಶ್ವನಾಥ್ ಕುಲಕರ್ಣಿ ಮತ್ತು ಶ್ರೀ. ರಾಜನ್ ಕೇಶರಿ ಉಪಸ್ಥಿತರಿದ್ದರು. ಯುನೈಟೆಡ್ ಮೆಡಿಸಿಟಿ ಆಸ್ಪತ್ರೆಯ ನೋಂದಣಿಯನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.