‘ಸಾವರಕರ ಇವರಿಗೆ ೧೯೨೪ ರಲ್ಲಿ ಬ್ರಿಟೀಶರಿಂದ ಪ್ರತಿ ತಿಂಗಳು ೬೦ ರೂಪಾಯಿ ಏಕೆ ಸಿಗುತ್ತಿತ್ತು ?’

‘೧೯೨೪ ರಲ್ಲಿ ಸಾವರಕರ ಇವರಿಗೆ ಆಂಗ್ಲರಿಂದ ಪ್ರತಿ ತಿಂಗಳು ೬೦ ರೂಪಾಯಿ ಪೆನ್ಶನ್ ಏಕೆ ಸಿಗುತ್ತಿತ್ತು ? ಎಂಬುದರ ಬಗ್ಗೆ ಯಾರಾದರು ಹೇಳಬಹುದೇ ?, ಎಂದು ಕಾಂಗ್ರೆಸ್ ನಾಯಕಿ ಅರ್ಚನಾ ದಾಲಮಿಯಾ ಇವರು ‘ಟ್ವೀಟ್’ ಮಾಡಿ ಪ್ರಶ್ನಿಸಿದ್ದಾರೆ.

ಗಲಭೆಪೀಡಿತ ಪ್ರದೇಶಗಳಲ್ಲಿ ಸಂಚಾರ ನಿಷೇಧ ತೆಗೆಯಿರಿ ಒಂದು ವೇಳೆ ಅಲ್ಲಿ ಮತ್ತೇನಾದರೂ ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ ! – ಮೌಲ್ವಿಗಳಿಂದ ಬೆಂಗಳೂರು ಪೊಲೀಸ್ ಆಯುಕ್ತರಿಗೆ ‘ಮನವಿ’

ಇಲ್ಲಿಯ ಗಲಭೆಯ ಪ್ರಕರಣದಲ್ಲಿ ಶಾಂತಿನಗರದ ಕಾಂಗ್ರೆಸ್‌ನ ಶಾಸಕ ಹ್ಯಾರಿಸ್‌ನೊಂದಿಗೆ ಮೌಲ್ವಿಯು ಪೊಲೀಸ್ ಆಯುಕ್ತ ಕಮಲ ಪಂತ ಇವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಆ ಸಮಯದಲ್ಲಿ ಮೌಲ್ವಿಗಳು ಆರೋಪಿಯ ಸಂದರ್ಭದಲ್ಲಿ ಆಯುಕ್ತರಲ್ಲಿ ‘ಗಲಭೆ ಪೀಡಿತ ಪ್ರದೇಶಗಳಲ್ಲಿ ಸಂಚಾರ ನಿಷೇಧ ತೆಗೆಯಿರಿ. ಅಲ್ಲಿ ಮತ್ತೇನಾದರೂ ಅನಾಹುತವಾದರೆ, ಅದಕ್ಕೆ ನಾವು ಜವಾಬ್ದಾರರಲ್ಲ’, ಎಂದು ಹೇಳಿದ್ದಾರೆ.

ಚೀನಾದ ಕಂಪನಿಗಳಿಂದ ‘ಮೇಡ್ ಇನ್ ಪಿ.ಆರ್.ಸಿ’ ಎಂದು ಬರೆದ ಉತ್ಪನ್ನಗಳು ಭಾರತದಲ್ಲಿ ಮಾರಾಟ

ಚೀನಾದೊಂದಿಗಿನ ಲಡಾಖ ಘರ್ಷಣೆಯ ನಂತರ ದೇಶದಾದ್ಯಂತ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲಾಗುತ್ತಿರುವಾಗ ಈಗ ಚೀನಾವು ಹೊಸ ಉಪಾಯವನ್ನು ಕಂಡುಹಿಡಿದು ಭಾರತೀಯರನ್ನು ಮೋಸಗೊಳಿಸುತ್ತಿರುವುದು ಬೆಳಕಿಗೆ ಬಂದಿದೆ.

ಫ್ರಾನ್ಸ್ ರಾಷ್ಟ್ರಾಧ್ಯಕ್ಷದಿಂದ ಜರ್ಮನಿಯ ಚಾನ್ಸಲರ್‌ಗೆ ಭಾರತೀಯ ಪದ್ದತಿಯಂತೆ ಕೈ ಜೋಡಿಸಿ ‘ನಮಸ್ತೆ’ ಹೇಳುತ್ತಾ ಸ್ವಾಗತಿಸಿದರು !

ಕೊರೋನಾದಿಂದಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದ್ದು ಜನಸಾಮಾನ್ಯರಿಂದ ಹಿಡಿದು ದೇಶದ ಮುಖಂಡರ ತನಕ ಅದನ್ನು ಪಾಲಿಸಲಾಗುತ್ತಿದೆ. ಇದೇ ನಿಟ್ಟಿನಲ್ಲಿ ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ ಇಮನ್ಯುಯಲ್ ಮೆಕ್ರಾನ್ ಇವರು ಜರ್ಮನಿಯ ಚಾನ್ಸೆಲರ ಎಂಜೆಲಾ ಮರ್ಕೆಲ್ ಇವರೊಂದಿಗೆ ಹಸ್ತಲಾಘವ ಮಾಡುವ ಬದಲು ಕೈ ಜೋಡಿಸಿ ನಮಸ್ಕಾರ ಮಾಡಿ ಸ್ವಾಗತಿಸಿದರು.

ಕೊರೋನಾದ ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?

ಸದ್ಯ ಕೊರೋನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಮನೆಯಿಂದ ಹೊರಗೆ ಬರುವುದನ್ನೂ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಪದ್ಧರ್ಮ ಮತ್ತು ಧರ್ಮಶಾಸ್ತ್ರಗಳನ್ನು ಜೊತೆ ಗೂಡಿಸಿ ದೃಶ್ಯಾವಳಿ, ದೀಪಾಲಂಕಾರ ಇತ್ಯಾದಿಗಳನ್ನು ಮಾಡದೇ ಸರಳವಾಗಿ ಮಣ್ಣಿನ ಸಿದ್ಧಿವಿನಾಯಕನ ವ್ರತವನ್ನು ಮುಂದಿನ ಪದ್ಧತಿಯಿಂದ ಮಾಡಬಹುದು.

ಕ್ಷಾಮಪೀಡಿತ ಭಾಗದಲ್ಲಿ ಅಥವಾ ಆಪತ್ಕಾಲದ ಪರಿಸ್ಥಿತಿಯಲ್ಲಿ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಇರುವ ಪರ್ಯಾಯಗಳು !

‘ಯಾವುದಾದರೊಂದು ವರ್ಷ ಬೇಕಾದಷ್ಟು ಮಳೆ ಬೀಳದಿದ್ದರೆ ನದಿ, ಹಳ್ಳ, ಕೊಳ ಸಾಕಷ್ಟು ಒಣಗುತ್ತವೆ. ಇದರಿಂದ ಶ್ರೀ ಗಣೇಶಮೂರ್ತಿಯನ್ನು ಧರ್ಮಶಾಸ್ತ್ರಕ್ಕನುಸಾರ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಲು ಅಡಚಣೆಯಾಗುವ ಸಾಧ್ಯತೆಯಿರುತ್ತದೆ. ಬರಗಾಲದ ಪರಿಸ್ಥಿತಿಯಲ್ಲಿಯೂ ಧಾರ್ಮಿಕ ಕೃತಿಗಳನ್ನು ಅಧ್ಯಾತ್ಮದ ತತ್ತ್ವಗಳಿಗನುಸಾರ ಮಾಡಿದರೆ ಅದು ಧರ್ಮಶಾಸ್ತ್ರಕ್ಕೆ ಸಮ್ಮತವಾಗಿರುತ್ತದೆ.

ಕೊರೊನಾದ ಸಂಕಟಕಾಲದಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬೇಕು ?

ಗಣೇಶೋತ್ಸವವು ಹಿಂದೂಗಳ ಒಂದು ದೊಡ್ಡ ಹಬ್ಬವಾಗಿದೆ. ಶ್ರೀ ಗಣೇಶ ಚತುರ್ಥಿಗೆ, ಹಾಗೆಯೇ ಶ್ರೀ ಗಣೇಶೋತ್ಸವದ ದಿನಗಳಲ್ಲಿ ಗಣೇಶ ತತ್ತ್ವವು ನಿತ್ಯದ ತುಲನೆಯಲ್ಲಿ ಪೃಥ್ವಿಯ ಮೇಲೆ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಸದ್ಯ ಕೊರೋನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಮನೆಯಿಂದ ಹೊರಗೆ ಬರುವುದನ್ನೂ ನಿಷೇಧಿಸಲಾಗಿದೆ.

ಪ್ರಸಕ್ತ ಕೊರೊನಾ ಕಾಲದಲ್ಲಿ ಗಣೇಶಚತುರ್ಥಿಯನ್ನು ಹೇಗೆ ಆಚರಿಸಬೇಕು ? ಎಂಬುದರ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯಿಂದ ಆನ್‌ಲೈನ್‌ನಲ್ಲಿ ಚರ್ಚಾಕೂಟ !

ಗಣೇಶಮೂರ್ತಿ ವಿಸರ್ಜನೆಯಿಂದ ಮಾಲಿನ್ಯವುಂಟಾಗುತ್ತದೆ ಎಂದು ಬೀಜಗಳಿರುವ ಮಣ್ಣಿನ ಗಣೇಶಮೂರ್ತಿ ಇಡುತ್ತಾರೆ. ಹಬ್ಬದ ನಂತರ ನೀರಿನಿಂದ ಆ ಮೂರ್ತಿ ಕರಗಿ ಅದರಿಂದ ಸಸಿಗಳು ಹುಟ್ಟುತ್ತವೆ. ಹೀಗೆ ಅಶಾಸ್ತ್ರೀಯ ಪದ್ಧತಿಯನ್ನು ಧರ್ಮಶಾಸ್ತ್ರದಲ್ಲಿ ಎಂದಿಗೂ ಹೇಳಲಿಲ್ಲ.ನಿಮಗೆ ಗಿಡಗಳನ್ನು ನೆಡಲು ಗಣೇಶಮೂರ್ತಿಯೇ ಏಕೆ ಬೇಕು? ವರ್ಷವಿಡಿ ಗಿಡ ನೆಡುವ ಬಗ್ಗೆ ನೀವು ನಿದ್ರೆ ಮಾಡುತ್ತಿದ್ದಿರೇನು?

ಪ್ರಜಾಪ್ರಭುತ್ವವನ್ನು ವೈಭವೀಕರಿಸುವ ಡಾ. ದಾಭೊಲಕರರ ಕುಟುಂಬದವರಿಗೆ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೇಲೆಯೇ ನಂಬಿಕೆ ಇಲ್ಲ !

ಸರ್ವೋಚ್ಚ ನ್ಯಾಯಾಲಯವು ಸುಶಾಂತಸಿಂಹ ರಾಜಪೂತ್ ಇವರ ಮೃತ್ಯು ಪ್ರಕರಣದ ತನಿಖೆಯನ್ನು ಮುಂಬಯಿ ಪೊಲೀಸರಿಂದ ‘ಸಿಬಿಐ’ಗೆ ಒಪ್ಪಿಸಿದ್ದರಿಂದ ಸಿಡಿಮಿಡಿಗೊಂಡಿದ್ದರಿಂದ ‘ಸಿಬಿಐ’ಗೆ ಗುರಿ ಮಾಡಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ನಾಯಕರು ಹೇಳಿಕೆಯನ್ನು ನೀಡುತ್ತಿದ್ದಾರೆ; ಆದರೆ ದಾಭೊಲಕರ ಪ್ರಕರಣದಲ್ಲಿ ಅವರದ್ದೇ ಗೃಹ ಇಲಾಖೆಯು ಮಾಡಿದ ತಪ್ಪಾದ ತನಿಖೆಯ ಪರಿಣಾಮವನ್ನು ಸನಾತನ ಸಂಸ್ಥೆಯು ಅನುಭವಿಸಬೇಕಾಗುತ್ತಿದೆ.

ರಾಜಸ್ಥಾನ ಉಚ್ಚ ನ್ಯಾಯಾಲಯದ ಆನ್‌ಲೈನ್ ಆಲಿಕೆಯ ಸಮಯದಲ್ಲಿ ಧೂಮಪಾನ ಮಾಡಿದ ಹಿರಿಯ ನ್ಯಾಯವಾದಿ ರಾಜಿವ ಧವನ್

ರಾಜಸ್ಥಾನ ಉಚ್ಚ ನ್ಯಾಯಾಲಯದ ಆನ್‌ಲೈನ್ ಆಲಿಕೆಯ ಸಮಯದಲ್ಲಿ ಧೂಮಪಾನ ಮಾಡುವ ಹಿರಿಯ ನ್ಯಾಯವಾದಿ ರಾಜೀವ ಧವನ್ ಇವರಿಗೆ ನೀಡಲಾಗಿದ್ದ ‘ಹಿರಿಯ’ ಈ ಗೌರವವನ್ನು ಹಿಂಪಡೆಯಬೇಕು, ಎಂಬ ಬೇಡಿಕೆಯ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.