ಹಿಂದೂ ದೇವಾಲಯಗಳ ಸರಕಾರೀಕರಣ, ದೇವಾಲಯದ ಆಸ್ತಿಪಾಸ್ತಿಯನ್ನು ಲೂಟಿ ಮಾಡುವುದು, ದೇವಾಲಯಗಳು ಮತ್ತು ವಿಗ್ರಹಗಳ ವಿಧ್ವಂಸಕ ಕೃತ್ಯಗಳು, ವಿಗ್ರಹಗಳ ಕಳ್ಳತನ, ದೇವಾಲಯ ತೀರ್ಥಕ್ಷೇತ್ರದ ಪರಿಸರದಲ್ಲಿ ಇತರ ಪಂಥದವರಿಂದಾಗುವ ಧರ್ಮಪ್ರಚಾರ ಈ ರೀತಿ ದೇವಾಲಯಗಳ ಮೇಲೆ ಅನೇಕ ರೀತಿಯಲ್ಲಿ ಆಘಾತಗಳಾಗುತ್ತಿವೆ. ಇದರ ವಿರುದ್ಧ, ದೇಶಾದ್ಯಂತದ ಎಲ್ಲಾ ದೇವಾಲಯದ ವಿಶ್ವಸ್ಥರು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಒಂದುಗೂಡಿಸುವ ಮೂಲಕ ಮಂದಿರ ಸಂಸ್ಕೃತಿಯನ್ನು ರಕ್ಷಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ ವತಿಯಿಂದ ಮಾರ್ಚ್ ೧೪ ರಂದು ಸಂಜೆ ೪.೩೦ ರಿಂದ ಸಂಜೆ ೭ ರವರೆಗೆ ಆನ್‌ಲೈನ್ ನಲ್ಲಿ ‘ಮಂದಿರ ಸಂಸ್ಕೃತಿ ರಕ್ಷಾ ರಾಷ್ಟ್ರೀಯ ಅಧಿವೇಶನ ೨೦೨೧’ ನಡೆಯಲಿದೆ. ಇದರಲ್ಲಿ ಹೆಚ್ಚು ಹೆಚ್ಚು ದೇವಸ್ಥಾನಗಳ ವಿಶ್ವಸ್ಥರು ಭಾಗವಹಿಸಬೇಕು ಎಂದು ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವಕ್ತಾರ ಶ್ರೀ. ಸುನೀಲ ಘನವಟ ಇವರು ಕರೆ ನೀಡಿದ್ದಾರೆ.
ದೇವಾಲಯಗಳ ಮೇಲೆ ಹೇಗೆ ಆಘಾತಗಳಾಗುತ್ತಿದೆ, ಆಘಾತಗಳ ವಿರುದ್ಧ ಯಶಸ್ವಿಯಾಗಿ ಹೋರಾಡಿದ ಸಂಘಟನೆಗಳು ಮತ್ತು ವಕೀಲರ ಮಾರ್ಗದರ್ಶನ, ಜೊತೆಗೆ ದೇವಾಲಯದ ಸಂಸ್ಕೃತಿಯನ್ನು ರಕ್ಷಿಸುವ ನಿರ್ಣಯಗಳನ್ನು ಅಂಗೀಕರಿಸಿ ಮುಂದಿನ ದಿಕ್ಕನ್ನು ನಿರ್ಧರಿಸುವ ಬಗ್ಗೆ ರಾಷ್ಟ್ರೀಯ ಅಧಿವೇಶನವು ಗಮನವನ್ನು ಕೇಂದ್ರೀಕರಿಸಲಿದೆ. ಪಾಕಿಸ್ತಾನದ ದೇವಾಲಯಗಳ ಸ್ಥಿತಿಯನ್ನು ಸಿಂಧಿ ಸಮಾಜದ ಪೂ. ಸಂತೋಷ ಮಹಾರಾಜ, ಕಾಶ್ಮೀರದ ದೇವಾಲಯಗಳ ಕುರಿತು ಜಮ್ಮುವಿನ ವಕೀಲ ಅಂಕುರ್ ಶರ್ಮಾ, ಕರ್ನಾಟಕದ ದೇವಸ್ಥಾನಗಳ ಬಗ್ಗೆ ಶ್ರೀ ರಾಮಸೇನಾ ಅಧ್ಯಕ್ಷ ಶ್ರೀ.ಪ್ರಮೋದ ಮುತಾಲಿಕ್, ಮಹಾರಾಷ್ಟ್ರದ ದೇವಾಲಯಗಳ ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ, ಹಾಗೆಯೇ ಒಡಿಶಾ ರಾಜ್ಯದಲ್ಲಿ ವಿಗ್ರಹಗಳ ಕಳ್ಳತನ, ಆಂಧ್ರಪ್ರದೇಶದಲ್ಲಿ ವಿಗ್ರಹಗಳ ನಾಶ, ಕೇರಳದ ದೇವಾಲಯಗಳ ಪಾವಿತ್ರ್ಯದ ರಕ್ಷಣೆ ಹಾಗೂ ಇತರ ಸಮಸ್ಯೆಗಳ ಕುರಿತು ವಿವಿಧ ವಕ್ತಾರರು ಸಂಬೋಧಿಸಲಿದ್ದಾರೆ.
ಸಂಜೆ ೪.೩೦ ಕ್ಕೆ ಈ ಕಾರ್ಯಕ್ರಮವನ್ನು Youtube.com/HinduJagruti ಈ ಚಾನೆಲ್ ನಲ್ಲಿ ಹಾಗೂ ಫೇಸಬುಕ್ ನ Facebook.com/HinduAdhiveshan ಮತ್ತು ಟ್ವಟರ್‌ನ Twitter.com/HinduJagrutiOrg ಈ ಮಾಧ್ಯಮದಿಂದ ನೇರ ಪ್ರಸಾರ ಮಾಡಲಾಗುವುದು. ದೇಶಾದ್ಯಂತದ ಎಲ್ಲಾ ದೇವಾಲಯಗಳ ವಿಶ್ವಸ್ಥರು, ಪುರೋಹಿತರು ಮತ್ತು ದೇವಾಲಯಗಳಿಗಾಗಿ ಹೋರಾಡುವ ನ್ಯಾಯವಾದಿಗಳು ತಪ್ಪದೇ ಈ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು ಮತ್ತು ಅವರು 7020383264 ಗೆ ಕರೆ ಮಾಡಿ ಶ್ರೀ. ಘನವಟ್ ಇವರನ್ನು ಸಂಪರ್ಕಿಸಬೇಕು ಎಂದು ಕರೆ ನೀಡಲಾಗಿದೆ.