‘ಬಾಂಬೆ ಬೇಗಮ್ಸ್’ ವೆಬ್ ಸರಣಿಯ ಪ್ರಸಾರವನ್ನು ನಿಲ್ಲಿಸಲು ನೆಟ್‌ಫ್ಲಿಕ್ಸ್‌ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣೆ ಆಯೋಗದಿಂದ ನೋಟಿಸ್

ವೆಬ್ ಸರಣಿಯನ್ನು ಮಾರ್ಚ್ ೮ ಅಂದರೆ ಅಂತರರಾಷ್ಟ್ರೀಯ ಮಹಿಳಾ ದಿನದಂದು ಪ್ರದರ್ಶಿಸಲಾಯಿತು. ಇದರಲ್ಲಿ ಮಕ್ಕಳ ಲೈಂಗಿಕ ಸಂಬಂಧಗಳನ್ನು ಚಿತ್ರಿಸಲಾಗಿದೆ ಎಂದು ಎನ್.ಸಿ.ಪಿ.ಸಿ.ಆರ್ ಆರೋಪಿಸಿ ನಿಷೇಧಿಸುವಂತೆ ಒತ್ತಾಯಿಸಿದೆ. ‘ಈ ವೆಬ್ ಸರಣಿಯನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿ’ ಎಂದು ನೆಟ್‌ಫ್ಲಿಕ್ಸ್‌ಗೆ ನೋಟಿಸ್ ಕಳುಹಿಸಲಾಗಿದೆ.

‘ಶಬರಿಮಲಾ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡುವ ನಿರ್ಧಾರ ಬೇಡವಾಗಿತ್ತು’ (ಅಂತೆ)!

‘ಶಬರಿಮಲಾ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ೨೦೧೮ ರಲ್ಲಿ ನಡೆದ ಘಟನೆ ಒಂದು ಮುಚ್ಚಿದ ಅಧ್ಯಾಯವಾಗಿದೆ. ಹೀಗಾಗಬಾರದಿತ್ತು’ ಎಂಬ ಮಾತುಗಳಿಂದ ರಾಜ್ಯದ ಸಿಪಿಐ(ಎಂ) ಮುಖಂಡ ಮತ್ತು ಸರಕಾರದ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಘಟನೆಯ ಹೊಣೆ ಹೊತ್ತಿರುವ ಸಂದೇಶ ಬಂದ ‘ಜೈಶ್-ಉಲ್-ಹಿಂದ್’ ಹೆಸರಿನ ಟೆಲಿಗ್ರಾಮ್ ಖಾತೆಯ ಮೂಲ ತಿಹಾರ್ ಜೈಲು !

ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ನಡೆಸಿದ ತನಿಖೆಯಲ್ಲಿ ತಿಹಾರ್ ಜೈಲಿನಿಂದ ಟೆಲಿಗ್ರಾಮ್ ನಿಂದು ಸುಳ್ಳು ಸಂದೇಶ ಬಂದಿರುವುದು ತಿಳಿದುಬಂದಿದೆ. ಇದರ ನಂತರ ದೆಹಲಿ ಪೊಲೀಸರಿಗೆ ಈ ವಿಚಾರವನ್ನು ಮಂಡಿಸಿದಾಗ ೩ ಸ್ಮಾರ್ಟ್‍ಫೋನ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.

ಮಹಾಶಿವರಾತ್ರಿ ದಿನದಂದು ತಾಜ್‍ಮಹಲ್‍ನಲ್ಲಿ ಹಿಂದೂ ಮಹಾಸಭೆಯಿಂದ ಶಿವ ಪೂಜೆ

ಹಿಂದೂ ಮಹಾಸಭಾದ ರಾಜ್ಯ ಅಧ್ಯಕ್ಷೆ ಮೀನಾ ದಿವಾಕರ್ ಅವರು ಸೆಂಟ್ರಲ್ ಟ್ಯಾಂಕ್‍ನ ಡಯಾನಾ ಬೆಂಚ್‍ಗೆ ಹೋಗಿ ವಿಧಿವತ್ತಾಗಿ ಆರತಿ ಮಾಡಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ ಅವರನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯವರು ಬಂಧಿಸಿದರು.

೨೦೧೮ ರ ತುಲನೆಯಲ್ಲಿ ೨೦೧೯ ರಲ್ಲಿ ಗಲಭೆ, ಕೊಲೆ, ಅತ್ಯಾಚಾರ ಇತ್ಯಾದಿ ಘಟನೆಗಳು ಸ್ವಲ್ಪ ಕಡಿಮೆಯಾಗಿವೆ ! – ಕೇಂದ್ರ ಸರ್ಕಾರದ ಹೇಳಿಕೆ

ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆಯ ಪ್ರಕಾರ, ೨೦೧೯ ರಲ್ಲಿ ದೇಶದಲ್ಲಿ ಗಲಭೆಗಳು, ಕೊಲೆಗಳು ಮತ್ತು ಅತ್ಯಾಚಾರಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ನಿತ್ಯಾನಂದ್ ರಾಯ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಭಾರತವು ಕೊರೋನಾ ಲಸಿಕೆಯ ನಾಲ್ಕುವರೆ ಕೋಟಿ ಡೋಸ್ ಪೂರೈಸಲಿದೆ

‘ದ ಗ್ಲೋಬಲ್ ಅಲೈನ್ಸ್ ಫಾರ್ ವ್ಯಾಕ್ಸಿನ್ ಅಂಡ್ ಇಮ್ಯುನೈಜೇಶನ್ (ಜಿಎವಿಐ) ಈ ಸಂಘಟನೆಯ ಅಡಿಯಲ್ಲಿ ಭಾರತವು ಪಾಕಿಸ್ತಾನಕ್ಕೆ ಕೊರೋನಾ ಲಸಿಕೆಯ ೪ ಕೋಟಿ ೫೦ ಲಕ್ಷ ಡೋಸ್ ಪೂರೈಸಲಿದೆ.

ಅಮೇರಿಕಾದ ‘ಫ್ರೀಡಂ ಹೌಸ್’ ಸಂಸ್ಥೆಯಿಂದ ಭಾರತದ ನಕ್ಷೆಯ ವಿಕೃತಿ

‘ಫ್ರೀಡಂ ಹೌಸ್’ ಭಾರತದ ನಕ್ಷೆಯನ್ನು ವಿರೂಪಗೊಳಿಸುವುದರಿಂದ ಭಾರತದ ಅವಮಾನ ಆಗಿದೆ ಮತ್ತು ಎಲ್ಲಾ ದೇಶಭಕ್ತ ಭಾರತೀಯರ ಭಾವನೆಗಳನ್ನು ಘಾಸಿಗೊಳಿಸಿದೆ. ಆದ್ದರಿಂದ, ಈ ನಕ್ಷೆಯನ್ನು ಕೂಡಲೇ ತೆಗೆದುಹಾಕಿ ಸೂಕ್ತ ನಕ್ಷೆಯನ್ನು ಪ್ರಕಟಿಸಲು ಭಾರತ ಸರಕಾರವು ಫ್ರೀಡಂ ಹೌಸ್‍ಗೆ ಪತ್ರ ಬರೆಯಬೇಕು.

ಚೀನಾದ ರಾಷ್ಟ್ರಪತಿಯಿಂದ ಸೈನ್ಯಕ್ಕೆ ಯುದ್ಧದ ಸಿದ್ಧತೆಯನ್ನು ಹೆಚ್ಚಿಸುವಂತೆ ಕರೆ !

ಚೀನಾದ ವಿಸ್ತರಣಾ ಮನೋಭಾವವನ್ನು ಭಾರತ, ಅಮೇರಿಕಾ ಮತ್ತು ಅದರ ನೆರೆಹೊರೆಯವರು ಪ್ರಶ್ನಿಸಿದ್ದಾರೆ ಆದ್ದರಿಂದ ಚೀನಾದ ರಾಷ್ಟ್ರಪತಿ ಕ್ಸಿ ಜಿನ್‍ಪಿಂಗ್ ಅಂತಹ ಕರೆಯನ್ನು ನೀಡಬೇಕಾಗಿ ಬಂದಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಅತ್ತೆ ಮನೆಯಲ್ಲಿ ಮಹಿಳೆಗೆ ನೀಡಲಾಗುವ ಕಿರುಕುಳಕ್ಕೆ ಗಂಡನೇ ಕಾರಣಕರ್ತ ! – ಸರ್ವೋಚ್ಚ ನ್ಯಾಯಾಲಯ

ಭಾರತದಲ್ಲಿ ಚಾಲತಿಯಲ್ಲಿರುವ ಪದ್ಧತಿಯ ಪ್ರಕಾರ, ಮದುವೆಯ ನಂತರ ಹೆಂಡತಿ ತನ್ನ ಗಂಡನ ಮನೆಯಲ್ಲಿ ಉಳಿಯಲು ಹೋಗುತ್ತಾಳೆ; ಆದರೆ ಮಹಿಳೆಗೆ ಅತ್ತೆಯ ಕುಟುಂಬದವರು ಕಿರುಕುಳ ನೀಡುತ್ತಿದ್ದಲ್ಲಿ, ಆಕೆಗೆ ಆದ ವೇದನೆಗೆ ಪತಿಯೇ ಕಾರಣಕರ್ತ ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ವಿಚಾರಣೆಯಲ್ಲಿ ತಿಳಿಸಿದೆ.

ಮುಂದಿನ ೫ ದಿನಗಳಲ್ಲಿ ಹರಿದ್ವಾರ ಕುಂಭಮೇಳಕ್ಕೆ ಯೋಗ್ಯ ಸ್ಥಾನ ಮತ್ತು ಸ್ಥಳವನ್ನು ನೀಡಿ ಗೌರವಿಸಿ !

ಹಿಂದೂಗಳ ಅತ್ಯುನ್ನತ ಧರ್ಮಗುರುಗಳಿಗೆ ಇಂತಹ ಬೇಡಿಕೆಯನ್ನು ಮಾಡಬೇಕಾಗಿ ಬರುವುದು ನಾಚಿಕೆಗೇಡು ! ಬಿಜೆಪಿ ರಾಜ್ಯದಲ್ಲಿ ಇಂತಹ ಬೇಡಿಕೆ ಇಡುವ ಸಮಯ ಬರುವುದು ಇದು ಹಿಂದೂಗಳಿಗೆ ಅಪೇಕ್ಷಿತವಲ್ಲ !