ಕಾಂಗ್ರೆಸ್‌ನಿಂದ ಭಾಜಪ ಪ್ರವೇಶಿಸಿದ ಮುಸಲ್ಮಾನ ಕಾರ್ಯಕರ್ತ ಆಕ್ರೋಶಿತ ಮತಾಂಧರಿಂದ ಬಹಿಷ್ಕೃತ

ಇದುವೇ ಮತಾಂಧರ ಸರ್ವಧರ್ಮಸಮಭಾವ ಮತ್ತು ಸಂವಿಧಾನದ ಬಗೆಗಿನ ಗೌರವ! ಈ ಬಗ್ಗೆ ಪ್ರಗತಿ (ಅಧೋಗತಿ)ಪರರು ಮತ್ತು ಜಾತ್ಯತೀತವಾದಿಗಳು ತುಟಿ ಪಿಟಕ್ಕೆನುವುದಿಲ್ಲ!

ಹುಬ್ಬಳ್ಳಿ: ಅಬ್ದುಲ ಮುನಾಥ ಐನಾಪುರಿ ಎಂಬುವವರು ಹತ್ತು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಆದರೆ ಇದೇ ಮಾರ್ಚ್ ೭ ರಂದು ತನ್ನ ಬೆಂಬಲಿಗರೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಸಮ್ಮುಖ ಬಿಜೆಪಿಗೆ ಸೇರ್ಪಡೆಯಾದರು. ಇದರಿಂದ ಆಕ್ರೋಶಗೊಂಡ ಜಮಾತ್ ಮುಖಂಡರು ಅಬ್ದುಲ ಮುನಾಥ ಐನಾಪುರಿಯನ್ನು ತಮ್ಮ ಸಮಾಜದಿಂದಲೇ ಬಹಿಷ್ಕಾರ ಮಾಡಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ವಕ್ಟ್ ಬೋರ್ಡ್‌ನಲ್ಲಿರುವ ಅಂಗಡಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಅಲ್ಲದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಬ್ದುಲ್ ಮುನಾಫ್ ಐನಾಪುರಿ ಆರೋಪಿಸುತ್ತಿದ್ದಾರೆ. ಈ ಘಟನೆಯಿಂದನೊಂದ ಐನಾಪುರಿ ಇವರ ಪತ್ನಿ ಆಸ್ಪತ್ರೆ ಸೇರಿದ್ದಾರೆ. ಐನಾಪುರಿ ಕುಟುಂಬವದರ ಜೊತೆ ಅಕ್ಕಪಕ್ಕದ ಜನ ಯಾರು ಮಾತನಾಡುತ್ತಿಲ್ಲ. ಅಲ್ಲದೇ ಹುಬ್ಬಳ್ಳಿಯ ಬಡಾ ಜಮಾತ್‌ನಿಂದಲೂ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಐನಾಪುರಿ ತಿಳಿಸಿದ್ದಾರೆ.

‘ನಾನು ಕಳೆದ ೧೦ ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದರೂ ಅದನ್ನು ನೋಂದಾಯಿಸಲಾಗಿಲ್ಲ’, ಎಂದು ಐನಾಪುರಿ ಹೇಳಿದರು. ಕಾಂಗ್ರೆಸ್ ಮುಖ್ಯಸ್ಥರ ವರ್ತನೆಯಿಂದ ಬೇಸತ್ತು ನಾನು ಬಿಜೆಪಿ ಸೇರಿದ್ದೇನೆ. ಅದು ಎಷ್ಟೇ ನೋವುಂಟು ಮಾಡಿದರೂ ನಾನು ಹಿಂದೆ ಸರಿಯುವುದಿಲ್ಲ. ೮ ದಿನಗಳಲ್ಲಿ ಅಂಗಡಿಯನ್ನು ಖಾಲಿ ಮಾಡುವಂತೆ ವಕ್ಫ್ ಸಮಿತಿ ನೋಟಿಸ್ ನೀಡಿದ್ದರೂ, ನಾನು ಅದನ್ನು ಖಾಲಿ ಮಾಡುವುದಿಲ್ಲ’. ಈ ಬಗ್ಗೆ ಅವರು ವಕ್ಫ್ ಸಮಿತಿಗೆ ಪತ್ರ ಬರೆಯಲಿದ್ದಾರೆ, ಎಂದಿದ್ದಾರೆ.